ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ವಿಡಿಯೋ

CINEMA/ಸಿನಿಮಾ Today News / ಕನ್ನಡ ಸುದ್ದಿಗಳು

ಇಷ್ಟು ದಿನಗಳ ಕಾಲ ಕೆಜಿಎಫ್​ -2 ಚಿತ್ರದಲ್ಲಿ ಬ್ಯುಸಿ ಇದ್ದ ಯಶ್, ಈಗ ಸಿನಿಮಾ ಕೆಲಸಗಳನ್ನು ಮುಗಿಸಿ ಮಾಲ್ಡೀವ್ಸ್​​ಗೆ ಹಾರಿದ್ದಾರೆ. ಪತ್ನಿ ರಾಧಿಕಾ ಪಂಡಿತ್, ಪುತ್ರಿ ಐರಾ ಹಾಗೂ ಪುತ್ರ ಯಥರ್ವ ಜೊತೆ ಯಶ್ ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಈಗ ರಿಲ್ಯಾಕ್ಸ್​​​​​​​​​​​ ಮೂಡ್​​ನಲ್ಲಿದ್ದಾರೆ. ಕೆಜಿಎಫ್​ 2 ಡಬ್ಬಿಂಗ್ ಹಾಗೂ ಇನ್ನಿತರ ಕೆಲಸಗಳನ್ನು ಮುಗಿಸಿರುವ ಯಶ್, ಈಗ ಪತ್ನಿ ಹಾಗೂ ಮಕ್ಕಳೊಂದಿಗೆ ಮಾಲ್ಡೀವ್ಸ್​ ತೆರಳಿದ್ದಾರೆ. ವಿಶೇಷ ವಿಮಾನದಲ್ಲಿ ಮಾಲ್ಡೀವ್ಸ್ ತೆರಳಿರುವ ಯಶ್, ಕುಟುಂಬದೊಂದಿಗೆ ಸುಂದರ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಿದ್ದಾರೆ. ತಾವು ಮಾಲ್ಡೀವ್ಸ್​​​​ಗೆ ತೆರಳಿದ ವಿಚಾರವನ್ನು ಸ್ವತ: ಯಶ್ ಹೇಳಿಕೊಂಡು ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಮತ್ತೊಂದಿಷ್ಟು ಫೋಟೋಗಳನ್ನು ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಗ ಯಥರ್ವನ ಜೊತೆ ಆಟವಾಡುವ ಫೋಟೋಗಳು, ಮಗಳು ಐರಾ ಮುದ್ದು ಫೋಟೋಗಳು, ಪತ್ನಿ ರಾಧಿಕಾ ಜೊತೆ ಕಡಲ ಕಿನಾರೆಯಲ್ಲಿ ಇರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ ಹಾಗೂ ರಾಧಿಕಾ ಅಭಿಮಾನಿಗಳು ಈ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುದ್ದು ಮಕ್ಕಳ ಜೊತೆ ಮಾಲ್ಡೀವ್ಸ್​ಗೆ ಹೋಗಿರುವ ಯಶ್​​ ಮತ್ತು ರಾಧಿಕಾ, ಮಕ್ಕಳ ಜೊತೆ ಅಲ್ಲಿನ ಸಮುದ್ರ ತೀರದಲ್ಲಿ ಆಟವಾಡಿ ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್​ ಮಾಡಿದ್ದಾರೆ. ಇದೀಗ ಯಶ್​​ ದಂಪತಿಯ ಪ್ರವಾಸ ಮುಕ್ತಾಯದ ಹಂತಕ್ಕೆ ಬಂದಿದ್ದು, ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಯಶ್​​​ ಮತ್ತು ರಾಧಿಕಾ ಪಂಡಿತ್​ ಸದ್ಯ ಮಾಲ್ಡೀವ್ಸ್​​ನಲ್ಲಿ ರಜಾ ದಿನಗಳನ್ನು ಎಂಜಾಯ್​ ಮಾಡುತ್ತಿದ್ದಾರೆ.

ಮುದ್ದು ಮಕ್ಕಳ ಜೊತೆ ಮಾಲ್ಡೀವ್ಸ್​ಗೆ ಹೋಗಿರುವ ಸ್ಟಾರ್​​ ದಂಪತಿ, ಮಕ್ಕಳ ಜೊತೆ ಅಲ್ಲಿನ ಸಮುದ್ರ ತೀರದಲ್ಲಿ ಆಟವಾಡಿ ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್​ ಮಾಡಿದ್ದಾರೆ. ಇದೀಗ ಯಶ್​​ ದಂಪತಿಯ ಪ್ರವಾಸ ಮುಕ್ತಾಯದ ಹಂತಕ್ಕೆ ಬಂದಿದ್ದು, ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಯಶ್​​ ವಿಡಿಯೋ ಒಂದನ್ನು ಶೇರ್​​ ಮಾಡಿದ್ದಾರೆ. ವಿಡಿಯೋ ಮೂಲಕ ಮಾತನಾಡಿರುವ ರಾಧಿಕಾ ಪಂಡಿತ್​​, ನಮ್ಮ ಜೀವನದಲ್ಲಿ ಹಾಲಿಡೇಸ್​​​ ತುಂಬಾ ಮುಖ್ಯ. ನಾವು ನಮ್ಮ ಜೀವನದ ಜಂಜಾಟಗಳನ್ನು ಬಿಟ್ಟು ರಿಫ್ರೆಶ್​​ ಆಗೋದಿಕ್ಕೆ ರಜಾ ದಿನಗಳು ಬೇಕು. ಅದ್ರಲ್ಲೂ ಕುಟುಂಬದ ಜೊತೆ ಎಂಜಾಯ್​ ಮಾಡುವುದು ಇನ್ನೂ ಖುಷಿ ಕೊಡತ್ತೆ ಎಂದಿದ್ದಾರೆ. ಇದೇ ವಿಡಿಯೋದಲ್ಲಿ ಯಶ್​ ಮಾತನಾಡಿದ್ದು, ನಮಗೆ ಅದ್ಭುತ ಪ್ರವಾಸಕ್ಕೆ ಸಹಾಯ ಮಾಡಿದ ಅಲ್ಲಿನ ಎಲ್ಲಾ ಸಿಬ್ಬಂದಿಗೂ ಧನ್ಯವಾದ ಅಂದ್ರು. ಅಲ್ಲದೆ ನೆನಪಿನಲ್ಲಿ ಉಳಿಯುವಂತಹ ಕ್ಷಣಗಳನನ್ನು ನಾವು ಮಾಲ್ಡೀವ್ಸ್​​ನಲ್ಲಿ ಕಳೆದಿದ್ದೇವೆ ಎಂದಿದ್ದಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...
ಇದನ್ನೂ ಓದಿ >>>  ಜೊತೆ ಜೊತೆಯಲಿ ಅನಿರುದ್ಧ ಸರನ ಓಡಿಬಂದು ತಬ್ಬಿಕೊಂಡ ಮೇಘ ಶೆಟ್ಟಿ ವೈರಲ್