ತೆಳ್ಳಗಾಗಲು ಹೆಂಡತಿಗೆ ಹೊಸ ಟಿಪ್ಸ್ ಹೇಳಿಕೊಟ್ಟ ಗಂಡ,ಬರೀ ಎರಡೇ ದಿನದಲ್ಲಿ ಝೀರೋ ಫಿಗರ್

HEALTH/ಆರೋಗ್ಯ

ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಲ್ಲಿ ಅತಿ ಕಷ್ಟದಿಂದ ಕರಗುವ ಸೊಂಟದ ಕೊಬ್ಬು. ದೇಹದ ತೂಕ ಇಳಿಸಲು ಹಲವಾರು ವಿಧಾನಗಳಿವೆ. ಕೆಲವರಿಗೆ ಮೈ ಬಗ್ಗಿಸಿದರೆ ಮಾತ್ರ ದೇಹದ ತೂಕ ಇಳಿಯುತ್ತೆ. ಮತ್ತೆ ಕೆಲವರಿಗೆ ಹಣ್ಣು, ತರಕಾರಿ ಜತೆ ಸಮತೋಲನ ಆಹಾರ ಪದ್ಧತಿ ಅನುಸರಿಸುವುದು, ಇದರ ಜತೆ ವಾಕಿಂಗ್, ವ್ಯಾಯಾಮ ಮಾಡುವುದನ್ನು ನಿಯಮಿತವಾಗಿ ರೂಢಿಸಿಕೊಂಡರೆ ತೆಳ್ಳಗಿನ ದೇಹ ಪಡೆಯಬಹುದು. ಬಾಯಿ ಕಟ್ಟುವುದು ಅಥವಾ ಮೈ ಬಗ್ಗಿಸುವುದು ಅಂದು ಕೊಂಡಷ್ಟು ಸುಲಭವಲ್ಲ. ಇವೆರಡು ಮಾಡಲು ದೃಢ ಮನಸ್ಸು ಬೇಕು. ಇವೆಲ್ಲವುಕ್ಕಿಂತಲೂ ತೆಳ್ಳಗಾಗಲು ನೈಸರ್ಗಿಕವಾಗಿಯೇ ಸಾಕಷ್ಟು ವಿಧಾನಗಳಿವೆ.

ಬೇಗನೆ ಪರಿಣಾಮ ಕಾಣಿಸದಿದ್ದರೂ ದೀರ್ಘಕಾಲದವರೆಗೂ ಉಳಿಯುತ್ತದೆ ಅನ್ನುವುದೇ ಪ್ಲಸ್ ಪಾಯಿಂಟ್. ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಲ್ಲಿ ಅತಿ ಕಷ್ಟದಿಂದ ಕರಗುವ ಸೊಂಟದ ಕೊಬ್ಬನ್ನು ತೊಡೆದು ಹಾಕಲು ಜೀರಿಗೆ ನೀರು ಉಪಯುಕ್ತವಾಗಿದೆ. ತನ್ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ. ಅದರಲ್ಲೂ ಒಂದು ಗ್ಲಾಸ್ ಜೀರಿಗೆ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭ ಮಾಡಿದರೆ ಆರೋಗ್ಯಕರ ಜೀವನಶೈಲಿ ನಿಮ್ಮದಾಗುವುದರ ಜೊತೆಗೆ 15 ಕೆ.ಜಿವರೆಗೆ ಇಳಿಸಿಕೊಳ್ಳಬಹುದು.

How To Build A Great Six Pack In Dubai - Is there a secret?

ಪೌಷ್ಠಿಕಾಂಶ ಮತ್ತು ಆರೋಗ್ಯ ತಜ್ಞರ ಪ್ರಕಾರ, ಬೆಳಿಗ್ಗೆದ್ದಾಗ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವುದು, ಮಲಬದ್ಧತೆ ಮತ್ತು ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಮೊದಲಾದ ಕಾಯಿಲೆಗಳು ಇಲ್ಲವಾಗುವಂತೆ ಮಾಡುತ್ತದೆ. ಜೀರಿಗೆಯಲ್ಲಿ ಹಲವಾರು ಪ್ರಬಲ ಆಂಟಿ ಆಕ್ಸಿಡೆಂಟುಗಳಿದ್ದು, ದೇಹದಿಂದ ಕಲ್ಮಶಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಬಗ್ಗೆ ನಡೆಸಿದ ಅಧ್ಯಯನಗಳಿಂದ ಜೀರಿಗೆಯ ಕಾಳುಗಳ ಸಾರದ ಆಂಟಿ ಆಕ್ಸಿಡೆಂಟ್ ಗುಣದ ಪ್ರಾಬಲ್ಯಗಳನ್ನು ಸಾಬೀತುಗೊಳಿಸಲಾಗಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಸಕ್ಕರೆ, ಕೊಬ್ಬು ಮತ್ತು ಪ್ರೋಟೀನ್‌ಗಳಂತಹ ಸಂಯುಕ್ತ ಪೋಷಕಾಂಶಗಳನ್ನು ಪರಿಣಾಮಕಾರಿಯಾಗಿ ಜೀರ್ಣಿಸಲು ಸಹಾಯ ಮಾಡುತ್ತದೆ.

ಜೀರಿಗೆ ನೀರನ್ನು ತಯಾರಿಸುವುದು ತುಂಬಾ ಸುಲಭ. ರಾತ್ರಿ ಒಂದು ಲೋಟ ನೀರಿಗೆ ಎರಡು ಚಮಚ ಜೀರಿಗೆ ಹಾಕಿಟ್ಟು ನೆನೆಸಿಡಿ, ಬೆಳಗಾಗುವಾಗ ಜೀರಿಗೆಯ ಕಾಳುಗಳೆಲ್ಲವೂ ನೀರು ಕುಡಿದು ಊದಿಕೊಂಡಿರುತ್ತವೆ. ತನ್ಮೂಲಕ ಇದರ ಒಡಲಲ್ಲಿದ್ದ ಪೋಷಕಾಂಶಗಳು ನೀರಿನಲ್ಲಿ ಬೆರೆತುಕೊಂಡು ಈ ನೀರನ್ನು ಅತ್ಯುತ್ತಮ ಔಷಧೀಯ ದ್ರವಾಗಿಸುತ್ತವೆ. ಜೀರಿಗೆಯ ಅಂಶಗಳು ನೀರಿನಲ್ಲಿ ಬೆರೆತಷ್ಟೂ ಹೆಚ್ಚು ಹೆಚ್ಚು ಮಸುಕಾದ ಹಳದಿ ಬಣ್ಣವನ್ನು ಪಡೆಯುತ್ತದೆ. ಆದರೆ ನೀರಿನ ರುಚಿ ಹೆಚ್ಚೂ ಕಡಿಮೆ ಬದಲಾಗದೇ ಇರುತ್ತದೆ.

ಜೀರಿಗೆ ನೀರನ್ನು ತಯಾರಿಸುವ ವಿಧಾನ: ಅಗತ್ಯವಿರುವ ಪದಾರ್ಥಗಳು: 2 ಚಮಚ ಜೀರಿಗೆ, 1 ಲೋಟ ನೀರು, ಜೋನು ತುಪ್ಪ. ತಯಾರಿಸುವ ವಿಧಾನ: ಎರಡು ಚಮಚ ಜೀರಿಗೆ ಬೀಜವನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಎದ್ದ ಕೂಡಲೆ ಈ ನೀರನ್ನು ಜೀರಿಗೆ ಸಮೇತ ಕುದಿಸಿಕೊಳ್ಳಿ. 1 ಲೋಟ ನೀರು ಮುಕ್ಕಾಲು ಲೋಟ ಆಗುವವರೆಗೆ ಕುದಿಸಿ. ನಂತರ ನೀರನ್ನು ಲೋಟಕ್ಕೆ ಸೋಸಿ, ಉಗುರು ಬೆಚ್ಚಗೆ ಆದ ನಂತರ ಇದಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿ. ಖಾಲಿ ಹೊಟ್ಟೆಯಲ್ಲಿ ಈ ನೀರುನ್ನು ನಿತ್ಯ ಸೇವಿಸಿದರೆ ಕೊಬ್ಬು ಕರಗಲು ಸಹಕಾರಿಯಾಗುತ್ತದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.