40 ವರ್ಷದವರು ಕೂಡ 20 ವರ್ಷದ ಹಾಗೆ ಕಾಣಬೇಕು ಅಂದರೆ ಮೊಸರಿಗೆ ಒಂದು ವಸ್ತು ಸೇರಿಸಿ ಮುಖಕ್ಕೆ ಹಚ್ಚಿ ಚಮತ್ಕಾರ ನೋಡಿ..

ಚರ್ಮದ ಕಾಂತಿಯ ವೈಟೇನಿಂಗ್ ಗಾಗಿ ಹಾಗೂ ಕಲೆಮುಕ್ತ ಚರ್ಮಕ್ಕಾಗಿ ಇಲ್ಲಿದೆ ಅದ್ಭುತವಾದ ಮನೆ ಮದ್ದು ಮೊಸರು ಅತ್ಯುತ್ತಮವಾದ ಚರ್ಮ ಸೌಂದರ್ಯವನ್ನು ಪಡೆಯಲು ಬಹಳಷ್ಟು ಸಹಕಾರಿಯಾಗಿದೆ. ಮೊಸರು ಸೌಂದರ್ಯ ವರ್ಧಕವಾಗಿ ಬಳಸುವುದು ಪ್ರಾಚೀನವಾದ ಪದ್ಧತಿ. ತಮ್ಮ ಚೆಲುವನ್ನು ಹೆಚ್ಚಿಕೊಳ್ಳುವ ಸಲುವಾಗಿ ಮೊಸರನ್ನು ಮಾಯಿಶ್ಚರೈಸರ್ ಅಥವಾ ಕ್ಲೆನ್ಸರ್ ಆಗಿ ಬಳಸುತ್ತಿದ್ದರು. ಇದೊಂದು ಅತ್ಯುತ್ತಮವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದ್ದು, ಕರುಳಿನ ಆರೋಗ್ಯ ಹಾಗು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿನ ಲ್ಯಾಕ್ಟಿಕ್ ಆಮ್ಲ, ಕ್ಯಾಲ್ಸಿಯಂ, ವಿಟಮಿನ್ ಬಿ ಇರುವ ಕಾರಣದಿಂದ ಸೌಂದರ್ಯ ಉತ್ಪನ್ನವಾಗಿ ಬಳಸಲಾಗುತ್ತದೆ. ಮೊಸರಿನಲ್ಲಿರುವ ಅಗಾಧ ಪ್ರಮಾಣದ ಪೋಷಕಾಂಶವು ಚರ್ಮವನ್ನು ಬಿಳಿಯಾಗಿಸಿ, ಹೊಳೆಯುಂತೆ ಮಾಡುತ್ತದೆ.

ನಿಮ್ಮ ಫೇಸ್ ಪ್ಯಾಕ್ ಗಳಿಗೆ ಮೊಸರನ್ನು ಬಳಸುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಮೊಸರು ಮುಖ್ಯವಾಗಿ ಸುಕ್ಕು, ಮೊಡವೆಗಳು, ಶುಷ್ಕತೆಯ ವಿರುದ್ಧ ಹೋರಾಡುತ್ತದೆ. ಅಷ್ಟೇ ಅಲ್ಲ, ತ್ವಚೆಯನ್ನು ಬಿಳಿಯಾಗಿಸಿ, ಹೊಳೆಯುವಂತೆ ಮಾಡುತ್ತದೆ. ಹೌದು ಇಲ್ಲಿ ನಾವು ಬಳಸುತ್ತಿರುವ ನಮ್ಮ ಮನೆಯ ಮದ್ದು ಎಂದರೆ ಮೊಸರು ಇದಕ್ಕೆ ಕೆಲವೊಂದು ಔಷಧಿ ಉಳ್ಳ ವಸ್ತುಗಳನ್ನು ಬೆರೆಸಿದರೆ ನಮ್ಮ ಮುಖಕ್ಕೆ ಕಾಂತಿ ತಾನಾಗಿಯೇ ಬರುತ್ತದೆ. ಸಾಮಾನ್ಯವಾಗಿ ಮುಖದ ಮೇಲಿರುವ ಧೂಳು ನೀರಿನಲ್ಲಿ ತೊಳೆದರೆ ಹೋಗುವುದಿಲ್ಲ, ಈ ಮೊಸರಿನಿಂದ ಏನಾದರೂ ಮುಖವನ್ನು ಸ್ವಚ್ಛಗೊಳಿಸಿದರೆ ನಮ್ಮ ಮುಖದ ಮೇಲಿರುವ ಧೂಳು, ಕಪ್ಪು ಕಲೆಗಳು ಕಡಿಮೆಯಾಗುತ್ತಾ ಬರುತ್ತದೆ. ಇನ್ನು ಮೊಡವೆಗಳಿಗೆ ಬಂದರೆ ಅದನ್ನೂ ಕೂಡ ಕಡಿಮೆಗೊಳಿಸಲು ಇದು ಸೂಕ್ತವಾದ ಔಷಧಿ.

ಬನ್ನಿ ಈ ಮನೆ ಮದ್ದನ್ನು ಹೇಗೆ ಮಾಡುವುದೆಂದು ನೋಡೋಣ ಮೊದಲಿಗೆ ಇದರಲ್ಲಿ ಮೂರು ಹಂತವಿರುತ್ತದೆ. ಮೊದಲಿಗೆ ಮೊದಲ ಹಂತದಲ್ಲಿ ನಾವು ಒಂದು ಬಟ್ಟಲಿಗೆ ಮೊಸರನ್ನು ಹಾಕಿಕೊಳ್ಳಬೇಕು ಅದನ್ನು ಚೆನ್ನಾಗಿ ಪೇಸ್ಟ್ನಂತೆ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಹಚ್ಚಿಕೊಂಡ ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಬೇಕು. ಎರಡನೇದಾಗಿ ಒಂದು ಚಮಚ ಮೊಸರಿಗೆ ಅರ್ಧ ಚಮಚದಷ್ಟು ಸಕ್ಕರೆಯನ್ನು ಹಾಕಿಕೊಳ್ಳಬೇಕು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಆ ಮಿಶ್ರಣವನ್ನು ಮುಖಕ್ಕೆ ಹಾಕಿಕೊಳ್ಳಬೇಕು ಹಾಕಿಕೊಂಡು, ನಂತರ ಐದು ನಿಮಿಷಗಳ ಕಾಲ ಅದನ್ನು ಹಾಗೆ ಬಿಡಬೇಕು. ತಣ್ಣೀರಲ್ಲಿ ಮುಖವನ್ನು ತೊಳೆಯಬೇಕು. ಇನ್ನು ಕೊನೆಯದಾಗಿ ಮೊಸರಿಗೆ ಒಂದು ಚಮಚ ಮೆಂತ್ಯ ಪುಡಿಯನ್ನು ಮಿಶ್ರಣ ಮಾಡಿ ಫೇಸ್ ಪ್ಯಾಕ್ನಂತೆ 15 ರಿಂದ 20 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿಕೊಂಡು ಬಿಡಬೇಕು ಇದನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಮಾಡಿದ್ದಲ್ಲಿ ನಿಮ್ಮ ಸ್ಕಿನ್ ಗ್ಲೋ ಆಗಿ ಪಳಪಳ ಹೊಳೆಯುವುದು ಮತ್ತು ಸ್ಕಿನ್ ಕೂಡ ವೈಟೇನೆಸ್ಸನ್ನು ಪಡೆಯುತ್ತದೆ.

You might also like

Comments are closed.