ವೈಷ್ಣವಿ

ಹೊಸ ಫೋಟೋ ಶೂಟ್ ಮಾಡಿಸಿದ ಅಗ್ನಿಸಾಕ್ಷಿ ವೈಷ್ಣವಿ,ಫೋಟೋಸ್ ನೋಡಿ ದಂಗಾದ ನೆಟ್ಟಿಗರು…

CINEMA/ಸಿನಿಮಾ

ಕನ್ನಡ ಕಿರುತೆರೆಯ ವೀಕ್ಷಕರಿಗೆ ವೈಷ್ಣವಿ ಗೌಡ ಚಿರಪರಿಚಿತ. ವೈಷ್ಣವಿ ಎನ್ನುವುದಕ್ಕಿಂತ ಸನ್ನಿಧಿ ಎಂದರೆ ಇನ್ನಷ್ಟು ಜನರಿಗೆ ಇವರು ಯಾರೆಂದು ಅರ್ಥ ಆಗುತ್ತದೆ. ‘ಅಗ್ನಿಸಾಕ್ಷಿ’ಯ ಈ ಕ್ಯೂಟ್ ಚಲುವೆ ಈಗ ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.ವೈಷ್ಣವಿ ಗೌಡ ಈಗ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಹೊಸ ಸ್ಟೈಲ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಧಾರಾವಾಹಿಯಲ್ಲಿ ಒಂದೇ ರೀತಿಯ ಲುಕ್ ನಲ್ಲಿ ನೋಡಿ ನೋಡಿ ಬೇಸರ ಆಗಿದ್ದ ವೀಕ್ಷಕರು ವೈಷ್ಣವಿ ಚಲುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.ಮಾಡ್ರನ್ ಡ್ರೆಸ್ ನಲ್ಲಿ ಡಿಫರೆಂಟ್ ಲುಕ್ ನಲ್ಲಿ ವೈಷ್ಣವಿ ಮಿಂಚಿದ್ದಾರೆ. ಫೋಟೋ ನೋಡಿದ ತಕ್ಷಣ ಇದು ವೈಷ್ಣವಿ ಅವರೇನಾ ಎನ್ನುವ ಮಟ್ಟಿಗೆ ಬದಲಾಗಿದ್ದಾರೆ.

ವೈಷ್ಣವಿ ಅಂದವನ್ನು ಪುನೀತ್ ಗೌಡ ತಮ್ಮ ಫೋಟೋದಲ್ಲಿ ಸೆರೆ ಹಿಡಿದಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫೋಟೋವನ್ನು ವೈಷ್ಣವಿ ಹಂಚಿಕೊಂಡಿದ್ದಾರೆ. ಸಾವಿರಾರು ಜನರು ಈ ಫೋಟೋಗಳನ್ನು ಮೆಚ್ಚಿಕೊಂಡಿದ್ದಾರೆ.ಸದ್ಯ, ‘ಅಗ್ನಿಸಾಕ್ಷಿ’ ಸಿನಿಮಾದ ಮುಖ್ಯ ಪಾತ್ರದಲ್ಲಿ ವೃಷ್ಣವಿ ನಟಿಸುತ್ತಿದ್ದಾರೆ. ನಟ ವಿಜಯ ಸೂರ್ಯ ಪಾತ್ರ ಮುಗಿದಿದ್ದು, ನಾಯಕಿ ವೈಷ್ಣವಿ ಪಾತ್ರ ಕೂಡ ಮುಗಿಯಬಹುದು ಎನ್ನುವ ಅನುಮಾನ ಮೂಡಿದೆ.

ಹಾಟ್ ಅವತಾರದಲ್ಲಿ ಅಗ್ನಿ ಸಾಕ್ಷಿ ವೈಷ್ಣವಿಗೌಡ ಫೋಟೋ ಶೂಟ್!- Kannada Prabha

ಇವರನ್ನು ವೈಷ್ಣವಿ ಗೌಡ ಎನ್ನುವುದಕ್ಕಿಂತಲೂ ‘ಅಗ್ನಿಸಾಕ್ಷಿ’ ಸನ್ನಿಧಿ ಎಂದೇ ಚಿರಪರಿಚಿತರು. ಇವರಿಗೆ ‘ಅಗ್ನಿಸಾಕ್ಷಿ’ ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿತ್ತು. ವೈಷ್ಣವಿ ಗೌಡ ಅಭಿಮಾನಿಗಳ ಬಳಗ ದೊಡ್ಡದಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಇದ್ದಾರೆ.ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವ ವೈಷ್ಣವಿ ಗೌಡ, ಐಕಾನಿಕ್ ಲುಕ್‌ಗಳನ್ನು ರಿ ಕ್ರಿಯೇಟ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಕಲ್ಪಾನಾ ಅವರಂತೆ ಸೀರೆಯುಟ್ಟು ಅಭಿಮಾನಿಗಳಿಗೆ ಖುಷಿಕೊಟ್ಟಿದ್ದರು. ಇದೀಗ ‘ಗಂಗೂಬಾಯಿ ಕಾಠಿಯವಾಡಿ’ ಲುಕ್ ಅನ್ನು ರೀ-ಕ್ರಿಯೇಟ್ ಮಾಡಿ, ವಿಡಿಯೋ ಅಪ್ ಲೋಡ್ ಮಾಡಿದ್ದರು

ಮಲ್ಟಿ ಟ್ಯಾಲೆಂಟ್ ಹುಡುಗಿ ವೈಷ್ಣವಿ ಗೌಡ!

ಸದಾ ಹೊಸತನಕ್ಕೆ ತುಡಿಯುವ ವೈಷ್ಣವಿ ಗೌಡ ಸಖತ್ ಟ್ಯಾಲೆಂಟೆಡ್ ಹುಡುಗಿ ಎಂದರೆ ತಪ್ಪಾಗಲಾರದು. ಭರತನಾಟ್ಯಂ, ಕುಚುಪುಡಿ, ಬೆಲ್ಲಿ ಡ್ಯಾನ್ಸ್ ಅನ್ನು ಕರಗತ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ವೈಷ್ಣವಿ ಗೌಡ ಹಾಡನ್ನು ಕೂಡ ಹಾಡುತ್ತಾರೆ. ಇನ್ನು ವೈಶೂ ಸದಾ ಅಭಿಮಾನಿಗಳನ್ನು ರಂಜಿಸಲು ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ಒಂದು ಮಾಡುತ್ತಲೇ ಇರುತ್ತಾರೆ ಹಲವು ಕಾರ್ಯಕ್ರಮಗಳಲ್ಲಿ ಮಿಂಚಿದ ವೈಷ್ಣವಿ! ವೈಷ್ಣವಿ ಗೌಡ ಕೇವಲ ನಟನೆಯಲ್ಲಷ್ಟೇ ತಮ್ಮನ್ನು ತಾವು ತೊಡಗಿಸಿಕೊಂಡಿಲ್ಲ. ಬದಲಿಗೆ ಆಗಾಗ ನಿರೂಪಣೆಯನ್ನೂ ಮಾಡುತ್ತಿರುತ್ತಾರೆ. ಭರ್ಜರಿ ಕಾಮಿಡಿ ಎಂಬ ರಿಯಾಲಿಟಿ ಶೋನಲ್ಲಿ ವೈಷ್ಣವಿ ಗೌಡ ಆಂಕರಿಂಗ್ ಮಾಡಿದ್ದಾರೆ. ‘ದೇವಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ವೈಷ್ಣವಿ ಗೌಡ ‘ಪುನರ್ ವಿವಾಹ’ ಹಾಗೂ ‘ಅಗ್ನಿ ಸಾಕ್ಷಿ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇನ್ನು ‘ಕುಣಿಯೋಣು ಬಾರಾ’ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಹಲವು ಪ್ರಾಡಕ್ಟ್‌ಗಳ ಜಾಹೀರಾತುಗಳಿಗೆ ಬಣ್ಣ ಹಚ್ಚಿದ್ದಾರೆ. ಮೇಕಪ್, ಸೀರೆ, ಜ್ಯೂವೆಲರಿಗಳ ಬಗ್ಗೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ >>>  51ನೇ ವಯಸ್ಸಿನಲ್ಲಿ ಮತ್ತೆ ಮದುವೆ ಸಿಹಿಸುದ್ದಿ ಹಂಚಿಕೊಂಡ ನಟಿ ಸುಧಾರಾಣಿ!! ಸಿಹಿಸುದ್ಧಿ ಕೇಳಿ ಬೆಚ್ಚಿಬಿದ್ದ ಚಿತ್ರರಂಗ ಹೇಳಿದ್ದೇನು ನೋಡಿ!!

ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚಿಟ್ಟ ಅಗ್ನಿಸಾಕ್ಷಿಯ ಸನ್ನಿಧಿ ! - ಸಿನಿಮಾ

ಸಿನಿಮಾಗಳಲ್ಲೂ ಮಿಂಚಿದ ನಟಿ ವೈಷ್ಣವಿ! ‘ಗಿರಗಿಟ್ಲೆ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ವೈಷ್ಣವಿ ಭಲೇ ಹುಚ್ಚ ಎಂಬ ಸಿನಿಮಾದಲ್ಲೂ ನಟಿಸಿದ್ದರು. ಇದೀಗ ‘ಬಹುಕೃತ ವೇಷಂ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಹೆಸರಿನಂತೆಯೇ ಈ ಚಿತ್ರದಲ್ಲಿ ವೈಷ್ಣವಿ ಡಿಫರೆಂಟ್ ವೇಷದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾಗಳಲ್ಲಿ ಮತ್ತೆ ಯಾವಾಗ ಕಾಣಿಸಿಕೊಳ್ಳುತ್ತಾರೆ ಅಂತ ಗೊತ್ತಿಲ್ಲ. ಆದರೆ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಸುದ್ದಿ ಆಗಿದ್ದಾರೆ ವೈಷ್ಣವಿ

ವೈಷ್ಣವಿ ಹೊಸ ಪ್ರಾಜೆಕ್ಟ್ ಏನು? ವೈಷ್ಣವಿ ಗೌಡ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದಾರೆ. ಇದರಲ್ಲಿ ವೈಷ್ಣವಿ ತಮ್ಮ ಡೈಲಿ ರೋಟಿನ್, ವರ್ಕೌಟ್, ಯೋಗದ ಬಗ್ಗೆ ವಿಡಿಯೋ ಮಾಡುತ್ತಿರುತ್ತಾರೆ. ಜೊತೆಗೆ ನಿವೇದಿತಾ ಗೌಡ ಸೇರಿದಂತೆ ಕೆಲವರ ಸಂದರ್ಶನವನ್ನೂ ಮಾಡಿದ್ದಾರೆ. ಇದರ ಜೊತೆಗೆ ಆಗಾಗ ಡ್ಯಾನ್ಸ್ ಮಾಡಿದ ವಿಡಿಯೋಗಳನ್ನೂ ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ ವೈಷ್ಣವಿ ಗೌಡ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. ಜೀ ವಾಹಿನಿಯಲ್ಲಿ ಹೊಸ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದು, ಕೆಎಸ್ ರಾಮ್ ಜೀ ನಿರ್ದೇಶನ ಮಾಡುತ್ತಿದ್ದಾರೆ.

Agnisakhi actress Vaishnavi looks stunning in her latest photoshoot - Times of India

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...