
ಅವಿವಾ ಬಿದ್ದಪ್ಪ ಮತ್ತು ಅಭಿಷೇಕ್ ಅಂಬರೀಶ್ ಯಾವ ಅರಣ್ಯದಲ್ಲಿ ಇದ್ದಾರೆ ಅನ್ನುವ ವಿಷಯ ಶೇರ್ ಮಾಡಿಕೊಂಡಿಲ್ಲ. ಆದರೆ ಈ ಫೋಟೋಗಳಲ್ಲಿ ಸುಂದರ ಕ್ಷಣಗಳು ಕ್ಯಾಪ್ಚರ್ ಆಗಿವೆ. ಸ್ಯಾಂಡಲ್‌ವುಡ್ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಪತ್ನಿ ಅವಿವಾ ಬಿದ್ದಪ್ಪ ಜೊತೆಗೂಡಿ ಅರಣ್ಯ ಸಫಾರಿಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಈ ಒಂದು ಕ್ಷಣದ ಒಂದಷ್ಟು ಫೋಟೋಗಳನ್ನ ಅವಿವಾ ಬಿದ್ದಪ್ಪ ಶೇರ್ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಈ ಮೂಲಕ ತಮ್ಮ ಸ್ಪೆಷಲ್ ಕ್ಷಣದ ಫೋಟೋಗಳನ್ನ ಹಂಚಿಕೊಳ್ತಾರೆ. ಅದೇ ರೀತಿ ಪತಿ ಅಭಿಷೇಕ್ ಜೊತೆಗಿನ ವಿಶೇಷ ಕ್ಷಣದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ಅವಿವಾ ಬಿದ್ದಪ್ಪ ಹಂಚಿಕೊಂಡ ಈ ಫೋಟೋಗಳ ಜೊತೆಗೆ ಒಂದು ವಿಷಯ ಕೂಡ ಬರೆದುಕೊಂಡಿದ್ದಾರೆ. Jungle Things ಅಂತಲೇ ಹೇಳಿಕೊಂಡಿರೋ ಅವಿವಾ, ಈ ಒಂದು ಜಾಲಿ ಟೈಮ್‌ನ ಇನ್ನಷ್ಟು ಫೋಟೋಗಳನ್ನ ಶೇರ್ ಮಾಡಿಕೊಳ್ಳಬಹುದು ಅನಿಸುತ್ತಿದೆ. ಅವಿವಾ ಬಿದ್ದಪ್ಪ ಸಿನಿಮಾ ಜೀವನದಲ್ಲಿ ಇನ್ನು ಬಂದಿಲ್ಲ. ತಮ್ಮದೇ ಲೋಕದಲ್ಲಿ ಮುನ್ನುಗ್ಗುತ್ತಿದ್ದಾರೆ.
ಆದರೆ ಯಾವುದೇ ನಟಿಯರಿಗೂ ಕಡಿಮೆ ಇಲ್ಲದಂತೆ ಜಿಮ್‌ನಲ್ಲೂ ಅವಿವಾ ವರ್ಕೌಟ್ ಮಾಡುತ್ತಾರೆ. ಈ ಮೂಲಕ ನಾನೂ ಸಖತ್ ಫಿಟ್ ಅಂತಲೇ ಫೋಟೋ ಮತ್ತು ವಿಡಿಯೋ ಮೂಲಕ ಹೇಳ್ತಾನೆ ಇರ್ತಾರೆ.
ಅವಿವಾ ಬಿದ್ದಪ್ಪ ಚಿತ್ರರಂಗಕ್ಕೆ ಬಂದ್ರೂ ಬರಬಹುದು. ಆದರೆ ಆ ಬಗ್ಗೆ ಸದ್ಯ ಯಾವುದೇ ಸುದ್ದಿನೂ ಇಲ್ಲ. ನಿರೀಕ್ಷೆನೂ ಇದ್ದಂತೆ ಕಾಣೋದಿಲ್ಲ.
ಹಾಗೇನಾದ್ರೂ ಇದ್ರೆ ಇಷ್ಟೊತ್ತಿಗೆ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿತ್ತು ಅನಿಸುತ್ತದೆ. ಹಾಗಾಗಿ ಪ್ರೇಕ್ಷಕರು ಶುಂಟಿಕೊಪ್ಪದಲ್ಲಿ ಹನಿಮೂನ್ ಜಂಗಲ್ ಮೇ ಮಿಂಗಲ್ ಎಂದೆಲ್ಲ ಕಾಮೆಂಟ್ ಮಾಡ್ತಿದ್ದಾರೆ.
Comments are closed.