ಕನ್ಯಾ ರಾಶಿ

ಅತಿಬುದ್ದಿವಂತಿಕೆ ಕನ್ಯಾ ರಾಶಿ ಇವರ ಹುಟ್ಟುಗುಣ ಆದ್ರೆ,ಇವರ ಸ್ವಭಾವ ಹೇಗಿರತ್ತೆ ನೋಡಿ…

Heap/ರಾಶಿ ಭವಿಷ್ಯ

ಕನ್ಯಾ ರಾಶಿ ಹಾಗೂ ಕನ್ಯಾ ಲಗ್ನದವರ ಗುಣ ಸ್ವಭಾವ ತಿಳಿಯಬೇಕಾದರೆ ಆ ರಾಶಿಯ ರಾಶ್ಯಾಧಿಪತಿಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವಿಭಿನ್ನ ಗುಣಸ್ವಭಾವ ಭವಿಷ್ಯವನ್ನು ಹೊಂದಿರುತ್ತಾರೆ ಅದರಂತೆ ಕನ್ಯಾ ರಾಶಿಯವರ ಗುಣ ಸ್ವಭಾವ, ಅವರ ಸ್ಟ್ರೆಂತ್, ವೀಕ್ನೆಸ್ ಹಾಗೂ ಪರಿಹಾರದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಕನ್ಯಾರಾಶಿ ಪೃಥ್ವಿತತ್ವ ರಾಶಿಯಾಗಿದ್ದು, ಈ ರಾಶಿಯ ಅಧಿಪತಿ ಬುಧ ಗ್ರಹವಾಗಿರುತ್ತದೆ. ಈ ರಾಶಿಯವರು ಸುಂದರವಾಗಿ, ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಇವರಿಗೆ ನಾಚಿಕೆಯ ಸ್ವಭಾವ ಇರುತ್ತದೆ ಆದರೆ ಇವರು ಯಾರನ್ನಾದರೂ ಇಂಪ್ರೆಸ್ ಮಾಡುವುದಾದರೆ ಸುಲಭವಾಗಿ ಮಾಡುತ್ತಾರೆ. ಇವರು ತಮ್ಮ ವಯಸ್ಸಿಗಿಂತ ಚಿಕ್ಕವರಂತೆ ಕಾಣುತ್ತಾರೆ. ಇವರ ಮುಖದಲ್ಲಿ ಮುಗ್ಧತೆ ಎದ್ದು ಕಾಣಿಸುತ್ತದೆ. ಇವರು ಬುದ್ಧಿವಂತರಾಗಿದ್ದು ಬಹಳ ಕ್ಲೀನ್ ಆಗಿರಲು ಇಷ್ಟಪಡುತ್ತಾರೆ. ಇವರು ತಮ್ಮ ಆಹಾರ, ಸುತ್ತಲಿನ ಪರಿಸರವನ್ನು ಕ್ಲೀನ್ ಆಗಿ ಇಟ್ಟುಕೊಳ್ಳುತ್ತಾರೆ. ಇವರು ಯಾವುದೆ ಕೆಲಸ ಮಾಡಿದರು ಪರ್ಫೆಕ್ಟ್ ಆಗಿ ಮಾಡುತ್ತಾರೆ. ಇವರು ನಿಯಮಬದ್ಧವಾಗಿ ಇರುತ್ತಾರೆ, ಯಾವುದೆ ಕೆಲಸವಾದರೂ ಪರ್ಫೆಕ್ಟ್ ಆಗಿ ಮಾಡುತ್ತಾರೆ. ಇವರು ಸಣ್ಣ ಸಣ್ಣ ವಿಷಯವನ್ನು ಗಮನಿಸುತ್ತಾರೆ. ಇವರು ಬುದ್ಧಿವಂತರಾಗಿರುವುದರಿಂದ ಇವರಿಗೆ ಮೋಸ ಮಾಡುವುದು ಕಷ್ಟ. ಇವರು ಬೇರೆಯವರು ತಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಇವರು ಲೊಯಲ್, ಆಕ್ಟೀವ್ ಹಾಗೂ ಪ್ರಾಮಾಣಿಕರಾಗಿ ಇರುತ್ತಾರೆ.

Virgo Horoscope 2022: ಕನ್ಯಾ ರಾಶಿಭವಿಷ್ಯ 2022: ಪ್ರೀತಿ, ಉದ್ಯೋಗ, ಕುಟುಂಬ, ಹಣ, ವ್ಯವಹಾರಿಕ ಭವಿಷ್ಯ ಹೇಗಿರಲಿದೆ? | Virgo Horoscope 2022: Kanya Rashi Varsha Bhavishya, Virgo Yearly Horoscope Predictions In ...

ಕನ್ಯಾ ರಾಶಿಯವರು ತಮ್ಮಲ್ಲಿ ಹಾಗೂ ಬೇರೆಯವರಲ್ಲಿ ನಕಾರಾತ್ಮಕತೆಯನ್ನು ಹುಡುಕುತ್ತಿರುತ್ತಾರೆ. ಇವರಿಗೆ ಸೇವೆ ಮಾಡುವುದರಲ್ಲಿ ಆಸಕ್ತಿ ಇರುತ್ತದೆ, ಇವರು ಯಾವಾಗಲೂ ನಗುತ್ತಿರುತ್ತಾರೆ ಮತ್ತು ನಗಿಸುತ್ತಿರುತ್ತಾರೆ. ಈ ರಾಶಿಯವರು ಅಧ್ಯಯನ ಶೀಲರಾಗಿರುತ್ತಾರೆ, ಹಲವು ವಿಷಯಗಳಲ್ಲಿ ಇವರಿಗೆ ಆಳವಾದ ಜ್ಞಾನ ಇರುತ್ತದೆ. ಇವರು ಪ್ರಕೃತಿಯ ಪ್ರೇಮಿಗಳಾಗಿರುತ್ತಾರೆ. ಬೇರೆಯವರಿಂದ ಸಹಾಯ ಪಡೆಯುವುದು ಇವರಿಗೆ ಇಷ್ಟವಾಗುವುದಿಲ್ಲ.

ಈ ರಾಶಿಯವರಿಗೆ ಬೇರೆಯವರ ಕೆಟ್ಟ ಉದ್ದೇಶವನ್ನು ತಿಳಿಯುವ ವಿಶೇಷ ಗುಣವಿರುತ್ತದೆ. ಇವರಿಗೆ ಪ್ರತಿದಿನ ಒಂದೆ ಕೆಲಸ ಮಾಡುವುದು ಇಷ್ಟ ಆಗುವುದಿಲ್ಲ ಮತ್ತು ಇವರ ಕೆಲಸದಲ್ಲಿ ಬೇರೆಯವರು ತಲೆ ಹಾಕುವುದು ಇವರಿಗೆ ಇಷ್ಟ ಆಗುವುದಿಲ್ಲ. ಇವರು ಒಳ್ಳೆಯ ಸಲಹೆಗಾರರಾಗಿರುತ್ತಾರೆ, ಬೇರೆಯವರ ಸಮಸ್ಯೆಗೆ ಉತ್ತಮ ಪರಿಹಾರ ಕೊಡುತ್ತಾರೆ. ಇವರು ನಿಷ್ಪಕ್ಷಪಾತಿಗಳಾಗಿರುತ್ತಾರೆ, ಇವರು ಬೇದ ಭಾವ ಮಾಡುವುದಿಲ್ಲ. ಇವರು ಅನಾವಶ್ಯಕ ಭಾವನೆಗಳಲ್ಲಿ ಮುಳುಗುವುದಿಲ್ಲ. ಇಂತಹ ಸ್ಥಿತಿಯಲ್ಲಿಯೂ ತನ್ನನ್ನು ತಾನು ಶಾಂತವಾಗಿ ಇಟ್ಟುಕೊಂಡಿರುತ್ತಾರೆ.

ಕನ್ಯಾ ರಾಶಿಯವರು ಪ್ರಾಕ್ಟಿಕಲ್ ಆಗಿರುತ್ತಾರೆ, ಪರಿಶ್ರಮಿಗಳಾಗಿರುತ್ತಾರೆ. ಇವರು ಯಾವುದೆ ಸಮಸ್ಯೆಯನ್ನು ಆಳವಾಗಿ ಯೋಚಿಸಿ ಪರಿಹಾರ ಹುಡುಕುತ್ತಾರೆ. ಯಾವ ಕೆಲಸವನ್ನಾದರೂ ಕನ್ಯಾ ರಾಶಿಯವರು ಸುಲಭವಾಗಿ ಮಾಡಿ ಮುಗಿಸುತ್ತಾರೆ. ಇವರು ಒಳ್ಳೆಯ ಹೆಸರು, ಕೀರ್ತಿಯನ್ನು ಗಳಿಸುತ್ತಾರೆ. ಕಲೆಗಳಲ್ಲಿ ಇವರಿಗೆ ಆಸಕ್ತಿ ಇರುತ್ತದೆ. ಇವರಿಗೆ ನೆನಪಿನ ಶಕ್ತಿ ಹೆಚ್ಚಿರುತ್ತದೆ. ಇವರಿಗೆ ಹಣ, ವಸ್ತುಗಳು, ಯಾವುದೆ ವಿಷಯದಲ್ಲಿ ತೃಪ್ತಿ ಇರುವುದಿಲ್ಲ. ಈ ರಾಶಿಯವರು ಧಾರ್ಮಿಕತೆಯನ್ನು ಆಸಕ್ತಿ ಹೊಂದಿರುತ್ತಾರೆ. ಧರ್ಮದ ಕೆಲಸದಲ್ಲಿ ಶ್ರದ್ಧೆಯಿಂದ ತೊಡಗುತ್ತಾರೆ.

ಇದನ್ನೂ ಓದಿ >>>  ಈ 5 ರಾಶಿ ಚಕ್ರದವರು ಪ್ರೀತಿಗೆ ಎಂದು ಕೂಡ ಮೋಸ ಮಾಡೋದಿಲ್ಲ!

Today Rashi Bhavishya: ಶನಿವಾರದ ದಿನ ಭವಿಷ್ಯ: ವೃಷಭ, ಧನು, ಮೀನ ರಾಶಿಯ ವ್ಯಾಪಾರಿಗಳಿಗೆ ಲಾಭದಾಯಕ ದಿನ | Dina Bhavishya -05 February 2022 Today Rashi Bhavishya, Daily Horoscope in Kannada - Kannada BoldSky

ಇವರು ತಂದೆಯ ಸೇವೆ ಮಾಡಲು ಆಸಕ್ತರಾಗಿರುತ್ತಾರೆ. ಇವರು ತಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಇವರು ಸ್ನೇಹಿತರಿಗೆ ಯಾವಾಗ ಬೇಕಾದರೂ ಸಹಾಯ ಮಾಡುತ್ತಾರೆ. ಇವರು ಕೆಟ್ಟ ಸ್ನೇಹಿತರ ಸಹವಾಸ ಮಾಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಎಚ್ಚರಿಕೆ ವಹಿಸಬೇಕು. ಈ ರಾಶಿಯವರು ತನ್ನ ಹಾಗೂ ತನ್ನ ಪರಿವಾರದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಇವರು ಎಲ್ಲರನ್ನು ಬೇಗ ಹಚ್ಚಿಕೊಂಡಿರುತ್ತಾರೆ. ಇವರಿಗೆ ಬೇರೆಯವರ ವಿಷಯದಲ್ಲಿ ಮೂಗು ತೂರಿಸುವ ಕೆಟ್ಟ ಸ್ವಭಾವ ಇರುತ್ತದೆ. ಇವರು ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ.

ಕನ್ಯಾ ರಾಶಿಯವರು ತಮ್ಮ ಭಾವನೆಗಳನ್ನು ನೇರವಾಗಿ ಯಾರ ಬಳಿಯೂ ಹೇಳುವುದಿಲ್ಲ. ಇವರಿಗೆ ಬೇರೆಯವರು ತಾವು ಏನನ್ನು ಹೇಳದೆ ತನ್ನನ್ನು ಅರ್ಥಮಾಡಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಇವರು ಸಣ್ಣ ಸಣ್ಣ ವಿಷಯದ ಬಗ್ಗೆ ಯೋಚಿಸಿ ಚಿಂತೆ ಮಾಡುತ್ತಾರೆ. ಇವರ ಜೀವನದಲ್ಲಿ ಗೊಂದಲ ಹೆಚ್ಚಿರುತ್ತದೆ. ಇವರ ಮಾತಿನಲ್ಲಿ ಮಧುರತೆ ಇರುತ್ತದೆ, ಇವರು ಹೆಚ್ಚು ಮಾತನಾಡುತ್ತಾರೆ, ಬುದ್ದಿವಂತಿಕೆಯಿಂದ ಮಾತನಾಡುತ್ತಾರೆ. ಇವರು ಲೆಕ್ಕಾಚಾರ ಮಾಡಿ ಖರ್ಚು ಮಾಡುತ್ತಾರೆ, ಹಣ ಉಳಿತಾಯ ಮಾಡುತ್ತಾರೆ. ಈ ರಾಶಿಯವರಿಗೆ ತಮ್ಮ ಬಗ್ಗೆ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ಇವರು ಯಾವುದೆ ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳುತ್ತಾರೆ.

कन्या राशि की लड़कियों के लिए कैसा पार्टनर रहता है बेस्ट? - these boys are perfect for virgo girl-mobile

ಇವರು ಬುದ್ಧಿವಂತ, ಸುಂದರವಾಗಿರುವ, ಪ್ರಾಮಾಣಿಕರಾಗಿರುವ ಸಂಗಾತಿಯನ್ನು ಬಯಸುತ್ತಾರೆ. ಇವರು ರೊಮ್ಯಾಂಟಿಕ್ ಆಗಿರುತ್ತಾರೆ ಆದರೆ ಪ್ರೀತಿಯ ವಿಷಯದಲ್ಲಿ ಕುರುಡರಾಗಿರುವುದಿಲ್ಲ. ಇವರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವುದಿಲ್ಲ. ಇವರು ಯಾರನ್ನಾದರೂ ಪ್ರೀತಿಸುವುದಾದರೆ ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡು ಮುಂದುವರೆಯುತ್ತಾರೆ ಆದರೆ ಇವರು ತಮ್ಮ ಪ್ರೀತಿಯನ್ನು ಕೊನೆಯವರೆಗೂ ನಿಭಾಯಿಸುತ್ತಾರೆ.

ಇವರಿಗೆ ಡಾಕ್ಟರ್, ನರ್ಸ್, ಟೀಚರ್, ಮನೋವಿಜ್ಞಾನಿ, ಇಂಜಿನಿಯರಿಂಗ್, ಮೆಡಿಕಲ್, ಮೊಡೆಲ್, ಲಾಯರ್, ಅಕೌಂಟ್ ಕೆಲಸಗಳಲ್ಲಿ ಆಸಕ್ತಿ ಇರುತ್ತದೆ. ಕನ್ಯಾ ರಾಶಿಯವರಿಗೆ ಹೊಟ್ಟೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಖಾಯಿಲೆಗಳು, ಟೆನ್ಷನ್, ಖಿನ್ನತೆ, ಒಸಿಡಿಯಂತಹ ಖಾಯಿಲೆಗಳು ಬರಬಹುದು. ಇವರು ನೆಗೆಟೀವ್ ಯೋಚನೆ ಮಾಡುವುದನ್ನು ಬಿಡಬೇಕು ಇದರಿಂದ ಆರೋಗ್ಯಕ್ಕೂ ಒಳ್ಳೆಯದು. ಇವರು ಲಕ್ಷ್ಮೀ ನಾರಾಯಣ, ಗಣೇಶನ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...