vote

ಕಾಂಗ್ರೆಸ್ ನವರು ಸೀರೆ,ಮಿಕ್ಸಿ,ರೊಕ್ಕ,ಕುಕರ್ ಕೊಡ್ತಾರೆ ಅಂತ ಬಂದಿವಿ,ಆದರೆ ಓಟ್ ಮಾತ್ರ…!

Entertainment/ಮನರಂಜನೆ

ಇನ್ನೇನು ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪಕ್ಷದ ವರಿಷ್ಠರು ಮ್ಯಾಜಿಕ್ ನಂಬರ್ 113 ಕ್ಕಾಗಿ ಗೆಲ್ಲುವ ಕುದುರೆಗಳನ್ನು ಹುಡುಕುವಲ್ಲಿ ಬ್ಯುಸಿಯಾಗಿದ್ದರೆ ಟಿಕೆಟ್ ಆಕಾಂಕ್ಷಿಗಳು ತಮ್ಮ ನೆಚ್ಚಿನ ನಾಯಕರುಗಳ ಬಳಿ ತನಗೆ ಟಿಕೆಟ್ ಕೊಡಿಸಿ ಎಂದು ದುಂಬಾಲು ಬಿದ್ದಿದ್ದಾರೆ, ಮತ್ತಷ್ಟು ಜನರು ಟಿಕೆಟ್ ತನಗೆ ಸಿಗುತ್ತದೆ ಎಂಬ ಭರವಸೆಯೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸುತ್ತಾಡುತ್ತಾ ಈಗಿನಿಂದಲೇ ಅಘೋಷಿತ ಪ್ರಚಾರ ಆರಂಭಿಸಿದ್ದಾರೆ.

ಮತ್ತೊಂದೆಡೆ ಪಕ್ಷದ ನಾಯಕರುಗಳು ಪ್ರಮುಖ ನಗರ ಹಾಗೂ ಸ್ಥಳಗಳಲ್ಲಿ ರೋಡ್ ಶೋ ಹಾಗೂ ಸಮಾವೇಶಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಪಕ್ಷದ ನಾಯಕರುಗಳ ಸಮಾವೇಶ ಹಾಗೂ ರೋಡ್ ಶೋ ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಉದ್ದೇಶದಿಂದ ಜನರಿಗೆ ಹಲವಾರು ಆಮಿಷಗಳನ್ನೊಡ್ಡಿ ಅಗತ್ಯ ವಸ್ತುಗಳನ್ನು ಕೊಟ್ಟು ಅದರೊಟ್ಟಿಗೆ ಕೈಗೊಂದಿಷ್ಟು ಕಾಸು ಕೊಟ್ಟು ಬಸ್ ಹಾಗೂ ಟೆಂಪೋಗಳಲ್ಲಿ ಜನರನ್ನು ತುಂಬಿಸಿಕೊಂಡು ಬರುತ್ತಾರೆ.

ಆ ಮೂಲಕ ತಮ್ಮ ಪಕ್ಷದ ನಾಯಕರುಗಳನ್ನು ಮೆಚ್ಚಿಸುವುದಲ್ಲದೇ ವಿರೋಧ ಪಕ್ಷಗಳ ಪಾಳಯಗಳಲ್ಲಿ ನಡುಕ ತರಿಸುವ ಹುಮ್ಮಸಿನೊಂದಿಗೆ ಕಾರ್ಯನಿಮಿತ್ತರಾಗಿದ್ದಾರೆ. ಆದರೆ ಇದು ಡಿಜಿಟಲ್ ಯುಗ ಎಲ್ಲರ ಕೈಯಲ್ಲಿಯೂ ಮೊಬೈಲ್ ಕ್ಯಾಮರಾ ಹಾಗೂ ಸೀಕ್ರೆಟ್ ಕ್ಯಾಮೆರಾಗಳಂತಹ ಆಧುನಿಕ ಉಪಕರಣಗಳ ಭರಾಟೆ ಜೋರಾಗಿದೆ,

ಹೀಗಾಗಿ ಜನರನ್ನು ಯಾವ ರೀತಿ ಸಮಾವೇಶಕ್ಕೆ ತರುತ್ತಾರೆ ಹಾಗೂ ಅವರಿಗೆ ಸಮಾವೇಶಕ್ಕೆ ಮೊದಲು ಹಾಗೂ ನಂತರ ಏನೆಲ್ಲಾ ವ್ಯವಸ್ಥೆ ಮಾಡಲಾಗಿರುತ್ತದೆ ಎಂಬ ಬಗ್ಗೆ ಆಗಾಗ ವಿಡಿಯೋಗಳು ವೈರಲ್ ಆಗುತ್ತಿದ್ದವು, ಆದರೆ ಇದೀಗ ವೈರಲ್ ಆಗುತ್ತಿರುವ ಒಂದು ವಿಡಿಯೋ ನೆಟ್ಟಿಗರಲ್ಲಿ ಅಚ್ಚರಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಗೇಲಿ ಮಾಡುವ ಮಟ್ಟಿಗೆ ಇದೆ!

ಹೌದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ ಓರ್ವ ವೃದ್ದೆ ಸಮಾವೇಶಕ್ಕಾಗಿ ಬಂದು ಕಾಂಗ್ರೆಸ್ ಬಾವುಟ ಹಿಡಿದು ಒಂದು ಕಟ್ಟೆಯ ಮೇಲೆ ಕುಳಿರುತ್ತಾರೆ, ಆಗ ಅಲ್ಲಿಗೆ ಬರುವ ಓರ್ವ ವ್ಯಕ್ತಿ ಅಂದರೆ ವಿಡಿಯೋ ಮಾಡಿದ ವ್ಯಕ್ತಿಯೇ ಆ ವೃದ್ದೆಯನ್ನು ಕುರಿತು, ‘ಎಷ್ಟು ಘಂಟೆಗೆ ಬರುತ್ತಾರೆ? ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಆ ವೃದ್ದೆ ‘ಇನ್ನೊಂದು ಹತ್ತು ಹದಿನೈದು ನಿಮಿಷದಲ್ಲಿ ಬರಬಹುದು’ ಎನ್ನುತ್ತಾಳೆ.

ಮಾತು ಮುಂದುವರೆಸಿದ ಆ ವ್ಯಕ್ತಿ, ‘ನಿಮಗೆ ಏನೇನು ಕೊಟ್ಟರು ನಮಗೆ 50-50 ರೂಪಾಯಿ ಮಾತ್ರ ಕೊಟ್ಟರು’ ಎನ್ನುತ್ತಾರೆ. ಇದಕ್ಕೆ ಉತ್ತರಿಸುವ ಆ ವೃದ್ದೆ, ನಮಗ್ 100 ರೂಪಾಯಿ ಕೊಟ್ಟರ್ ರಿ, ಆ ಕಡೆ ಎಲ್ಲ ಬಾಳ ಬಾಳ ಕೊಟ್ಟರು, ಮಿಕ್ಸಿ, ಕುಕ್ಕರ್, ಚೊಲೋ ಚೊಲೋ ಸೀರೆ ಎಲ್ಲ ಕೊಟ್ರು, ಈಗ ನಮ್ ಜೋಡಿ ಬಂದವರಲ್ಲಿ ಕೆಲವರು ಅವೇ ಸೀರೆ ಉಟ್ಕೊಂಡು ಬಂದಾರ್ ನೋಡ್ರಿ’ ಎನ್ನುತ್ತಾಳೆ.

ಇನ್ನಷ್ಟು ಮಾತಿಗೆಳೆದ ಆ ವ್ಯಕ್ತಿ, ‘ಇಷ್ಟೆಲ್ಲ ಕೊಟ್ರು ವೋಟ್ ಯಾರಿಗ್ ಹಾಕ್ತಿರಿ ಎಂದು ಕೇಳುತ್ತಾನೆ’, ಆಗ ಅತ್ತಿತ್ತ ನೋಡುವ ಆ ವೃದ್ದೆ, ಅಚ್ಚರಿ ಎಂಬಂತೆ ಇವೆಲ್ಲ ಕೊಡ್ತಾರೆ ಅಂತಾ ಸುಮ್ ಬಂದಿವಿ, ಆದ್ರೆ ವೋಟ್ ಮೋದಿಗೆ ಹಾಕ್ತಿವಿ’ ಎನ್ನುತ್ತಾಳೆ! ಆಗ ಆ ವ್ಯಕ್ತಿಯದ್ದು ನಗುವ ಸರದಿ.

ಈ ವಿಡಿಯೋ ಸೋಶಿಯಲ್ ಮೀಡಿಯಾದ ವಿವಿದ ವೆದಿಕೆಗಳಲ್ಲಿ ವೈರಲ್ ಆಗಿದ್ದು ಸಧ್ಯ ಭಾರತದಲ್ಲಿ ಮೋದಿಯವರ ಮೇಲೆ ಜನತೆಗೆ ಭರವಸೆ ಎಷ್ಟಿದೆ ಎಂದು ತೋರಿಸುತ್ತಿದೆ, ಅಲ್ಲದೇ ಇಷ್ಟು ವರ್ಷಗಳ ಹಾಗೇ ಆಮಿಷಗಳಿಗೆ ಒಳಗಾಗುವುದಿಲ್ಲ ಎಂಬ ಸಂದೇಶ ಸಾರಿದಂತಿದೆ, ಮತದಾರ ನೋಟಿಗೆ ವೋಟ್ ಹಾಕುವುದಿಲ್ಲ ಎಂಬುದನ್ನು ಕೂಡ ಎಲ್ಲ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕು.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.