ನಟ ರಾಕಿಂಗ್ ಸ್ಟಾರ್ ಯಶ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತದೆ. ಇತ್ತೀಚಿಗತ್ತೆ ಅನಿಮಲ್ ಪಾರ್ಕಿಗೆ ಇಡೀ ಕುಟುಂಬವನ್ನು ಕರೆದುಕೊಂಡು ಹೋಗಿದ್ದ ನಟ ಯಶ್ ಪತ್ನಿ ರಾಧಿಕಾ ಮತ್ತು ಮಕ್ಕಳೊಡನೆ ಇಡೀ ಕುಟುಂಬದ ಜೊತೆ ಸಂತಸ ಸಮಯವನ್ನ ಕಳೆದರು. ಹಾಗೆ ಅದರ ವಿಡಿಯೋ ತುಣುಕನ್ನು ಸಹ ಹಂಚಿಕೊಂಡು ಅಭಿಮಾನಿಗಳ ಜೊತೆಗೆ ಖುಷಿ ವ್ಯಕ್ತಪಡಿಸಿದ್ದರು. ಹೌದು ಯಶ್ ಇದೀಗ ಕೆಜಿಎಫ್ ಸಕ್ಸಸ್ ನಲ್ಲಿ ತೇಲಾಡುತ್ತಿದ್ದಾರೆ. ಅವರ ಮುಂದಿನ ಚಿತ್ರ ಯಾವುದು ಎಂಬುದಾಗಿ ಆಗಾಗ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಲೇ ಇದ್ದಾರೆ ಹಾಗೆ ಪ್ರಶ್ನೆ ಸಹ ಮಾಡುತ್ತಾರೆ. ಹೌದು ಯಶ್ ಅವರ ಮುಂದಿನ ಚಿತ್ರದ ಮೇಲೆ ಅತಿ ದೊಡ್ಡ ನಿರೀಕ್ಷೆ ಇದೆ.
ಇದೀಗ ಕೆ.ಜಿ.ಎಫ್. ಮೂಲಕ ಇಡೀ ಪ್ರಪಂಚವನ್ನೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಕೈಚಳಕತನದಲ್ಲಿ ಭರ್ಜರಿಯಾಗಿ ಯಶಸ್ವಿಯಾಯಿತು ಸಿನಿಮಾ. ಇನ್ನು ಮುಂದೆ ಯಶ್ ಅವರ ನಡೆ ಹೇಗಿರುತ್ತದೆ, ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂದು ಈಗಲೂ ಪ್ರಶ್ನೆ ಎದ್ದಿದೆಯಶ್ ಮುಂದಿನ ಸಿನಿಮಾ ಮಫ್ತಿ ಖ್ಯಾತಿಯ ನರ್ತನ್ ನಿರ್ದೇಶಕನ ಜೊತೆ ನಡೆಯುತ್ತೆ ಎಂದು ಕೇಳಿಬಂದಿದ್ದು, ಸಿನಿಮಾದ ಕೆಲಸಗಳು ಇನ್ನೇನು ಆರಂಭ ಸದ್ಯದಲ್ಲೇ ಆಗುತ್ತವೆ ಎಂದು ಹೇಳಲಾಗಿದೆ.
ಹೌದು ತಮ್ಮ ಮಕ್ಕಳ ವಿಡಿಯೋಗಳನ್ನ ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ ಯಶ್. ಹಾಗೆ ಅವರೊಟ್ಟಿಗೆ ಸಮಯ ಕಳೆಯುವ ದೃಶ್ಯಗಳನ್ನು ಸೆರೆಹಿಡಿದು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾರೆ. ಅವರ ಮಗನೊಟ್ಟಿಗೆ ಮಾತನಾಡಿರುವ ನಟ ರಾಕಿ ಬಾಯ್ ಡ್ಯಾಡಿ ತುಂಬಾ ಒಳ್ಳೆಯವರು ಎಂದು ಹೇಳುತ್ತಲೆ ಒಂದು ವಿಡಿಯೋ ಶೇರ್ ಮಾಡಿದ್ದಾರೆ.
ಹಾಗೆ ಅದ್ರಲ್ಲಿ ಡ್ಯಾಡಿ ಇಸ್ ಎ ಗುಡ್ ಬಾಯ್ ಎಂದು ಮಗನಿಗೆ ಹೇಳುತ್ತಾರೆ. ಆಗ ಅವರ ಮಗ ಯಥರ್ವ್ ಯಶ್ ನೋ ಅಮ್ಮ ತುಂಬಾ ಒಳ್ಳೆಯವಳು ಎಂದು ಪ್ರತ್ಯುತ್ತರ ಹೇಳುತ್ತಾನೆ. ಗುಡ್ ಬಾಯ್ ಎಂದು ಹೇಳಿದಾಗಲೂ ಕೂಡ ಯಥರ್ವ್ ಸಹ ನೋ ಎಂದು ಪ್ರತಿಕ್ರಿಯೆ ನೀಡುತ್ತಲೆ ಇರ್ತಾನೆ. ಕೊನೆಯಲ್ಲಿ ಹೋಗಲೇ ಎಂದು ಗರಂ ಆದ ಯಶ್ ಮಾಡಿದ್ದೇನು ಗೊತ್ತಾ..? ಇಲ್ಲಿದೆ ನೋಡಿ ಅವರ ಮಗನ ತುಂಟಾಟದ ವಿಡಿಯೋ. ಒಮ್ಮೆ ನೋಡಿ ಇಷ್ಟ ಆದಲ್ಲಿ ಶೇರ್ ಮಾಡಿ, ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.