vishnavi

ಎಂಗೆಜ್ಮೆಂಟ್ ಮುರಿದು ಬಿದ್ದ ಮೇಲೆ ಮನಸ್ಸಿನ ನೋವು ದೂರ ಮಾಡಿಕೊಳ್ಳಲು ಮನ ಬಿಚ್ಚಿ ಕುಣಿದ ವೈಷ್ಣವಿ ಗೌಡ ಈ ವಿಡಿಯೋ ನೋಡಿ.

CINEMA/ಸಿನಿಮಾ Entertainment/ಮನರಂಜನೆ

ಸದ್ಯಕ್ಕೆ ಕಿರುತೆರೆ ನಟಿ ವೈಷ್ಣವಿ ಗೌಡ ಅಲಿಯಾಸ್ ಸನ್ನಿಧಿ ಅವರು ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸುದ್ದಿ ಆಗುತ್ತಿದ್ದಾರೆ. ಮದುವೆ ವಿಚಾರವಾಗಿ ಆದ ವಿವಾದದಿಂದಾಗಿ ಪ್ರತಿನಿತ್ಯ ಈಗ ಅವರ ವಿಷಯದ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಇದನ್ನು ನೋಡಿ ನಟಿ ಕಂಗಾಲು ಆಗಿದ್ದಾರೆ.

ಅವರ ತಾಯಿಯೇ ಹೇಳಿಕೆ ಕೊಟ್ಟಂತೆ ನನ್ನ ಜೀವನದಲ್ಲೇ ಇದೆಲ್ಲ ಆಗಬೇಕಾಗಿದ್ದ ಎಂದು ದುಃಖಿಸಿರುವ ವೈಷ್ಣವಿ ಗೌಡ ಅವರು ಇದರಿಂದ ಬಹಳ ನೊಂದುಕೊಂಡು ಅಮ್ಮನ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟಿದ್ದಾರಂತೆ.

ಸೆಲಬ್ರೆಟಿಗಳ ಜೀವನದಲ್ಲಿ ಇದೆಲ್ಲವೂ ಬಹಳ ಸಹಜ ಘಟನೆ ಆಗಿದೆ. ಸಾಮಾನ್ಯರ ಜೀವನದಲ್ಲೂ ಇದೆಲ್ಲ ನಡೆದರೂ ಸೆಲೆಬ್ರಿಟಿಗಳ ವಿಷಯ ಬಂದಾಗ ಅದು ಹೆಚ್ಚು ವದಂತಿ ಆಗುತ್ತದೆ. ಹೀಗಾಗಿ ಸುಖಾ ಸುಮ್ಮನೆ ಹಾಡಿಕೊಳ್ಳುವರಿಗೆ ಹಾಟ್ ಟಾಪಿಕ್ ಅದನ್ನೆಲ್ಲ ಎಂದು ವೈಷ್ಣವಿ ಬೇಸರಿಸಿಕೊಂಡು ಇದೇ ಬೇಸರದಲ್ಲಿ ತಮ್ಮ ದಿನನಿತ್ಯದ ಕಾರ್ಯಗಳತ್ತ ತೊಡಗಿಕೊಂಡಿದ್ದಾರೆ.

Vaishnavi Gowda to make her TV come back soon? - Times of India

ಸದ್ಯಕ್ಕೆ ನಟಿ ವೈಷ್ಣವಿ ಗೌಡ ಅವರು ಪಾಂಡವಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಒಂದಕ್ಕೆ ನೃತ್ಯ ಮಾಡಲು ಹೋಗಿದ್ದು ತಂಡದೊಂದಿಗೆ ಅವರು ನೃತ್ಯ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕಿರುತೆರೆಯ ಡ್ಯಾನ್ಸಿಂಗ್ ಶೋಗಳ ಜನಪ್ರಿಯ ಕೊರಿಯೋಗ್ರಾಫರ್ ಆಗಿರುವ ರುದ್ರ ಮಾಸ್ಟರ್ ಅವರು ವೈಷ್ಣವಿ ನೃತ್ಯ ಮಾಡುತ್ತಿರುವ ತಂಡಕ್ಕೆ ಕೊರಿಯೋಗ್ರಾಫ್ ಮಾಡುತ್ತಿದ್ದು ಅವರ ಗರಣಿನಲ್ಲಿ ಸನ್ನಿಧಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ.

ಈಗ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಅವರು ಶಿವಣ್ಣ ಅವರ ಜೋಗಯ್ಯ ಸಿನಿಮಾದ ಯಾರು ಕಾಣದೂರು ಯಾರು ಇಲ್ಲದೋರು ಅಲ್ಲಿ ನಾನು ನೀನೇ ಕೇಳು ಜೋಗಿ ಎನ್ನುವ ಹಾಡಿಗೆ ನವಿಲುನಂತೆ ನರ್ತಿಸುತ್ತಿರುವುದು ಕಾಣ ಬರುತ್ತದೆ. ವೇದಿಕೆ ಮೇಲೆ ತಂಡದ ಜೊತೆ ಪ್ರಾಕ್ಟೀಸ್ ಮಾಡುತ್ತಾ ಕುಣಿಯುತ್ತಿರುವ ವೈಷ್ಣವಿ ಅವರನ್ನು ನೋಡಿದರೆ ಇಷ್ಟೆಲ್ಲ ಆದ ಮೇಲೆ ಆ ನೋವಿನಿಂದ ಹೊರ ಬರಲು ಅವರು ಈ ರೀತಿ ನೃತ್ಯ ಮಾಡುತ್ತಿದ್ದೀರಾ ಎನಿಸುವಂತೆ ಅದರಲ್ಲಿ ಮುಳುಗಿ ಹೋಗಿದ್ದಾರೆ.

ಹೊಸ ಫೋಟೋ ಶೂಟ್ ಮಾಡಿಸಿದ ಅಗ್ನಿಸಾಕ್ಷಿ ವೈಷ್ಣವಿ,ಫೋಟೋಸ್ ನೋಡಿ ದಂಗಾದ ನೆಟ್ಟಿಗರು... -  INDIANSPOST.COM

ಸಾಮಾನ್ಯವಾಗಿ ಬೇಸರವಾದಾಗ ಎಲ್ಲರೂ ಸಹ ಅದನ್ನು ತೋರಿಸಿಕೊಂಡು ಬಿಡುತ್ತಾರೆ. ಆದರೆ ವೈಷ್ಣವಿ ಅವರು ಬಹಳ ಸ್ಟ್ರಾಂಗ್ ಆಗಿರುವ ಗರ್ಲ್ ಆಗಿದ್ದಾರೆ. ಮೆಡಿಟೇಶನ್ ಯೋಗ ಈ ರೀತಿ ತಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡುವುದರಲ್ಲಿ ಎಕ್ಸ್ಪರ್ಟ್ ಆಗಿರುವ ಇವರ ವ್ಯಕ್ತಿತ್ವ ಬಿಗ್ ಬಾಸ್ ಮನೆಯಲ್ಲೇ ಎಲ್ಲರಿಗೂ ಪರಿಚಯವಾಗಿತ್ತು ಈಗಲೂ ಸಹ ಮನದಲ್ಲಿ ಎಷ್ಟು ನೋವಿದ್ದರೂ ಅದನ್ನು ಕುಟುಂಬಕ್ಕೆ ಸೀಮಿತ ಮಾಡಿ ಹೊರಗಡೆ ಏನು ಆಗಿಲ್ಲ ಎನ್ನುವಂತೆ ನಗುನಗುತ್ತಾ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.

ಕೆಲ ಮಾಹಿತಿಗಳ ಪ್ರಕಾರ ಇದು ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ ವೇದ ಸಿನಿಮಾಗಾಗಿ ನಡೆಯುತ್ತಿರುವ ಕಾರ್ಯಕ್ರಮ ಆಗಿದ್ದು ನೃತ್ಯಗಳಲ್ಲಿ ಬಹಳ ಆಸಕ್ತಿ ಹೊಂದಿರುವ ಸನ್ನಿಧಿ ಅವರು ಈ ಕಾರ್ಯಕ್ರಮದಲ್ಲಿ ಒಂದು ಭಾಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಸನ್ನಿಧಿ ಅವರ ಚಿಕ್ಕವಯಸ್ಸಿನಿಂದಲೂ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದು ಭರತನಾಟ್ಯ ಮತ್ತು ಬೆಲ್ಲಿ ಡ್ಯಾನ್ಸ್ ಪ್ರವೀಣತೆ ಕೂಡ ಆಗಿದ್ದಾರೆ.

 

View this post on Instagram

 

A post shared by Vaishnavi (@iamvaishnavioffl)


ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.