
ಊರ್ಮಿ ಪಾಂಡ್ಯ ಇವರನ್ನು ಟಿಕ್ ಟಾಕ್ ಸ್ಟಾರ್ ಎಂದು ಎಲ್ಲರೂ ಕರೆಯುತ್ತಾರೆ, ಟಿಕ್ ಟಾಕ್ ನಿಂದ ನಮ್ಮ ದೇಶದಲ್ಲಿ ಹಲವರು ಬದುಕು ಕಟ್ಟಿಕೊಂಡಿದ್ದಾರೆ, ಇದರಿಂದ ಖ್ಯಾತಿ ಪಡೆದು ಇದನ್ನೇ ಅವಕಾಶವಾಗಿ ಬದಲಾಯಿಸಿಕೊಂಡ ಕೆಲವು ಕಲೆಗಾರರಲ್ಲಿ ಊರ್ಮಿ ಪಾಂಡ್ಯ ಕೂಡ ಒಬ್ಬರು. ಊರ್ಮಿ ಪಾಂಡ್ಯ ಅವರ ಕಾಮಿಡಿ ವಿಡಿಯೋಗಳು, ಡ್ಯಾನ್ಸ್ ಮಾಡುವ ವಿಡಿಯೋಗಳು, ಲಿಪ್ ಸಿಂಕ್ ಮಾಡುವ ಡಬ್ ಸ್ಮ್ಯಾಶ್ ವಿಡಿಯೋಗಳು ದೇಶಾದ್ಯಂತ ಬಹಳ ವೈರಲ್ ಆಗುತ್ತಿದ್ದವು.
ಹಾಗಾಗಿ ಇವರನ್ನು ಎಲ್ಲರೂ ಟಿಕ್ ಟಾಕ್ ತಾರೆ ಎನ್ನುವುದು. ಅದರಿಂದ ಫೇಮಸ್ ಆಗಿರುವುದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ ಇವರು. ಅಸಲಿಗೆ ನಿಜವಾಗಿ ಯಾರು ಈಕೆ ಎಂದರೆ, ಇವರೊಬ್ಬ ಅಂತರಾಷ್ಟ್ರೀಯ ಯೋಗ ಪಟು. ಯೋಗದಲ್ಲಿ ಸಾಧನೆ ಮಾಡಿ ದೇಹವನ್ನು ರಬ್ಬರ್ ರೀತಿ ಬೆಂಡ್ ಮಾಡುವ, ಅಂಗಾಂಗಗಳನ್ನು ಸ್ಟ್ರೆಚ್ ಮಾಡುವ ಈಕೆಯ ಕಲೆಗೆ ಸಲಾಂ ಹೊಡೆಯಲೇಬೇಕು.
ಮೊದಲು ತಮ್ಮ ಬಳಿ ಇರುವ ಕಲೆಗೆ ಬೆಲೆ ಸಿಗಬೇಕು ಎಂದರೆ ಬಹಳ ಸಾಹಸ ಪಡಬೇಕಾಗಿತ್ತು, ಆದರೆ ಈಗ ಇಂಟರ್ನೆಟ್ ಯುಗ ಆಗಿರುವುದರಿಂದ ತಾವು ಇರುವ ಜಾಗದಿಂದಲೇ ಫೇಮಸ್ ಆಗಿಬಿಡಬಹುದು. ನಿಜವಾಗಿಯೂ ಕಲೆ ಎನ್ನುವುದು ಇದ್ದರೆ ಜನರಿಗೆ ಇಷ್ಟ ಆಗುವ ಅಥವಾ ಜನರು ಮೆಚ್ಚುವ ಕಂಟೆಂಟ್ ಗಳು ಇದ್ದರೆ ಅಂಥವರಿಗೆ ಸೋಶಿಯಲ್ ಮೀಡಿಯಾ ಕೈಬೀಸಿ ಕರೆಯುತ್ತದೆ.

ಸಧ್ಯದ ಟ್ರೆಂಡಿಂಗ್ ಅದೇ ಆಗಿರುವುದರಿಂದ ಇದರಿಂದಲೇ ಅನೇಕರು ಬದುಕು ಕಟ್ಟಿಕೊಂಡಿದ್ದಾರೆ, ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದಾರೆ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಚಾನ್ಸ್ ಪಡೆದುಕೊಂಡಿದ್ದಾರೆ. ಇವರಂತೆಯೇ ಊರ್ಮಿ ಪಾಂಡ್ಯ ಕೂಡ ಟಿಕ್ ಟಾಕ್ ನಲ್ಲಿ ಇತರೆ ಸಾಮಾನ್ಯ ವಿಷಯಗಳ ಜೊತೆಗೆ ತಮ್ಮ ಯೋಗವನ್ನು ಕೂಡ ಬಳಸಲು ಶುರು ಮಾಡಿದರು.
ನಮ್ಮ ದೇಶ ಯೋಗಕ್ಕೆ ಎಷ್ಟು ಪ್ರಾಶಸ್ತ್ಯ ಕೊಡುತ್ತದೆ ಎಲ್ಲರಿಗೂ ತಿಳಿದಿದೆ, ಹಾಗಾಗಿ ಬಹಳ ಬೇಗ ಜನರಿಗೂ ತಲುಪಿ ಫಾಲೋ ಮಾಡಿ ಲೈಕ್ ನೀಡುತ್ತಿದ್ದರು. ಟಿಕ್ ಟಾಕ್ ನಲ್ಲಿ ಐದು ಮಿಲಿಯನ್ ನಷ್ಟು ಫಾಲೋವರ್ಸ್ ಅನ್ನು ಹೊಂದಿದ್ದ ಇವರು ಇದರ ಜೊತೆಗೆ ಯೂಟ್ಯೂಬಲ್ಲಿ ತಮ್ಮದೇ ಆದ ಖಾಸಗಿ ಚಾನೆಲ್ ಕೂಡ ಹೊಂದಿದ್ದಾರೆ.
ಅದಕ್ಕೆ ಯೋಗ ವಿತ್ ಊರ್ಮಿ ಎನ್ನುವ ಹೆಸರು ಇಟ್ಟಿದ್ದಾರೆ, ಅದನ್ನು ಸಹ ಸಾವಿರಾರು ಜನ ನೋಡುತ್ತಿದ್ದಾರೆ. ಅದರಲ್ಲಿ ಯೋಗವನ್ನು ಮೊದಲಿನಿಂದ ಹೇಗೆ ಶುರು ಮಾಡಬೇಕು ಮತ್ತು ಯೋಗದಿಂದ – ಯೋಗದ ಯಾವ ಯಾವ ಆಸನದಿಂದ ಏನೆಲ್ಲ ಪ್ರಯೋಜನ ಇದೆ ಎನ್ನುವುದನ್ನು ವಿವರವಾಗಿ ತಿಳಿಸುತ್ತಿದ್ದಾರೆ. ಇವರ ಯೂಟ್ಯೂಬ್ ವಿಡಿಯೋ ನೋಡಿಕೊಂಡು ಯೋಗ ಕಲಿಯುತ್ತಿರುವವರು ಸಹ ಇದ್ದಾರೆ.
ಈಗ ಹೊಸದಾಗಿ ಮತ್ತೊಂದು ಅವರ ಯೋಗದ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ದೇಹ ದಂಡಿಸಿರುವ ರೀತಿಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಊರ್ಮಿ ಪಾಂಡ್ಯ ಯೋಗ ಅಕಾಡೆಮಿಯನ್ನು ಶುರು ಮಾಡಿ ಯೋಗ ಟೀಚರ್ ಆಗಿ ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನು 30 ದಾಟದ ಯುವತಿ ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ, ಜೊತೆಗೆ ಯಾವ ನಾಯಕಿ ನಟಿಗೂ ಕಡಿಮೆ ಇಲ್ಲದಂತಹ ಗ್ಲಾಮರ್ ಸಹ ಹೊಂದಿದ್ದಾರೆ.
ಅವರ ಯೋಗದ ಒಂದು ವಿಡಿಯೊ ಕೆಳಗಿದೆ ನೋಡಿ…
Comments are closed.