ಯಶ್

ಅಯೋಧ್ಯೆ ರಾಮ ಮಂದಿರಕ್ಕೆ ಯಶ್ ಐವತ್ತು ಕೋಟಿ ದೇಣಿಗೆ…

Today News / ಕನ್ನಡ ಸುದ್ದಿಗಳು

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ ಟು ಸಿನಿಮಾದ ಭರ್ಜರಿ ಸಕ್ಸಸ್ ನಂತರ ಇದೀಗ ಸೈಲೆಂಟ್ ಆಗಿದ್ದು ಫ್ಯಾಮಿಲಿ ಅವರ ಜೊತೆ ಕಾಲ ಕಳೆಯುತ್ತಿದ್ದಾರೆ. ಅದೇನು ಅಂತಾರಲ್ಲ ಮಳೆ ನಿಂತರು ಕೂಡ ಮಳೆ ಹನಿ ನಿಂತಿಲ್ಲ ಅನ್ನುವ ಹಾಗೆ ಕೆಜಿಎಫ್ ಸಿನಿಮಾ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನಲ್ಲಿ 19 ಕೋಟಿಯಷ್ಟು ಹಣ ಲೂಟಿ ಮಾಡಿ ನಾಲ್ಕು ತಿಂಗಳಾಗಿದೆ.

ಆದರೆ ಈ ಕೆಜಿಎಫ್ ಚಿತ್ರದ ಹವಾ ಇನ್ನೂ ಕಡಿಮೆ ಆಗಿಲ್ಲ ಬಿಡಿ ಯಶ್ ಅವರ ಮುಂದಿನ ಸಿನಿಮಾ ಯಾವುದು? ಎನ್ನುವ ಟಾಪಿಕ್ ಮಾತ್ರ ಸಕ್ಕತ್ ಕ್ರೇಜಿ ಉಳಿದುಕೊಂಡಿದೆ ಇದೇ ಗ್ಯಾಪ್ ನಲ್ಲಿ ಹೊಸದೊಂದು ಸುದ್ದಿ ಸೌತ್ ಸಿನಿ ಗ್ಯಾಪ್ ನಲ್ಲಿ ಓಡಾಡೋಕೆ ಶುರು ಮಾಡಿಬಿಟ್ಟಿದೆ. ಅದೇನಪ್ಪ ಎಂದರೆ ರಾಕಿಂಗ್ ಸ್ಟಾರ್ ಯಶ್ ರವರು ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಐವತ್ತು ಕೋಟಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಹೌದು.

ಆದರೆ ಇದು ನಿಜಾನಾ ಸುಳ್ಳ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸ್ಪಷ್ಟವಾಗಿ ಸಿಕ್ಕಿಲ್ಲ. ಈ ಸುದ್ದಿ ಕ್ರಿಯೇಟ್ ಆಗುವುದಕ್ಕೆ ಸಂತೋಷ್ ತ್ರಿಪಾಠಿ ಎನ್ನುವ ವ್ಯಕ್ತಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಯಶ್ ಅವರು ತಿರುಪತಿ ದೇವಾಲಯಕ್ಕೆ ಹೋಗಿ ಬರುತ್ತಿರುವ ಫೋಟೋ ಒಂದನ್ನು ಹಾಕಿಕೊಂಡು ಯಶ್ ಅವರು ರಾಮಮಂದಿರ ನಿರ್ಮಾಣಕ್ಕೆ ಅಂತ 50 ಕೋಟಿ ದೇಣಿಗೆಯನ್ನು ಘೋಷಣೆ ಮಾಡಿದ್ದಾರೆ ಅಂತ ಪೋಸ್ಟ್ ಹಾಕಿಬಿಟ್ಟಿದ್ದಾರೆ.

Yash, 'ರಾಕಿಂಗ್‌ ಸ್ಟಾರ್‌' ಯಶ್‌ ಯುವಕರ ಸ್ಟೈಲ್‌ ಐಕಾನ್‌ ಆಗಲು ಕಾರಣವಾದ ಅಂಶವೇನು  ಗೊತ್ತಾ? - rocking star yash becomes new style icon of youth - Vijaya  Karnataka

ಈ ಪೋಸ್ಟ್ ನೋಡಿದವರು ಯಶ್ ಅವರು ಕೂಡ ದೇವಾಲಯಕ್ಕೆ ಹೋಗುತ್ತಿರುವ ಫೋಟೋವನ್ನು ನೋಡಿ ಇದ್ದು ಇರಬಹುದು ಅಂತ ತಿಳಿದುಕೊಂಡಿದ್ದರು. ಆದರೆ ಒಂದು ವೇಳೆ ನಿಜವಾಗಿದ್ದರೆ ಇಷ್ಟೊತ್ತಿಗೆ ಇದು ದೊಡ್ಡ ಸುದ್ದಿನೇ ಆಗುತ್ತಿತ್ತು. ಆದರೆ ಇದು ಕೇವಲ ಗಾಳಿ ಸುದ್ದಿ ಎನ್ನುವುದು ಇದೀಗ ಜನರಿಗೆ ಮನವರಿಕೆಯಾಗಿದೆ ಒಟ್ನಲ್ಲಿ ರಾಮಮಂದಿರಕ್ಕೆ ದೇಣಿಗೆ ನೀಡುವುದು ಸುಳ್ಳು ಸುದ್ದಿ ಅಂತಾನೆ ಹೇಳಲಾಗುತ್ತದೆ.

ಇನ್ನೊಂದು ಕಡೆ ಯಶ್ ಅವರು ರಾಮಮಂದಿರ ನಿರ್ಮಾಣಕ್ಕೆ 50 ಕೋಟಿ ದೋಣಿಗೆ ನೀಡುವ ಮನಸ್ಸು ಮಾಡುವ ಮೊದಲು ಬಡಜನರ ಕಲ್ಯಾಣಕ್ಕಾಗಿ ಬಳಸುವೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ ಇನ್ನು ಯಶ್ ಅವರು ತಮ್ಮ ಮುಂದಿನ ಚಿತ್ರ ಯಾವುದು ಏನು ಎತ್ತ ಎನ್ನುವುದನ್ನು ಯಾವಾಗ ಘೋಷಣೆ ಮಾಡುತ್ತಾರೆ ಅಂತ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

‘ದಕ್ಷಿಣದ ಸ್ಟಾರ್​ ನಟ ಯಶ್​ ಅವರು ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದರು. ಈ ವೇಳೆ ರಾಮ ಮಂದಿರ ನಿರ್ಮಾಣಕ್ಕಾಗಿ​ 50 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿದರು’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಕೆಲವರು ಪೋಸ್ಟ್​ ಮಾಡಿದ್ದಾರೆ. ಅದರ ಜೊತೆಗೆ ಒಂದು ಫೋಟೋ ಹಂಚಿಕೊಳ್ಳಲಾಗಿದೆ.

ಅಂದಹಾಗೆ, ಆ ಫೋಟೋದ ಅಸಲಿಯತ್ತು ಬೇರೆ ಇದೆ. ಅದು ಅಯೋಧ್ಯಗೆ ಭೇಟಿ ನೀಡಿದ ಸಂದರ್ಭದ ಫೋಟೋ ಅಲ್ಲ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಬಿಡುಗಡೆಗೂ ಮುನ್ನ ಅವರು ತಿರುಪತಿಗೆ ಭೇಟಿ ನೀಡಿದ್ದರು. ಆ ಸಂದರ್ಭದ ಫೋಟೋವನ್ನೇ ಬಳಸಿಕೊಂಡು ಈಗ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...