ಗಾಂಧೀಜಿಯವರು ಭಾರತದ ಸ್ವಾತಂತ್ರ್ಯದ ಬಗ್ಗೆ ಒಂದು ಕನಸು ಕಂಡಿದ್ದರು. ಅದೇನೆಂದರೆ ನಮ್ಮ ದೇಶದಲ್ಲಿ ಎಂದು ಮಹಿಳೆ ಧೈರ್ಯವಾಗಿ ಒಬ್ಬಂಟಿಯಾಗಿ ಮಧ್ಯರಾತ್ರಿ 12 ಗಂಟೆಗೆ ರಸ್ತೆಗಳಲ್ಲಿ ಓಡಾಡುತ್ತಾಳೋ ಅಂದು ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಎಂದು ಹೇಳಿದ್ದರು. ಗಾಂಧೀಜಿಯವರ ಕಂಡಿದ್ದ ಆ ರಾಮ ರಾಜ್ಯದ ಕಲ್ಪನೆ ಭಾರತದಲ್ಲಿ ಎಂದೆಂದೂ ಸಾಧ್ಯವಿಲ್ಲವೇನು ಎನ್ನುವಂತಹ ಆತಂಕ ಇತ್ತೀಚೆಗೆ ಕಾಡುತ್ತಿದೆ.
ನಮ್ಮ ದೇಶ ಸ್ವಾಮಿ ವಿವೇಕಾನಂದ ಬುದ್ಧ ಬಸವ ಇಂತವರನ್ನು ಕಂಡ ಶ್ರೇಷ್ಠ ಭೂಮಿ. ವೇದಾಂತ ವೇದ ಉಪನಿಷತ್ತು ಶಾಸ್ತ್ರ ಸಂಪ್ರದಾಯ ಸಾಂಸ್ಕೃತಿಗೆ ಹೆಸರುವಾಸಿಯಾದ ದೇಶ. ಎಲ್ಲಕ್ಕಿಂತ ಹೆಚ್ಚಾಗಿ ಹೆಣ್ಣನ್ನು ದೇವರಿಗೆ ಹೋಲಿಸಿ ಪೂಜಿಸಿದ ದೇಶ. ಇಂತಹ ಭರತಭೂಮಿಯಲ್ಲಿ ಇತ್ತೀಚೆಗೆ ಆಗುತ್ತಿರುವ ಘಟನೆಗಳು ನಾವು ಯಾವ ದೇಶದಲ್ಲಿ ಇದ್ದೇವೆ ಎನ್ನುವ ಭಯವನ್ನು ತರುತ್ತಿದೆ.
ಈಗಾಗಲೇ ದೇಶದಲ್ಲಿ ಮಹಿಳೆಯರ ಮೇಲೆ ಸಾಕಷ್ಟು ರೀತಿಯ ದೌರ್ಜನ್ಯಗಳು, ಶೋಷಣೆಗಳು ಆಗುತ್ತಿವೆ. ಕೌಟುಂಬಿಕವಾಗಿ ನಡೆಯುತ್ತಿರುವ ದೌರ್ಜನ್ಯಗಳು ಒಂದು ಕಡೆ ಆದರೆ ಅದು ಸಾಲದಕ್ಕೆ ಶಾಲಾ ಕಾಲೇಜು, ಉದ್ಯೋಗ ಸ್ಥಳ, ಸಾರ್ವಜನಿಕ ಪ್ರದೇಶ ಇಲ್ಲಿ ಆಗುತ್ತಿರುವ ಕಿರುಕುಳಗಳು ಮತ್ತೊಂದು ರೀತಿಯ ಸಂಕಷ್ಟವನ್ನು ತಂದೋಡುತ್ತಿದೆ. ನಿಜಕ್ಕೂ ಇದು ನಮ್ಮ ದೇಶವೇ ಎಂದು ಯೋಚಿಸುವ ರೀತಿ ಮಾಡುತ್ತಿವೆ.
ಪುಟ್ಟ ಪುಟ್ಟ ಹೆಣ್ಣು ಮಕ್ಕಳ ಮೇಲೆ ಹಾಗೂ ವಯಸ್ಸಾದ ವೃದ್ದೆ ಮೇಲೆ ಆಗಿರುವ ಅತ್ಯಾಚಾರದ ಪ್ರಕರಣಗಳನ್ನು ಕೇಳಿದಾಗಲೆಲ್ಲ ದೇಶ ಎಂತಹ ದುರ್ಗತಿ ತಲುಪಿದೆ ಎಂದು ಮನಸ್ಸಿಗೆ ತುಂಬಾ ನೋವಾಗುತ್ತದೆ. ನಮ್ಮ ದೇಶದ ಮಹಿಳೆಯರು ಎಲ್ಲಾ ಕ್ಷೇತ್ರದ ಮುನ್ನುಗ್ಗಿ ದೇಶದ ಹೆಸರನ್ನು ಉಳಿಸುವ ಸಾಧನೆ ಮಾಡುತ್ತಿದ್ದರೆ ಮತ್ತೊಂದೆಡೆ ಆಕೆಯ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡುವ ಇಂತಹ ಘಟನೆಗಳು ಕೂಡ ನಡೆಯುತ್ತಿವೆ.
ಇದೇ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ಬಿಹಾರ್ ಟ್ಯಾಕ್ಸ್ ಎನ್ನುವ ಖಾತೆ ಉಳ್ಳ ಟ್ವಿಟಲ್ ಬಳಕೆದಾರರು ಹಂಚಿಕೊಂಡಿದ್ದಾರೆ. ಇದು ಬಿಹಾರ್ ನಗರದ ಆಸ್ಪತ್ರೆ ಆವರಣದಲ್ಲಿ ನಡೆದಿರುವ ಘಟನೆಯಾಗಿದ್ದು, ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವ ವಿಡಿಯೋ ಆಗಿದೆ. ಈ ವಿಡಿಯೋವನ್ನು ಕಂಡ ದೇಶದ ಮಹಿಳೆಯರೆಲ್ಲರೂ ಬೆಚ್ಚಿಬಿದ್ದು ಮನೆಯಿಂದ ಆಚೆ ಹೋಗುವುದಕ್ಕೆ ದಿಗಿಲು ಪಡುವಂತಾಗಿದೆ.
ವಿವರವೇನೆಂದರೆ ಎಂದರೆ ಬಿಹಾರದ ಆಸ್ಪತ್ರೆ ಒಂದರ ಕಾರ್ಯಕರ್ತೆಯಾಗಿದ್ದ ಒಬ್ಬ ಮಹಿಳೆ ತನ್ನ ಪಾಡಿಗೆ ಫೋನ್ ನಲ್ಲಿ ಮಾತನಾಡುತ್ತಾ ಆಸ್ಪತ್ರೆ ಆವರಣದಲ್ಲಿ ನಿಂತಿದ್ದರು. ಇದಕ್ಕಿಂತಂತೆ ಬಂದ ಒಬ್ಬ ಯುವಕ ಆಕೆಗೆ ಲಿಪ್ ಕಿಸ್ ಮಾಡಿ ಓಡಿ ಹೋಗಿದ್ದಾನೆ. ತಕ್ಷಣವೇ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸುವ ಪ್ರಯತ್ನ ಮಾಡಿದರು ಕೂಡ ವಯಸ್ಸಿನಲ್ಲಿ ಹಿರಿಯರು ಎನ್ನುವುದನ್ನು ಕಾಣದೆ ಈ ರೀತಿ ಆಸಭ್ಯ ವರ್ತನೆ ತೋರಿಸುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ ಆಗಿದೆ.
ಸದ್ಯಕ್ಕಿಗ ಪ್ರಕರಣವು ಹತ್ತಿರದ ಪೊಲೀಸ್ ಸ್ಟೇಷನ್ ಅಲ್ಲಿ ದಾಖಲೆ ಆಗಿದ್ದು, ಆರೋಪಿ ಮೇಲೆ ಕೇಸ್ ಹಾಕಿ ಅವನನ್ನು ಹುಡುಕುವ ಕೆಲಸ ನಡೆಯುತ್ತಿದೆ. ಜೊತೆಗೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮಹಿಳೆಯರು ಈ ರೀತಿಯ ವರ್ತನೆ ಮೇಲೆ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಕೆಲವರು ಪರಿಸ್ಥಿತಿ ಹೀಗೆ ಮುಂದುವರೆಯುತ್ತದೆ ನಮ್ಮ ದೇಶದ ಗತಿಯೇನು ಎಂದು ಭಯ ಪಡುತ್ತಿದ್ದಾರೆ. ಈ ವಿಡಿಯೋವನ್ನು ನೀವು ಸಹ ನೋಡಿ ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ.
ಆ ವಿಡಿಯೊ ಕೆಳಗಿದೆ ನೋಡಿ…
जमुई सदर अस्पताल में महिला स्वास्थ्य कर्मी को दिनदहाड़े युवक ने ज़बरदस्ती किस किया, CCTV में क़ैद हुई घटना. महिला की शिकायत पर FIR दर्ज, महिला सुरक्षा पर उठाये गम्भीर सवाल. pic.twitter.com/uDC2wZ3cMR
— Utkarsh Singh (@UtkarshSingh_) March 13, 2023