ಸ್ನೇಹಿತರೆ ನಾವು ಇಂದು ಬಹಳ ಯಾಂತ್ರಿಕವಾಗಿ ಬದುಕುತ್ತಿದ್ದೇವೆ. ನಮಗೆ ಕೆಲಸ ಮಾಡುವುದು, ಹಣ ಗಳಿಸುವುದು ಮಾತ್ರ ಗೊತ್ತು. ಅದರ ನಡುವೆ ಒಂದು ಸುಂದರವಾದ ಬದುಕು ಇದೆ ಅನ್ನೋದನ್ನ ಮರೆತುಬಿಡುತ್ತೇವೆ ಹೆಚ್ಚು ಕಮ್ಮಿ ಇಂದು ಬಹುತೇಕ ಜನ ನಗುವುದನ್ನು ಮರೆತಿದ್ದಾರೆ. ಮನೆಯಲ್ಲಿ ಯಾರಾದರೂ ಇದ್ದರೆ ಅವರ ಜೊತೆಗೆ ಸ್ವಲ್ಪ ಸಮಯ ಕಳೆಯುವುದಕ್ಕೂ ಕೂಡ ಪುರುಸೊತ್ತೇ ಇರುವುದಿಲ್ಲ.
ಆಫೀಸ್ ಗೆ ಹೋಗಿ ಕೆಲಸ ಮಾಡುವವರು ಬೆಳಿಗ್ಗೆ ಹೋದರೆ ಸಂಜೆ ಬರೋದು ಅದೇ ರೀತಿ ಮಾಡೋರು ಮನೆಯ ರೂಮ್ ಒಂದರಲ್ಲಿ ಬಾಗಿಲು ಹಾಕಿಕೊಂಡು ಬೆಳಿಗ್ಗೆಯಿಂದ ರಾತ್ರಿ ಯವರಿಗೆ ಕೆಲಸ ಮಾಡುತ್ತಾರೆ. ಇನ್ನು ಸ್ವಲ್ಪ ಸಮಯ ಸಿಕ್ಕರೆ ಸಾಕು ಕೈಯಲ್ಲಿ ಮೊಬೈಲ್ ಇರುತ್ತೆ. ಊಟ ತಿಂಡಿ ಬಿಟ್ರು ಮೊಬೈಲ್ ಅಂತೂ ಜನ ಬಿಡೋದಿಲ್ಲ. ಹೀಗೆ ನಾನು ಬ್ಯುಸಿ ಲೈಫ್ ಲೀಡ್ ಮಾಡುತ್ತಿದ್ದರೆ ಇದು ಖಂಡಿತವಾಗಿಯೂ ಆರೋಗ್ಯಕ್ಕಂತೂ ಒಳ್ಳೆಯದಲ್ಲ ನಮ್ಮ ಜೀವನ ಶೈಲಿಯೇ ನಮ್ಮ ಆರೋಗ್ಯವನ್ನು ಕೂಡ ಹಾಳು ಮಾಡುತ್ತದೆ ಎಂಬುದು ನಮಗೆ ನೆನಪಿರಬೇಕು.
ಇತ್ತೀಚಿಗೆ ಜನರಿಗೆ ನಗುವುದಕ್ಕೆ ಪುರುಸೊತ್ತಿಲ್ಲ ನಗುವುದನ್ನು ಮರೆತೆ ಬಿಟ್ಟಿದ್ದಾರೆ ನಿಮಗೂ ಅನ್ನಿಸಬಹುದು ನಕ್ಕು ನಕ್ಕು ಹೊಟ್ಟೆ ಹುಣ್ಣು ಆಯಿತು ಎನ್ನುವಷ್ಟರ ಮಟ್ಟಿಗೆ ನಗದೆ ಯಾವ ಕಾಲ ಆಯ್ತು ಏನು ಅಲ್ವಾ? ಜನರನ್ನು ನಗಿಸುವುದಕ್ಕಾಗಿ ಕೆಲವು ಫ್ರೆಂಡ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹರಿಬಿಡುತ್ತಾರೆ ದಾರಿಯಲ್ಲಿ ಸಿಕ್ಕ ಜನರನ್ನ ಬಕ್ರ ಮಾಡುವಂತಹ ಕಾರ್ಯಕ್ರಮಗಳು.
ಇದೀಗ youtube ಚಾನೆಲ್ ಮೂಲಕ ಸಾಕಷ್ಟು ಜನ ಫ್ರ್ಯಾಂಕ್ ವಿಡಿಯೋ ಮಾಡುತ್ತಾರೆ ಕೊನೆ ಪಕ್ಷ ನಗುವುದಕ್ಕೆ ಇಂತಹ ವಿಡಿಯೋ ನೋಡಿದ್ರು ಒಳ್ಳೆಯದು. ಇನ್ನು ಕೆಲವೊಮ್ಮೆ ಫ್ರಾಂಕ್, ರಾಂಗ್ ಆಗೋದು ಇದೆ. ಕೆಲವರನ್ನ ಬಕ್ರ ಮಾಡುವುದಕ್ಕೆ ಹೋಗಿ ಉಗಿಸಿಕೊಂಡಿದ್ದು ಇದೆ. ಆದರೆ ಇದಕ್ಕಿಂತ ಹೆಚ್ಚಾಗಿ ಫ್ರ್ಯಾಂಕ್ ವಿಡಿಯೋಗಳು ಜನರನ್ನ ನಗಿಸುತ್ತದೆ ಎನ್ನುವುದಂತು ಸುಳ್ಳಲ್ಲ.
ಫ್ರಾಂಕ್ ಬಾಯ್ ಕನ್ನಡ ಎನ್ನುವ ಯೂಟ್ಯೂಬ್ ಚಾನೆಲ್ ನ ಯುವಕರು ಫ್ರ್ಯಾಂಕ್ ಮಾಡುವುದರಲ್ಲಿ ಎತ್ತಿದ ಕೈ. ಜನರಿಗೆ ಸಾಕಷ್ಟು ತಲೆ ತಿನ್ನುವಂತಹ ಪ್ರಶ್ನೆಗಳನ್ನು ಕೇಳುವುದರ ಮೂಲಕ ಜನರನ್ನ ಗೊಂದಲಕ್ಕೀಡು ಮಾಡುತ್ತಾರೆ. ಇನ್ನು ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳನ್ನು ತಡೆದು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಆ ಪ್ರಶ್ನೆ ಕೇಳುತ್ತಿದ್ದಂತೆ ವಿದ್ಯಾರ್ಥಿಗಳು ತಬ್ಬಿಬ್ಬಾಗಿದ್ದಾರೆ ಇಷ್ಟುಕ್ಕೂ ಫ್ರಾಂಕ್ ಬಾಯ್ಸ್ ಕೇಳಿದ ಆ ಪ್ರಶ್ನೆ ಯಾವುದು ಗೊತ್ತಾ?
ಹೌದು ಈ ಪ್ರಶ್ನೆಯನ್ನು ಕೇಳಿಸಿಕೊಂಡ ಬಹುತೇಕ ಜನ ನಕ್ಕರೆ ಹೊರತು ಉತ್ತರವನ್ನು ಮಾತ್ರ ನೀಡಲಿಲ್ಲ. ‘ಹುಡುಗಿಯರಿಗೆ ಮುಂದೆ ಇರುತ್ತೆ, ಹಸುಗಳಿಗೆ ಹಿಂದೆ ಇರುತ್ತೆ’ಏನದು ಏನು ಅಂತ ಪ್ರಶ್ನೆ ಇದಾಗಿತ್ತು. ಎಷ್ಟು ಜನ ಈ ಪ್ರಶ್ನೆಯನ್ನು ಕೇಳಿಸಿಕೊಂಡು ಉತ್ತರ ಹೇಳುವಲ್ಲಿ ಸೋತರು. ಇದರ ಉತ್ತರ ಏನು ಗೊತ್ತಾ? ‘ಕೌ’ ಹಾಗೂ ‘ ವಿಮೆನ್ ‘. ಹೌದು ಇಲ್ಲಿ ಹಸು ಹಾಗೂ ಯುವತಿ ಎಂದು ಯೋಚನೆ ಮಾಡುವುದಲ್ಲ ಅದರ ಬದಲು ಇಂಗ್ಲಿಷ್ ನಲ್ಲಿ ಕೌ ಹಾಗೂ ವಿಮೆನ್ ಎಂದು ಅರ್ಥ ಮಾಡಿಕೊಳ್ಳಬೇಕು.
Cow ನಲ್ಲಿ ‘w’ ಹಿಂದೆ ಇದ್ರೆ women ನಲ್ಲಿ ‘w’ ಪದ ಮುಂದೆ ಇದೆ. ಇದೇ ಈ ಪ್ರಶ್ನೆಯ ಉತ್ತರ. ಈ ಪ್ರಶ್ನೆಗೆ ಉತ್ತರ ತಿಳಿಯುತ್ತಿದ್ದ ಹಾಗೆ ಸಾಕಷ್ಟು ಜನ ಕಕ್ಕಾಬಿಕ್ಕಿ ಆಗಿದ್ದಾರೆ ಅಯ್ಯೋ ಎಷ್ಟು ಸಿಂಪಲ್ ಆಗಿರೋ ವಿಷಯಕ್ಕೆ ನಾವು ತಲೆ ಕೆಡಿಸಿಕೊಂಡವಲ್ಲ ಅಂತ ತಲೆ ಮೇಲೆ ಕೈ ಹೊತ್ತಿಕೊಂಡರು. ಸ್ನೇಹಿತರೆ, ನೀವು ಈ ಪ್ರಶ್ನೆಯನ್ನು ನಿಮ್ಮ ಸ್ನೇಹಿತರಿಗೂ ಕೇಳಿ ಅವರು ಉತ್ತರ ಗೊತ್ತಾಗದೆ ಪರದಾಡುವುದನ್ನು ನೀವು ನೋಡಿ ಹೊಟ್ಟೆ ತುಂಬಾ ನಕ್ಕುಬಿಡಿ!