ಕೈ ಇಲ್ಲದೇನೆ ಸೈಕಲ್ನಲ್ಲಿ ತಿಂಗಳಿಗೆ 30 ಸಾವಿರ ದುಡಿಯುವ ಝೋ-ಮಾಟೋ ಹುಡುಗನ ಬದುಕಿನ ಕಥೆ ನೋಡಿ…

ಜೀವನದಲ್ಲಿ ಸಾಧನೆ ಮಾಡಬೇಕು ಎಂದುಕೊಂಡರೆ ಹೇಗೆ ಬೇಕಾದರೂ ಸಾಧನೆ ಮಾಡಬಹುದು . ಆದರೆ ಎಲ್ಲರಿಗೂ ಕೂಡ ಈ ಮನಸ್ಥಿತಿ ಇರುವುದಿಲ್ಲ ಬಿಡಿ ಒಂದು ವೇಳೆ ಮನಸ್ಸಿದರೂ ಕೂಡ ಅದು ಕೇವಲ ಮನಸ್ಸಿನಲ್ಲಿಯೇ ಇರುತ್ತದೆ.

ಕೆಲವರಿಗೆ ಎಲ್ಲಾ ಇರುತ್ತದೆ ಆದರೂ ಕೂಡ ಅವರು ಸೋಮಾರಿಗಳಾಗಿ ಇರುತ್ತಾರೆ . ಅದೇನೋ ಹೇಳ್ತಾರಲ್ಲ ಅಲ್ಲಿದ್ದವರಿಗೆ ಕಡಲೆ ಇಲ್ಲ ಕಡಲೆ ಇದ್ದವರಿಗೆ ಹಲ್ಲಿಲ್ಲ ಅನ್ನೋತರ . ಎಲ್ಲ ಇರೋರು ಏನು ಮಾಡಿದೆ ಸೋಮಾರಿಗಳಾಗಿ ಜೀವನ ಅನ್ನ ಟೈಂಪಾಸ್ ಮಾಡ್ಕೊಂಡು ಇದ್ಬಿಡ್ತಾರೆ.

ಕೆಲವರು ಜೀವನದಲ್ಲಿ ಸಾಧನೆ ಮಾಡಬೇಕು ಜೀವನದಲ್ಲಿ ಆದರ್ಶ ಬದುಕನ್ನು ರೂಪಿಸಿಕೊಳ್ಳಬೇಕು, ನನ್ನ ಬದುಕು ನಾಲ್ಕು ಜನರಿಗೆ ಮಾದರಿಯಾಗಬೇಕು ಎನ್ನುವವರಿಗೆ ಮಾತ್ರ ದೇವರು ಏನಾದರೂ ಒಂದು ಹೀನತೆಯನ್ನು ಕೊಟ್ಟಿರುತ್ತಾನೆ.

ಆದರೆ ಭರವಸೆಯಂತ ಒಂದು ಇದೆಯಲ್ಲ ಅದು ಇದ್ದರೆ ಮನುಷ್ಯ ಏನು ಬೇಕಾದರೂ ಮಾಡಬಹುದು . ನಾನು ಬದುಕುತ್ತೇನೆ ಎಷ್ಟೇ ಕಷ್ಟ ಬಂದರೂ ಒಬ್ಬನೇ ಎದುರಿಸಿ ನಿಲ್ಲುತ್ತೇನೆ ಆತ್ಮವಿಶ್ವಾಸ ಬಂದುಬಿಟ್ಟರೆ ಆ ವ್ಯಕ್ತಿ ನಿಜವಾಗಿಯೂ ಜೀವನದಲ್ಲಿ ಸಾಧನೆ ಮಾಡಬಹುದು.

ಅದಕ್ಕೆ ಈಗ ಒಂದೊಳ್ಳೆ ನಿದರ್ಶನವೂ ಇದೆ ಆ ಹುಡುಗ ನನ್ನ ನೋಡಿ ಸೈಕಲ್ ಓಡಿಸಿಕೊಂಡು ಜೋಮಾಟೊ ಡೆಲಿವರಿ ಮಾಡುತ್ತಾ ಇದ್ದಾನೆ ಬರೀ ಸೈಕಲ್ ಓಡಿಸಿಕೊಂಡು ಫುಡ್ ಡೆಲಿವರಿ ಮಾಡಿದ್ರೆ ಈ ರೀತಿ ನಿದರ್ಶನ ಆಗುತ್ತಿದ್ದನು ಇಲ್ಲವೋ ಗೊತ್ತಿಲ್ಲ ಆದರೆ ಆ ಹುಡುಗನಿಗೆ ಒಂದು ಕೈ ಇಲ್ಲ .

ಇದನ್ನೇ ಅವನು ನೆಪ ಮಾಡಿಕೊಂಡು ಮತ್ತೊಬ್ಬರ ಮೇಲೆ ಡಿಪೆಂಡ್ ಕೂಡ ಆಗಬಹುದಿತ್ತು ನಾನು ಅಸಹಾಯಕ ಎಂಥ ಭಿಕ್ಷೆ ಬಿಡುವುದನ್ನು ಕೂಡ ನಾವು ನೋಡೇ ಇರುತ್ತೇವೆ. ಈ ಹುಡುಗ ನನ್ನ ನೋಡಿ ಹೇಗೆ ಧೈರ್ಯ ತೋರಿ ಆತ್ಮವಿಶ್ವಾಸದಿಂದ ಹೇಗೆ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದಾನೆ ಅಂತ.

ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲಾಗಿದೆ . ನೆಟ್ಟಿಗರಂತು ಈ ವಿಡಿಯೋಗೆ ಬಾರೀ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ . ಏನೇ ಆದರೂ ದುಡಿಮೆಯೇ ದೇವರು ಅಲ್ಲವೇ ಏನೇ ಆಗಲಿ ಆ ಹುಡುಗನಿಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿ ತಿಳಿಸೋಣ. ಈ ಮಾಹಿತಿ ಬಗ್ಗೆ ತಪ್ಪದೇ ನಿಮ್ಮ ಕಮೆಂಟ್ ಅನ್ನು ತಿಳಿಸಿ.

You might also like

Comments are closed.