ಮದುವೆ ಮನೆ ಅಂದ ಮೇಲೆ ಅಲ್ಲಿ ಬೇಕಾದಷ್ಟು ಗಲಾಟೆ ಸದ್ದು ಸಡಗರ ಎಲ್ಲವೂ ಕೂಡ ಇರುತ್ತದೆ, ನೆಂಟರು ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರುವ ಈ ಸುಸಂದರ್ಭದಲ್ಲಿ ಎಲ್ಲರ ಗಮನ ಮಾತ್ರ ಈ ಕಾರ್ಯಕ್ರಮದ ಕೇಂದ್ರ ಬಿಂದು ಆದ ಮಧು ಮಕ್ಕಳ ಮೇಲೆ ಇರುತ್ತದೆ. ಮದುವೆ ಎನ್ನುವ ಶಬ್ದವೇ ವಿಶೇಷ ವೈಬ್ರೇಶನ್ ತರುತ್ತದೆ, ಅದರಲ್ಲೂ ನಮ್ಮ ಭಾರತದಲ್ಲಿ ನಡೆಯುವ ಸಾಂಪ್ರದಾಯಿಕ ಮದುವೆಗಳ ಬಗ್ಗೆ ಇನ್ನೂ ಆಸಕ್ತಿ ಹೆಚ್ಚು ಮದುವೆ ಮನೆ ಬಗ್ಗೆ ಬರುವ ಸಿನಿಮಾಗಳು ಹಾಡುಗಳು ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಬಗ್ಗೆ ಬರುವ ಕ್ಲಿಪಿಂಗ್ ಗಳು ಎಲ್ಲವೂ ಕೂಡ ಮದುವೆ ಸಂಭ್ರಮದಲ್ಲಿ ಭಾಗಿಯಾಗಿರುವವರು ಮಾತ್ರವಲ್ಲದೆ ನೋಡುವವರ ಮನಸ್ಸನ್ನು ಕೂಡ ಹಸಿರಾಗಿಸುತ್ತವೆ.
ಆದರೆ ಎಲ್ಲಾ ಮದುವೆಗಳು ಕೂಡ ಇಷ್ಟೇ ಸಂಭ್ರಮದಲ್ಲಿ ಜರುಗುವುದಿಲ್ಲ, ಮದುವೆ ಮನೆ ಎಂದ ಮೇಲೆ ಅಲ್ಲಿ ನೂರಾರು ತಕರಾರುಗಳು ಕೂಡ ಇದ್ದೇ ಇರುತ್ತವೆ, ಮದುವೆಗೆ ತಂದ ಬಟ್ಟೆಗಳು, ಒಡವೆಗಳು, ಕೊಡುವುದು ಮತ್ತು ತೆಗೆದುಕೊಳ್ಳುವ, ಊಟದ ವಿಚಾರ ಸೇರಿದಂತೆ ಯಾವ ವಿಚಾರ ಬೇಕಾದರೂ ವಿಪರೀತಕ್ಕೆ ಹೋಗಿ ಮದುವೆ ನಿಲ್ಲುವ ಹಂತವನ್ನು ತಲುಪಬಹುದು. ಸಂಬಂಧಿಕರು ಅತಿಥಿಗಳು ಮಾಡುವ ಈ ಎಡವಟ್ಟಿನಿಂದ ಮದುವೆ ಆಗಬೇಕಾದ ಮನಸುಗಳು ಒಡೆದು ಹೋಗಿರುತ್ತವೆ.
ಇದನ್ನೆಲ್ಲ ಮೀರಿಯೂ ಕೂಡ ಎಷ್ಟೋ ಮದುವೆಗಳು ನಡೆದಿವೆ, ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಗ ಮದುವೆಗೆ ಸಂಬಂಧಪಟ್ಟ ಇನ್ನೊಂದು ರೀತಿಯ ವಿಡಿಯೋ ಒಂದು ವೈರಲ್ ಆಗಿದ್ದು. ಆ ವಿಡಿಯೋದಲ್ಲಿ ಮದುವೆಗೆ ಭಾಗಿಯಾಗಿದ್ದ ಎಲ್ಲರೂ ಕೂಡ ಸಂಭ್ರಮದಲ್ಲಿ ಮೋಜು ಮಸ್ತಿ ಮಾಡಿಕೊಂಡು ಖುಷಿಯಾಗಿದ್ದರೆ, ವೇದಿಕೆ ಮೇಲಿದ್ದ ಜೋಡಿಗಳು ಮಾತ್ರ ಪರಸ್ಪರ ಕಿತ್ತಾಡಿಕೊಂಡು ಹೊ’ ಡೆದಾಡಿಕೊಳ್ಳುವ ಹಂತವನ್ನು ಕೂಡ ತಲುಪಿದ್ದಾರೆ.
ಇದು ಸೇರಿದವರೆಲ್ಲರಿಗೂ ಶಾ’ ಕ್ ಆಗುವಂತೆ ಮಾಡಿದೆ, ಈ ವಿಡಿಯೋದಲ್ಲಿ ಮದುವೆ ಆಗಬೇಕಾಗಿದ್ದ ಮಧುಮಗ ರೆಡಿಯಾಗಿ ವೇದಿಕೆ ಮೇಲೆ ಇರುತ್ತಾನೆ. ಮಧು ಮಗಳು ಕೂಡ ವೇದಿಕೆ ಮೇಲೆ ನಿಂತು ಸಾಂಪ್ರದಾಯಕವಾಗಿ ನಡೆಯಬೇಕಾಗಿದ್ದ ಎಲ್ಲಾ ಆಚರಣೆಗಳನ್ನು ಮಾಡುತ್ತಿರುತ್ತಾಳೆ. ಆಗ ಅಲ್ಲಿದ್ದ ಸಂಬಂಧಿಕರು ಒಂದು ಶಾಸ್ತ್ರ ಮುಗಿದ ಮೇಲೆ ಆ ಹುಡುಗನಿಗೆ ಕೈಗೆ ಸಿಹಿ ತಿನಿಸು ಕೊಟ್ಟು ಹುಡುಗಿಗೆ ತಿಳಿಸುವಂತೆ ಹೇಳುತ್ತಾರೆ ಹುಡುಗ ಕೂಡ ಹಿರಿಯರು ಹೇಳಿದ ಮಾತಿಗೆ ಬೆಲೆಕೊಟ್ಟು ಮಧುಮಗಳಿಗೆ ಸಿಹಿ ತಿನಿಸಲು ಮುಂದಾಗುತ್ತಾನೆ.
ಆದರೆ ಮಧುಮಗಳು ಅದನ್ನು ತಿರಸ್ಕರಿಸುತ್ತಾಳೆ, ಎಲ್ಲರ ಎದುರು ಹುಡುಗನಿಗೆ ಅದು ಬೇಸರ ಮತ್ತು ಮುಜುಗರ ತರುತ್ತದೆ, ಆಗ ಸಿಹಿ ಎಸೆಯುತ್ತಾನೆ. ನಂತರ ಹುಡುಗಿಗೆ ಸಿಹಿ ತಿನಿಸುವಂತೆ ಹೇಳಿ ಹುಡುಗಿ ಕೈಗೂ ಕೂಡ ಸಿಹಿ ತಿಂಡಿ ಕೊಡುತ್ತಾರೆ, ಆಗ ಹುಡುಗಿಯು ಆತನಿಗೆ ಸಿಹಿ ತಿನಿಸಲು ಮುಂದಾಗುತ್ತಾಳೆ. ಆಗ ಆತನೂ ಕೂಡ ಅದನ್ನು ನಿರ್ಲಕ್ಷಿಸುತ್ತಾನೆ. ಅಷ್ಟಕ್ಕೆ ನಿಲ್ಲದ ಆಕೆಯು ಆತನ ಮುಖದ ಮೇಲೆ ತಿಂಡಿಯನ್ನು ಎಸೆದು ಬಿಡುತ್ತಾಳೆ.
ಅದುವರೆಗೂ ಸಹಿಸಿಕೊಂಡಿದ್ದ ಹುಡುಗನಿಗೆ ಆಗ ಪಿತ್ತ ನೆತ್ತಿಗೇರುತ್ತದೆ, ಒಂದು ಕ್ಷಣ ಕೂಡ ಯೋಚನೆ ಮಾಡದೆ ಹುಡುಗಿಯ ಮೇಲೆ ಕೈ ಎತ್ತಿ ಎರಡು ಏ’ ಟು ಹೊಡೆದೇಬಿಡುತ್ತಾನೆ. ನಂತರ ಸುತ್ತಮುತ್ತ ಇದ್ದ ಎಲ್ಲರೂ ಕೂಡ ಹುಡುಗನನ್ನು ತಡೆದಿದ್ದಾರೆ. ಈ ವಿಡಿಯೋ ನೋಡುತ್ತಿದ್ದರೆ ಆ ಹುಡುಗಿಗೆ ಮದುವೆ ಇಷ್ಟವಿಲ್ಲದೆ ಬಲವಂತವಾಗಿ ಮದುವೆ ಮಾಡುತ್ತಿರುವ ರೀತಿ ಇದೆ. ಅದಕ್ಕಾಗಿ ಆಕೆ ಆ ರೀತಿ ನಡೆದುಕೊಂಡಿದ್ದಾಳೆ ಎನಿಸುತ್ತದೆ ಸದ್ಯಕ್ಕೆ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಆ ವಿಡಿಯೊ ಕೆಳಗಿದೆ ನೋಡಿ…