ನಾನು ಯಶ್ ತಂಗಿ ಎಂದು ದೀಪಿಕಾ ದಾಸ್ ಅವರು ಎಲ್ಲಿಯೂ ಹೇಳಲ್ಲ ಯಾಕೆ ಗೊತ್ತಾ! ಇದಕ್ಕೆ ಅಸಲಿ ಕಾರಣ ಏನು ನೋಡಿ

CINEMA/ಸಿನಿಮಾ

ಜೀಕನ್ನಡ ವಾಹಿನಿಯಲ್ಲಿ ನಾಗಿಣಿ ಸೀರಿಯಲ್ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದ ನಟಿ ದೀಪಿಕಾ ದಾಸ್. ನಾಗಿಣಿ ಧಾರಾವಾಹಿಯಲ್ಲಿ ಇವರ ಅಭಿನಯ, ದೀಪಿಕಾ ಧರಿಸುತ್ತಿದ್ದ ಕಾಸ್ಟ್ಯೂಮ್ಸ್, ಆಭರಣಗಳು ಎಲ್ಲವೂ ಕೂಡ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಧಾರಾವಾಹಿ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಕೂಡ ಸ್ಪರ್ಧಿಸಿ, ತಮ್ಮ ಡ್ಯಾನ್ಸ್ ಸ್ಕಿಲ್ಸ್ ಇಂದ ಜಡ್ಜ್ ಗಳಿಂದ ಮೆಚ್ಚುಗೆ ಪಡೆದಿದ್ದರು.

ಜೊತೆಗೆ ಜೀಕನ್ನಡ ವಾಹಿನಿಯಲ್ಲಿ ಕೂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕೂಡ ಸ್ಪರ್ಧಿಸಿದ್ದರು. ನಂತರ ಕಳೆದ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಕೂಡ ಸ್ಪರ್ಧಿಸಿದ್ದರು. ಬಿಗ್ ಬಾಸ್ ಮೂಲಕ ಕರ್ನಾಟಕದ ಜನತೆಗೆ ಇನ್ನಷ್ಟು ಇಷ್ಟವಾದರು. ನಿಜ ಜೀವನದಲ್ಲಿ ದೀಪಿಕಾರ ಸ್ವಭಾವ ಎಂಥದ್ದು, ಎಲ್ಲರೊಡನೆ ಹೇಗಿರುತ್ತಾರೆ ಎಂಬುದು ಬಿಗ್ ಬಾಸ್ ಮನೆಯಲ್ಲಿದ್ದಾಗ ಅವರ ಅಭಿಮಾನಿಗಳಿಗೆ ಗೊತ್ತಾಯಿತು.

111 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಜನರನ್ನು ರಂಜಿಸಿದ್ದರು ದೀಪಿಕಾ ದಾಸ್. ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಗಳಿಸಿರುವ ದೀಪಿಕಾ ಅವರು ಕನ್ನಡದ ರಾಕಿಂಗ್ ಸ್ಟಾರ್ ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಅವರ ತಂಗಿ ಎಂದರೆ ನಿಮಗೇ ಆಶ್ಚರ್ಯ ಆಗಬಹುದು. ಹೌದು! ದೀಪಿಕಾ ದಾಸ್ ಅವರು ಯಶ್ ಅವರ ಚಿಕ್ಕಮ್ಮನ ಮಗಳು. ಆದರೆ ಈ ವಿಷಯವನ್ನು ಯಶ್ ಆಗಲಿ ದೀಪಿಕಾ ಆಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಇದಕ್ಕೆ ಒಂದು ಮುಖ್ಯವಾದ ಕಾರಣ ಸಹ ಇದೆ.

South Actress DEEPIKA DAS Hot Photos Set-4 – KannadaTimes

ದೀಪಿಕಾ ದಾಸ್ ಅವರಿಗೆ ತಾವು ಯಶ್ ತಂಗಿ ಎಂದು ಹೇಳಿಕೊಂಡು ಅವಕಾಶ ಪಡೆದುಕೊಳ್ಳಬೇಕು ಎನ್ನುವ ಆಸೆ ಇಲ್ಲ. ತಮಗೆ ಸಿಗುವ ಅವಕಾಶಗಳು ತಮ್ಮ ಪ್ರತಿಭೆಯಿಂದ ಸಿಗಬೇಕು, ಯಶ್ ಅವರ ತಂಗಿ ಎನ್ನುವ ಕಾರಣಕ್ಕೆ ಸಿಗಬಾರದು ಎನ್ನುವುದು ದೀಪಿಕಾ ಅವರ ಆಶಯ. ತಮ್ಮಲ್ಲಿರುವ ಪ್ರತಿಭೆಯಿಂದ ಇಂದು ದೀಪಿಕಾ ದಾಸ್ ಕಿರುತೆರೆ ಲೋಕದ ಸ್ಟಾರ್ ಆಗಿದ್ದಾರೆ. ತಮ್ಮ ಸ್ವಂತಿಕೆ ಇಂದ ಈ ಎತ್ತರಕ್ಕೆ ಬೆಳೆದಿದ್ದಾರೆ. ದೀಪಿಕಾ ಅವರ ಈ ಗುಣ ಸ್ವಭಾವ ನಿಜಕ್ಕೂ ಮೆಚ್ಚುವಂಥದ್ದು.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಮುದ್ದುಮುಖದ ಚೆಲುವೆ ಮೀರಾ ಜಾಸ್ಮಿನ್ ದುಡ್ಡಿಗಾಗಿ ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದು ಹೇಗೆ ಗೊತ್ತಾ?