ಪ್ರಿಯಕರನ ಮೋಜಿಗೆ ಬಿದ್ದು,ಗಂಡ,ಮಕ್ಕಳನ್ನು ಬಿಟ್ಟು ಹೋದ ಮಹಿಳೆ. ಆದರೆ ಕೊನೆಗೆ ಇವರ ಪರಿಸ್ಥಿತಿ ಏನಾಗಿದೆ ಗೊತ್ತೇ??

ಮದುವೆ ನಂತರ ಗಂಡ ಅಥವಾ ಹೆಂಡತಿ ಮೂರನೇ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದರಿಂದ ಅನೇಕ ಘಟನೆಗಳು ನಡೆಯುತ್ತಿವೆ. ಒಬ್ಬ ಮಾಡುವ ತಪ್ಪಿನಿಂದ ಇಡೀ ಕುಟುಂಬವೆ ಶಿಕ್ಷೆ ಅನುಭವಿಸುವ ಹಾಗೆ ಆಗುತ್ತಿದೆ. ಈ ರೀತಿ ಮಾಡುವುದರಿಂದ, ಗಂಡ ಅಥವಾ ಹೆಂಡತಿ ಇಂದ ಮಾತ್ರ ದೂರ ಆಗುವುದಲ್ಲ, ಬದಲಾಗಿ ಇಡೀ ಕುಟುಂಬ, ಮಕ್ಕಳು ಎಲ್ಲರ ಜೊತೆಗೆ ಸಂಬಂಧ ಕಳೆದುಕೊಳ್ಳಬೇಕಾಗುತ್ತದೆ. ಅಕ್ರಮ ಸಂಬಂಧಗಳಿಂದ ಪ್ರಾಣ ಕಳೆದುಕೊಂಡಿರುವಂಥ ಘಟನೆಗಳನ್ನು ಸಹ ಸಾಕಷ್ಟು ನೋಡಿದ್ದೇವೆ.
ಇಂಥದ್ದೇ ಒಂದು ಘಟನೆ ಇತ್ತೀಚೆಗೆ ತಮಿಳು ನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ, ಚೋಳವರಂ ಎಂಬ ಗ್ರಾಮದಲ್ಲಿ ಅಮುದಾ ಮತ್ತು ಬಾಬು ಹೆಸರಿನ ದಂಪತಿ ವಾಸ ಮಾಡುತ್ತಿದ್ದರು, ಇವರಿಬ್ಬರು ಮದುವೆಯಾಗಿ ಚೆನ್ನಾಗಿ ಜೀವನ ಸಾಗಿಸುತ್ತಿದ್ದರು, ಈ ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದು, ನಾಲ್ವರು ಚೆನ್ನಾಗಿದ್ದರು, ಆದರೆ ಇವರ ಕುಟುಂಬಕ್ಕೆ ಮೂರನೇ ವ್ಯಕ್ತಿಯ ಆಗಮನ ಆಗಿದ್ದರಿಂದ ಎಲ್ಲವೂ ಬದಲಾಯಿತು.

ಅದೇ ಗ್ರಾಮದ ಜಗದೀಶ್ ಎನ್ನುವ ವ್ಯಕ್ತಿಯ ಜೊತೆಗೆ ಅಮುದಾ ಅನೈತಿಕ ಸಂಬಂಧ ಹೊಂದಿದ್ದಳು, ಈ ವಿಷಯ ಯಾರಿಗೂ ಗೊತ್ತಾಗದ ಕಾರಣ ಏನು ತೊಂದರೆ ಆಗದೆ, ಬಹಳ ಸಮಯದವರೆಗು ಈ ಅನೈತಿಕ ಸಂಬಂಧ ತೊಂದರೆ ಉಂಟು ಮಾಡದೆ ಸಾಗಿತ್ತು.

ಆದರೆ ಈ ವಿಷಯ ಅಮುದಾ ಅವರ ಗಂಡ ಬಾಬು ಅವರಿಗೆ ಗೊತ್ತಾದ ನಂತರ ಮನೆಯಲ್ಲಿ ಜಗಳಗಳು ಶುರುವಾಯಿತು. ಜಗಳ ಆದ ನಂತರ ಅಮುದಾ ತನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು, ಜಗದೀಶ್ ಜೊತೆಗೆ ಓಡಿ ಹೋದಳು. ನಂತರ ಆಕೆಯ ತಂದೆ ತಾಯಿ ಮಗಳನ್ನು ಹುಡುಕಿ ಕರೆದುಕೊಂಡು ಬಂದು, ಕುಟುಂಬದವರು ಕೂತು ಮಾತನಾಡಿ, ಅಮುದಾಳನ್ನು ಒಪ್ಪಿಸಿ, ಇನ್ನುಮುಂದೆ ಚೆನ್ನಾಗಿರಬೇಕು ಎಂದು ಬುದ್ಧಿ ಹೇಳಿ, ಸಂಸಾರ ನಡೆಸುವ ಹಾಗೆ ಹೇಳಿದರು. ಆದರೆ ಅಮುದಾ ವರ್ತನೆ ಬದಲಾಗಲಿಲ್ಲ.

ಗಂಡನ ಜೊತೆಗೆ ಜಗಳ ಆಡಿಕೊಂಡು, ಮತ್ತೊಮ್ಮೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ಜಗದೀಶ್ ಜೊತೆಗೆ ಓಡಿಹೋದಳು, 20 ದಿನಗಳ ನಂತರ ತಿರುವಳ್ಳೂರಿಗೆ ಸೇರಿದ ಪುರಸಭೆಯ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಈ ರೀತಿ ಆಗಿದ್ದು ಯಾಕೆ ಎಂದು ಯಾರಿಗೂ ತಿಳಿದುಬಂದಿಲ್ಲ. ಪೊಲೀಸರ ಈ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

You might also like

Comments are closed.