ಎಷ್ಟು ಜನ ಬೇಕಾದ್ರೂ ಬನ್ನಿ ಜಿಮ್ ರವಿ ಹೋಟೆಲ್ ನಲ್ಲಿ ಫ್ರೀ ಊಟ,‘ಜನಸೇವೆ’ ತನ್ನೊಳಗಿನ ಸೂತ್ರ..‘ಜಿಮ್ ರವಿ’ ಬಗ್ಗೆ ನಿಮಗೆಷ್ಟು ಗೊತ್ತು?

“ಬೆಂಗಳೂರಿಗೆ ಬಂದಾಗ ತಿನ್ನೋಕೆ ಕಾಸು ಇರಲಿಲ್ಲ. ಬಡತನ ಕಿತ್ತು ತಿಂತಾ ಇತ್ತು. ಈಗ ಸದೃಢನಾಗಿದ್ದೇನೆ. ಸ್ಥಿತಿವಂತನಿದ್ದೇನೆ. ಹಾಗಾಗಿ ಜನಸೇವೆ ಮಾಡುತ್ತಿದ್ದೇನೆ..” ಇದು ನಟ ಜಿಮ್ ರವಿ ಅವರ ಮನದಾಳದ ಮಾತು. 

‘ನಾನು ಒಬ್ಬ ಬಡ ಕುಟುಂಬದಿಂದ ಬಂದಂತಹ ವ್ಯಕ್ತಿ. ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವಾರು ಕ್ಷೇತ್ರಗಳಿಂದ ಉನ್ನತ ಬಾಡಿ ಬಿಲ್ಡಿಂಗ್ ಸಂಸ್ಥೆಗಳು ಹಾಗೂ ಬೇರೆ ಬೇರೆ ಸಂಸ್ಥೆಗಳಿಂದ ನೂರಾರು ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿದೆ. ರಾಜ್ಯದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ, ರಾಜ್ಯ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ದಸರಾ ಪ್ರಶಸ್ತಿ, ಶ್ರೀ ಕೆಂಪೇಗೌಡ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳೂ ಸಿಕ್ಕಿವೆ. ಪ್ರಸ್ತುತ ಆದಾಯ ತೆರಿಗೆ ಇನ್ಸ್ ಪೆಕ್ಟರ್ (INCOME TAX INSPECTOR) ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ನಡುವೆ 150 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇನೆ ನಾಯಕ-ನಟನಾಗಿ ಮತ್ತು ಖಳ ನಾಯಕನಾಗಿ ಇನ್ನು ಹೆಚ್ಚು ಸಿನಿಮಾಗಳನ್ನು ಮಾಡಿದ್ದೇನೆ ನನ್ನ ಎಲ್ಲಾ ಸಾಧನೆಗಳಿಗೆ ಒಂದೇ ಗುರಿ ಸಾಧನೆ ಮಾಡಿರುವ ಉದ್ದೇಶದ ಹಿಂದೆ ನನ್ನ ಬಡತನ ಇತ್ತು ಕೆಸರಲ್ಲಿ ಕಮಲ ಹುಟ್ಟೋ ಹಾಗೆ ನನ್ನ ಸಾಧನೆಗೆ ನನ್ನ ಬಡತನ ಯಾವತ್ತೂ ಅಡ್ಡಿಯಾಗಿಲ್ಲ.

ಎ.ವಿ.ರವಿ ಎಂಬುದು ಮೂಲ ಹೆಸರು. ಬಾಲ್ಯದಿಂದಲೂ ಬಾಸ್ಕೆಟ್ ಬಾಲ್, ಕ್ರಿಕೆಟ್, ಅಥ್ಲೆಟಿಕ್ಸ್, ಕಬ್ಬಡಿ, ಕುಸ್ತಿ, ವೇಟ್ ಲಿಫ್ಟಿಂಗ್ ಎಲ್ಲಾ ಕ್ರೀಡೆಗಳಲ್ಲಿ ಸಹ ಭಾಗವಹಿಸಿದ್ದೇನೆ. ಈ ಕ್ರೀಡಾ ಜೀವನದಲ್ಲಿ 300ಕ್ಕೂ ಹೆಚ್ಚು ಚಿನ್ನದ ಪದಕಗಳು ಬಂದಿದೆ. ಹಾಗೆಯೇ ದೇಹದಾರ್ಢ್ಯದಲ್ಲಿ 100ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಪಡೆದಿರುತ್ತೇನೆ. ಒಂದು ಜಿಮ್ ಆರಂಭಿಸಲು ಈ ಚಿನ್ನದ ಪದಕಗಳು ಹಾಗೂ ಮನೆಯ ಪತ್ರವನ್ನು ಅಡವಿಟ್ಟು ಕೆಎಫ್‌ಸಿಸಿ (KFCC) ಲೋನ್ ತಗೊಂಡಿದ್ದೇನೆ. ಬೆಂಗಳೂರಿನಲ್ಲಿ ಒಂದು ಜಿಮ್ ಪ್ರಾರಂಭ ಮಾಡಬೇಕು ಅನ್ಕೊಂಡು ಜಿಮ್ ಸ್ಥಾಪನೆ ಮಾಡಿದೆ. ನಂತರ ನಾನೇ ಕೋಚ್‌ ಮಾಡ್ತಿನಿ ನಾನೇ ಬಡ್ಡಿ ಹಣ ಕಟ್ಟುತ್ತಿದ್ದೇನೆ. ಹಾಗಾಗಿ ಇದು ನನ್ನ ಜಿಮ್ ಎಂದೇ ಗುರುತಾಗಿದೆ. ಅದರಿಂದಾಗಿ ನನ್ನನ್ನೂ ಜನ ಜಿಮ್ ರವಿ ಎಂದೇ ಕರೆಯಲಾರಂಭಿಸಿದರು.

ಅನ್ನಪೂರ್ಣೇಶ್ವರಿ ಮೆಸ್ ಮೂಲಕ ಬಡವರಿಗೆ, ನಿರ್ಗತಿಕರಿಗೆ, ವಿದ್ಯಾರ್ಥಿಗಳಿಗೆ ಉಚಿತ ಊಟ ನೀಡುತ್ತಿದ್ದೀರಂತೆ..!

ಹೌದು, ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಒಂದು ಹೊತ್ತು ಊಟಕ್ಕೂ ಕಷ್ಟ ಇತ್ತು. ಆ ರೀತಿಯ ಪರಿಸ್ಥಿತಿ ಬಡಪಾಯಿಗಳಿಗೆ ಎದುರಾಗಬಾರದೆಂಬ ಕಾರಣಕ್ಕಾಗಿ ಶಕ್ತಿಯನುಸಾರ ಈಗ ಒಂದಷ್ಟು ಜನರಿಗೆ ಊಟ ಹಾಕ್ತಾ ಇದ್ದೇನೆ.  ಸಮಾಜದಲ್ಲಿ ಪಡ್ಕೊಂಡಿದ್ದನ್ನು ಸಮಾಜಕ್ಕೆ ವಾಪಸ್ಸು ಕೊಡಬೇಕು ಎಂಬ ಹಿರಿಯರ ಮಾತಿನಂತೆ ಸ್ನೇಹಿತರ ಜೊತೆ ಸೇರಿಕೊಂಡು ‘ಅನ್ನಪೂರ್ಣೇಶ್ವರಿ ಮೆಸ್’ಮೂಲಕ ಈ ಕಾರ್ಯವನ್ನು ಮಾಡುತ್ತಿದ್ದೇವೆ.

You might also like

Comments are closed.