ಹೆಂಡತಿ

ಹೆಂಡತಿಯರಿಗೆ ಕಷ್ಟ ಕೊಡೋದ್ರಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? ನಿಜಕ್ಕೂ ಇದು ಶಾಕಿಂಗ್

CINEMA/ಸಿನಿಮಾ

ಇದು ಇಡೀ ಪುರುಷ ಸಮಾಜವೇ ತಲೆ ತಗ್ಗಿಸುವ ಸುದ್ದಿ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗಿಲ್ವ ರಕ್ಷಣೆ ಅನ್ನುವ ಪ್ರಶ್ನೆಯನ್ನು ಮೂಡಿಸುತ್ತಿದೆ. ಇನ್ನು ಈ ವಿಚಾರದಲ್ಲಿ ನಮ್ಮ ಕರ್ನಾಟಕ ಬಿಹಾರವನ್ನು ಹಿಂದಿಕ್ಕಿದೆ. ಇಡೀ ದೇಶದಲ್ಲಿ ಹೆಂಡತಿಗೆ ಹಿಂಸೆ ಕೊಡುವುದರ ಪೈಕಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಇದು ಬೆಳಕಿಗೆ ಬಂದಿದ್ದು ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ. NHFS ಎಲ್ಲಾ ರಾಜ್ಯಗಳ ಸರ್ವೆಯಲ್ಲಿ ಈ ಆ ಘಾತಕಾರಿ ಅಂಶ ಬಯಲಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಿಜಕ್ಕೂ ಇದು ಗಂಭೀರವಾಗಿ ಯೋಚಿಸಲೇಬೇಕಾದ ವಿಚಾರ. ‌ಯಾಕಂದ್ರೆ ಈ ವಿಷಯ ಕರ್ನಾಟಕದ ಪಾಲಿಗೆ ಇದು ಕುಖ್ಯಾತಿ. ವಿಷಯ ಏನಪ್ಪಾ ಅಂದ್ರೆ ಹೆಂಡತಿ ಮೇಲೆ ಹಲ್ಲೆ ನಡೆಸುವ ವಿಚಾರದಲ್ಲಿ ಕರ್ನಾಟಕ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ಇದನ್ನ ನಾವು ಹೇಳ್ತಿಲ್ಲ. NFHS ಅಂದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ (National Family Health Survey) ಈ ಕರಾಳ ಸತ್ಯ ಹೊರಬಿದ್ದಿದೆ. ಬಿಹಾರವನ್ನು ಹಿಂದಿಕ್ಕಿ ಕರ್ನಾಟಕ ನಂಬರ್ 1 ಸ್ಥಾನವನ್ನು ಪಡೆದಿದೆ. ಹತ್ತು ರಾಜ್ಯಗಳು ರಾಷ್ಟ್ರೀಯ ಸರಾಸರಿ ಶೇ. 32 ಕ್ಕಿಂತ ಹೆಚ್ಚಿವೆ. ಹಾಗಾದರೆ NFHS ಕೊಟ್ಟ ವರದಲ್ಲಿ ಏನಿದೆ? ಎಂದು ನೋಡುವುದಾದರೆ, ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ 2019 ರಿಂದ 2021 ರ ತನಕ ನಡೆಸಲಾಗಿದೆ. ಈ ಸರ್ವೇಯಲ್ಲಿ 18 ರಿಂದ 49 ವರ್ಷ ಮಹಿಳೆಯರನ್ನ ಬಳಸಿಕೊಳ್ಳಲಾಗಿದೆ.

ಗಂಡ ಹೆಂಡತಿಯ ಮಧ್ಯೆ ಕಲಹ ಉಂಟಾಗಲು ಕಾರಣ ಏನು ಗೊತ್ತೆ - Karnataka No 1 Samachara

ಈ ಸರ್ವೇ ಪ್ರಕಾರ ರಾಜ್ಯದ ಶೇ.‌ 48 ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ಹಿಂಸೆಗೆ ಒಳಪಟ್ಟಿರುವ ಅಂಶ ಬಯಲಾಗಿದೆ. ಬಿಹಾರಕ್ಕಿಂತ ರಾಜ್ಯದಲ್ಲಿ ಸಂಗಾತಿ ಹಿಂಸೆ ಅಧಿಕವಾಗಿರೋದು ಪತ್ತೆಯಾಗಿದೆ. ಬಿಹಾರದಲ್ಲಿ ಶೇ. 43ರಷ್ಟು ಮಹಿಳೆಯರು ಸಂಗಾತಿ ಹಿಂಸೆ ಅನುಭವಿಸಿದ್ದಾರೆ. ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆಗೆ ಒಳಗಾಗ್ತಿರುವ ಬಗ್ಗೆ ಸರ್ವೇಯಲ್ಲಿ ಮಹಿಳೆಯರು ಹೇಳಿಕೊಂಡಿದ್ದಾರೆ. ಕೆಲವೊಮ್ಮೆ ಚಿತ್ರಹಿಂಸೆಗೂ ಒಳಪಡುತ್ತಿರುವುದು, ಪತಿಯಿಂದಲೇ ದೈಹಿಕ ಹಲ್ಲೆಗಳು ನಡೆಯುತ್ತಿರುವ ಬಗ್ಗೆ ವರದಿ ಬೆಳಕು ಚೆಲ್ಲಿದೆ. ಸಂಗಾತಿ ಹಿಂಸೆಯಿಂದಾಗಿ ಗಾಯಗಳಿಗೆ ತುತ್ತಾಗುತ್ತಿರುವುದು ಪತ್ತೆಯಾಗಿದೆ.

ಮಹಿಳೆಯರ ಮೇಲೆ ಯಾವ ರೀತಿಯ ಹಲ್ಲೆ ನಡೆಯುತ್ತಿದೆ? ಮಹಿಳೆಯರು ತಮ್ಮ ಪತಿಯಿಂದ ವಿವಿಧ ರೀತಿಯ ಹಲ್ಲೆಗೆ ಒಳಪಡುತ್ತಿದ್ದಾರೆ. ಇದರಲ್ಲಿ ಶೇ. 7ರಷ್ಟು ಮಹಿಳೆಯರಿಗೆ ಕಣ್ಣಿನ ಗಾಯ, ಕೈ ಕಾಲು ಮುರಿತ, ಬರೆಯಂತಹ ಹಲ್ಲೆಗೆ ಒಳಗಾಗಿದ್ದಾರೆ. ಶೇ.6ರಷ್ಟು ಮಹಿಳೆಯರಿಗೆ ತೀವ್ರ ಥರದ ಗಾಯ, ಮೂಳೆ ಮುರಿತ, ಹಲ್ಲು ಮುರಿತಕ್ಕೆ ಒಳಗಾಗಿದ್ದಾರೆ. ಶೇ. 3ರಷ್ಟು ಮಹಿಳೆಯರಿಗೆ ಬೆಂಕಿಯಿಂದ ಸುಡುವ ಚಿತ್ರಹಿಂಸೆ ಕೂಡ ನಡೆದಿದೆ ಎಂದು ಸರ್ವೇ ‌ಇಂದ ಬಯಲಾಗಿದೆ. ಇಷ್ಟೆಲ್ಲಾ ನೋವನ್ನು ಅನು ಹವಿಸಿ ಮೌನಕ್ಕೆ ಶರಣಾದ ಮಹಿಳೆಯರೆಷ್ಟು?

ಗಂಡ ಹೆಂಡತಿ ಸಮಸ್ಯೆ ಮತ್ತು ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ನಿಮಗೆ ದೊರೆಯಬೇಕು ಎಂದರೆ ಈ ರೀತಿಯಾಗಿ ಮಾಡಿ - Karnataka No 1 Samachara

ಸಹಾಯ ಪಡೆದವರೆಷ್ಟು? ಪತಿಯಿಂದ ಹಿಂಸೆಗೆ ಒಳಪಡುವ ಭಾಗಶಃ ಮಹಿಳೆಯರು ಸಮಾಜಕ್ಕೆ ಹೆದರಿ ಮೌನ ವಹಿಸಿದ್ದಾರೆಂದು ವರದಿ ಹೇಳುತ್ತಿದೆ. ಶೇ.‌58ರಷ್ಟು ಮಹಿಳೆಯರು ತವರು ಮನೆಯವರಿಂದ ಸಹಾಯ ಪಡೆಯಲು ಮುಂದಾಗಿರುವುದು ಪತ್ತೆಯಾಗಿದೆ. ಶೇ.‌27ರಷ್ಟು ಮಹಿಳೆಯರು ಅತ್ತೆ, ಮಾವನ ಮನೆಯವರಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ.

ಶೇ.9ರಷ್ಟು ಮಹಿಳೆಯರು ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. ಶೇ.2ರಷ್ಟು ಮಹಿಳೆಯರು ಧಾರ್ಮಿಕ ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. ಕೇವಲ ಶೇ. 1 ರಷ್ಟು ಮಹಿಳೆಯರು ಮಾತ್ರ ಪೊಲೀಸ್ ಹಾಗೂ ವಕೀಲರಿಂದ ಸಹಾಯ ಪಡೆಯಲು ಮುಂದಾಗಿರುವುದು ಸರ್ವೇಯಲ್ಲಿ ತಿಳಿದುಬಂದಿದೆ.ಸಂಗಾತಿಯ ಮೇಲೆ ಹಲ್ಲೇ ಮಾಡಿದ ಟಾಪ್ 10 ರಾಜ್ಯಗಳು ಈ ರೀತಿಯಾಗಿವೆ. ಕರ್ನಾಟಕ 48% , ಬಿಹಾರ 43%, ತೆಲಂಗಾಣ 41%, ಮಣಿಪುರ 40%, ತಮಿಳುನಾಡು 40% , ಉತ್ತರ ಪ್ರದೇಶ 39%, ಆಂಧ್ರ ಪ್ರದೇಶ 34%, ಅಸ್ಸಾಂ 34%, ಝಾರ್ಖಂಡ34%, ಒಡಿಸ್ಸಾ33%.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...