WATER-POWER

Viral Video: ನೀರಿನಿಂದ ಲೋಹವನ್ನು ಕಟ್ ಮಾಡಬಹುದೇ..? ನೀರಿನ ಶಕ್ತಿ ಅರಿಯಲು ಒಮ್ಮೆ ನೋಡಿ ಈ ವಿಡಿಯೋ!

Entertainment/ಮನರಂಜನೆ

ನೀರು ನಮ್ಮ ಜೀವನದ ಮೂಲಭೂತ ಅಗತ್ಯಗಳಲ್ಲಿ ಒಂದು. ಬಹುಶಃ ನೀರಿಲ್ಲದ ಜೀವನವನ್ನು ಊಹಿಸಿಕೊಳ್ಳುವುದು ಕೂಡಾ ಅಸಾಧ್ಯ‌. ತಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ ನೀರು. ಜಲ ಎಂದರೆ ಜೀವನ, ಜಲವಿಲ್ಲದೇ ಜೀವನವಿಲ್ಲ ಎಂಬ ಸತ್ಯ ನಾವು ಅರಿತಿರುವುದರಿಂದಲೇ ನೀರನ್ನು ಜೀವ ಜಲ ಎಂದು ಕೂಡಾ ಕರೆಯುತ್ತೇವೆ‌. ನೀರಿನ ಮೌಲ್ಯ, ಅದರ ಪ್ರಾಮುಖ್ಯತೆಯನ್ನು ಅರಿತೂ ಕೂಡಾ ನಾವು ಇಂದು ಭೂಮಿಯ ಮೇಲೆ ಲಭ್ಯವಿರುವ ಅಲ್ಪ ಪ್ರಮಾಣದ ಶುದ್ಧ ನೀರನ್ನು ಸಂರಕ್ಷಣೆಯನ್ನು ಮಾಡಲು ಗಮನ ನೀಡದೇ ಇರುವುದು ನಿಜಕ್ಕೂ ವಿಶಾದನೀಯ ಹಾಗೂ ನಾವು ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗುತ್ತಿದ್ದೇವೆ.

ನೀರಿಗೆ ಅಗಾಧವಾದ ಶಕ್ತಿಯಿದೆ ಎಂಬುದನ್ನು ನಾವು ಈಗಾಗಲೇ ಅರಿತಿದ್ದೇವೆ. ಜಲ ವಿದ್ಯುತ್ ಶಕ್ತಿ ಇಂದು ನಮ್ಮ ಮನೆಗಳ ಬೆಳಕಿಗೆ, ವಿದ್ಯುತ್ ಪರಿಕರಗಳ ಕಾರ್ಯಗಳಿಗೆ ಮೂಲ. ಇಂತಹ ನೀರಿನಿಂದ ಒಂದು ಲೋಹವನ್ನು ಕೂಡಾ ಕತ್ತರಿಸಬಹುದು ಎಂದರೆ ನೀವು ಅದು ಅಸಾಧ್ಯ ಎನ್ನಬಹುದು. ನೀರಿನಿಂದ ಲೋಹವನ್ನು ಕತ್ತರಿಸುವುದೇ? ಎಂತಹ ಆಲೋಚನೆ, ಏನು ಸುಮ್ಮನೆ ಏನೇನೋ ಹೇಳುವರು ಎನ್ನುವಿರಾದರೆ ನಿಮ್ಮ ಊಹೆ ಖಂಡಿತ ತಪ್ಪು. ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗುತ್ತಿದ್ದ ಆ ವೀಡಿಯೋ ನೋಡಿದರೆ ಖಂಡಿತ ನಿಮ್ಮ ಆಲೋಚನೆ ಬದಲಾಗಿ ನೀರಿನಲ್ಲಿ ಇರುವ ಶಕ್ತಿಯನ್ನು ನೋಡಿ ಬೆರಗಾಗುವುದು ಖಂಡಿತ.

ವೀಡಿಯೋದಲ್ಲಿ ಒಂದು ಕಬ್ಬಿಣದ ಬೀಗವನ್ನು ಇಡಲಾಗಿದೆ. ಇದರ ಮೇಲೆ 90,000 PSI (pound force per square inch) ರಭಸದಲ್ಲಿ ನೀರನ್ನು ಹರಿಸಲಾಗಿದೆ. ನೀರನ್ನು ಒಂದು ಯಂತ್ರದ ಸಹಾಯದಿಂದ ನಿರ್ಧಿಷ್ಟವಾಗಿ ಆ ಬೀಗದ ಮೇಲೆ ಹರಿಸಿಕೊಂಡು ಬರುವಾದ, ಬೀಗದ ಮಧ್ಯ ಭಾಗದ ಮೇಲೆ ಬಲ ಪ್ರಯೋಗ ಮಾಡಿದಂತೆ ನೀರು ಬೀಳುತ್ತಿದ್ದರೆ ಬೀಗ ಬಹಳ ಆರಾಮಾಗಿ ಸೀಳಿದಂತೆ ಕಂಡು ಬರುತ್ತದೆ‌. ಬಹಳ ವಿಸ್ಮಯ ಎನ್ನುವಂತೆ ಕಾಣುವ ವೀಡಿಯೋದಲ್ಲಿ ನೀರು ಹಾಗೆ ಸಾಗುತ್ತಾ ಹೋದ ಮೇಲೆ ಬೀಗ ಎರಡು ಸಮ ತುಂಡುಗಳಾಗಿ ವಿಭಜಿತವಾಗಿರುವುದನ್ನು ನಾವು ನೋಡಬಹುದು.

ನೀರಿನ ಇಂತಹ ಅದ್ಭುತವಾದ ವೀಡಿಯೋ ನೋಡಿದ ನೆಟ್ಟಿಗರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ‌. ಸೆಪ್ಟೆಂಬರ್ ಒಂದರಂದು ಶೇರ್ ಆದ ಈ ವೀಡಿಯೋ ಯಾವ ಮಟ್ಟದ ಆಕರ್ಷಣೆ ಮಾಡಿದೆ ಎಂದರೆ ಈಗಾಗಲೇ ವೀಡಿಯೋ ವೀಕ್ಷಣೆಗಳ ಸಂಖ್ಯೆ ಹತ್ತು ಲಕ್ಷ ದಾಟಿದೆ. ನೂರಾರು ಜನರು ಅವುಗಳನ್ನು ರೀಟ್ವೀಟ್ ಮಾಡುತ್ತಾ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮಹಾದ್ಭುತ ಎನಿಸುವ ವೀಡಿಯೋ ನೋಡುತ್ತಲಿದ್ದರೆ ಇದು ವಿಸ್ಮಯ ಎಂದು ನಮಗೂ ಕೂಡಾ ಅನಿಸದೇ ಇರಲಾರದು ಮಾತ್ರವೇ ಅಲ್ಲದೇ ನೀರಿನಲ್ಲಿ ಇಂತಹುದೊಂದು ಶಕ್ತಿ ಅಡಗಿದೆಯಾ ಎಂದು ದಿಗ್ಬ್ರಮೆ ಉಂಟಾಗುತ್ತದೆ.

ವೀಡಿಯೋ ನೋಡಿದ ನೆಟ್ಟಿಗರು ನೀರನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ಲೇಸರ್ ಗಿಂತ ಶಕ್ತಿ ಶಾಲಿ ಎಂದಿದ್ದಾರೆ. ಈ ವಿಧಾನವನ್ನು ಬಳಸಿಕೊಳ್ಳುವ ಹಾಗೆ ಮಾಡಿದರೆ ನಮಗೆ ಇದು ಅನುಕೂಲವಾಗುತ್ತದೆ ಎಂದಿದ್ದಾರೆ ಕೆಲವರು. ಮತ್ತೆ ಕೆಲವರು ಏನಿದು ಸಾಮಾನ್ಯ ನೀರಿನಲ್ಲಿ ಇಂತಹ ಶಕ್ತಿ ಇದೆಯೇ? ಓ ಮೈ ಗಾಡ್ ಎಂದು ಉದ್ಗಾರವನ್ನು ತೆಗೆದಿದ್ದಾರೆ. ಮತ್ತೆ ಕೆಲವರು ಆಶ್ಚರ್ಯ ವ್ಯಕ್ತಪಡಿಸುವ ಫೋಟೋ, ಇಮೋಜಿಗಳನ್ನು ಹಾಕಿ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.




ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.