ಮದುವೆ (Marriage) ಎಂದರೇನೇ ಅಲ್ಲೊಂದು ಸಂಭ್ರಮದ ವಾತಾವರಣವು ಸೃಷ್ಟಿಯಾಗಿರುತ್ತದೆ. ಫ್ಯಾಮಿಲಿಯಲ್ಲಿ ಯಾರದೇ ಮದುವೆ ಇರಲಿ, ಆದರೆ ಬಂಧು ಭಾಂದವರಿಗೆ ಸಂಭ್ರಮದ ದಿನ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಂಧು ಬಾಂಧವರು, ದೂರದ ನೆಂಟರು ಬಂಧು ಮಿತ್ರರು ಒಂದಾಗುವ ಘಳಿಗೆಯದು. ಮನೆಯಲ್ಲಿ ಸಂಭ್ರಮದ ವಾತಾವರಣವು ಸೃಷ್ಟಿಯಾಗುತ್ತದೆ. ಮದುವೆ ಸಿದ್ಧತೆಗಳು ತಿಂಗಳುಗಟ್ಟಲೇ ನಡೆಯುತ್ತದೆ.
ಹೀಗಾಗಿ ಮದುವೆಯ ಬಗ್ಗೆ ಎಲ್ಲರಿಗೂ ಕೂಡ ಕನಸು ಕಾಣುತ್ತಾರೆ. ಮದುವೆ ಎಲ್ಲರೂ ಕೂಡ ನಾವು ಹೀಗೆ ಮದುವೆಯಾಗಬೇಕು, ಹಾಗೆ ಮದುವೆಯಾಗಬೇಕು ಎಂದು ಮದುವೆಯ ಬಗ್ಗೆ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ ಮದುವೆಯ ಕ್ಷಣಗಳನ್ನು ಸುಂದರವಾಗಿಟ್ಟುಕೊಳ್ಳಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸುವ ಜೋಡಿಗಳು ಇದ್ದಾರೆ. ಇನ್ನು ಕೆಲವು ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಮದುವೆ ಮಾಡಿಕೊಳ್ಳುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಮದುವೆಯಾಗುವ ಹೆಣ್ಣು ಗಂಡು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿ ಬಿಟ್ಟಿದೆ. ಹೀಗಾಗಿ ಪ್ರತಿಯೊಂದು ಜೋಡಿಯು ಪ್ರೀ ವೆಡ್ಡಿಂಗ್ ಫೋಟೋಶೂಟ್ (Pre Wedding Photoshoot)ನತ್ತ ಗಮನ ಹರಿಸುತ್ತಾರೆ. ಅದಲ್ಲದೇ, ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಪ್ರೆಪರಶನ್ ಬಾರಿ ಜೋರಾಗಿಯೇ ಇರುತ್ತದೆ.
ಹೌದು, ಪ್ರೀ ವೆಡ್ಡಿಂಗ್ ಶೂಟ್ (Pre Wedding Shoot) ಅನ್ನು ವಿವಿಧ ಥೀಮ್ ಗಳಲ್ಲಿ ಮಾಡುತ್ತಾರೆ. ಒಳ್ಳೆಯ ಬಟ್ಟೆಗಳನ್ನು ತೊಟ್ಟು, ಒಳ್ಳೆಯ ಸ್ಥಳಗಳನ್ನು ಆಯ್ಕೆ ಮಾಡಿದ್ದೂ ಒಂದೊಳ್ಳೆ ಥೀಮ್ ಅಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡುತ್ತಾರೆ. ಇತ್ತೀಚೆಗಷ್ಟೇ ಚರಂಡಿಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿ, ಎಲ್ಲರ ಗಮನ ಸೆಳೆದಿದ್ದರು. ಆದರೆ ಇದೀಗ ಮದುಮಗಳೊಬ್ಬಳು ಫೋಟೋಗೆ ಪೋಸ್ ನೀಡಿದ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.
View this post on Instagram
ಮದುಮಗಳ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೋದಲ್ಲಿ ಮದುಮಗಳು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮೆಲ್ಲಗೆ ನಡೆದುಕೊಂಡು ಬಂದು ಸೀರೆಯನ್ನು ಪಂಚೆಯ ಹಾಗೆ ಮೇಲಕ್ಕೆ ಎತ್ತಿದ್ದಾಳೆ. ಈ ವೇಳೆಯಲ್ಲಿ ಮದುಮಗಳ ಕಾಲಿನಲ್ಲಿದ್ದ ಟ್ಯಾಟು ಎಲ್ಲರ ಗಮನ ಸೆಳೆದಿದೆ. ಹಾವಿನ ಟ್ಯಾಟು ನೋಡಿದ ನೆಟ್ಟಿಗರು ಟ್ಯಾಟು ಬೆಂಕಿ ಎಂದು ಪ್ರತಿಕ್ರಿಯಿಸಿದ್ದು, ಬೆಂಕಿ ಇಮೋಜಿ ಹಾಕಿದ್ದಾರೆ. ಸದ್ಯಕ್ಕೆ ಈ ವಿಡಿಯೋವೊಂದು ನೆಟ್ಟಿಗರ ವಲಯದಲ್ಲಿ ವೈರಲ್ ಆಗಿವೆ.