Weekend With Ramesh: ಈ ಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲು ಅಶ್ವಿನಿ ಪುನೀತ್ ರಾಜಕುಮಾರ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Ashwini Puneeth rajkumar ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕಿರುತೆರೆಯಲ್ಲಿ ಬಹುತೇಕ ಎಲ್ಲಾ ಪ್ರೇಕ್ಷಕರು ನೋಡಬಲ್ಲಂತಹ ಒಂದು ವಿಶೇಷ ಕಾರ್ಯಕ್ರಮ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ರಮೇಶ್(Ramesh Aravind) ರವರು ಈ ಕಾರ್ಯಕ್ರಮವನ್ನು ನಡೆಸಿಕೊಡುವಂತಹ ರೀತಿ ನಿಜಕ್ಕೂ ವಿಶೇಷವಾದದ್ದು. ಕರ್ನಾಟಕದ ಸಾಧಕರ ಪರಿಚಯವನ್ನು ಮಾಡುವಂತಹ ಈ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ.

ಇನ್ನು ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವಾರು ಗಣ್ಯರು, ರಾಜಕೀಯ(Politics) ಕ್ಷೇತ್ರದ ಕೆಲವೊಂದು ನಾಯಕರು ಸೇರಿದಂತೆ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಸೇರಿದಂತೆ ಸರಕಾರಿ ಕೆಲಸದಲ್ಲಿ ಕೂಡ ದಕ್ಷವಾಗಿ ಸೇವೆಯನ್ನು ಸಲ್ಲಿಸಿ ಖ್ಯಾತನಾಮರಾಗಿರುವ ಹಲವಾರು ಗಣ್ಯರು ಕೂಡ ಆಗಮಿಸಿ ತಮ್ಮ ಜೀವನ ಚರಿತ್ರೆಯನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ.

ಇನ್ನು ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ರವರು ಕೂಡ ಬಂದಿದ್ದರು. ಈ ಬಾರಿ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಹೊಸ ಸೀಸನ್ ಪ್ರಾರಂಭ ಆಗುತ್ತಿದ್ದು ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಬರೋದು ಪಕ್ಕ ಎನ್ನುವ ಮಾಹಿತಿಗಳು ದೊರಕುತ್ತಿವೆ.

ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರು ಈ ಕಾರ್ಯಕ್ರಮಕ್ಕೆ ಎಷ್ಟು ಸಂಭಾವನೆ ಪಡೆದುಕೊಳ್ಳಬಹುದು ಎನ್ನುವ ಚರ್ಚೆಗಳು ಕೂಡ ನಡೆಯುತ್ತಿವೆ. ಆದರೆ ಈಗಾಗಲೇ ಪುನೀತ್ ರಾಜಕುಮಾರ್(Puneeth Rajkumar) ಈ ಕಾರ್ಯಕ್ರಮಕ್ಕೆ ಬಂದಿದ್ದು ಯಾವುದೇ ಸಂಭಾವನೆಯನ್ನು ಅವರು ಪಡೆದುಕೊಂಡಿರಲಿಲ್ಲ. ಗಂಡನ ಹಾಗೆ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ರವರು ಕೂಡ ಈ ಕಾರ್ಯಕ್ರಮಕ್ಕೆ ಯಾವುದೇ ಸಂಭಾವನೆಯನ್ನು ಪಡೆಯುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಅಪ್ಪು ಅವರ ಹಾದಿಯನ್ನೇ ತುಳಿಯುತ್ತಿರುವ ಅಶ್ವಿನಿ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂಬುದಾಗಿ ಹಾರೈಸೋಣ.

You might also like

Comments are closed.