ವಿರಾಟ್ ಕೊಹ್ಲಿ ಕುಡಿಯುವ ನೀರು ಫ್ರಾನ್ಸ್‌ನಿಂದ ಬರುತ್ತದೆ,1 ಲೀಟರ್ ಬಾಟಲಿಯ ಬೆಲೆ ಎಷ್ಟು ಮತ್ತು ಏನು ಈ ನೀರಿನ ವಿಶೇಷತೆ ಗೊತ್ತಾ?

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವ ಕ್ರಿಕೆಟ್ ನಲ್ಲಿ ಅಗ್ರ ಮಾನ್ಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವಿರಾಟ್ ಕೊಹ್ಲಿ ಅವರು ಐಸಿಸಿ ಒನ್ ಡೇ ರ್ಯಾಂಕಿಂಗ್ ನಲ್ಲಿ ಅವರು ದೀರ್ಘಕಾಲದವರೆಗೆ ಒಂದನೇ ಸ್ಥಾನದಲ್ಲಿ ಹಾಗೂ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಕಳೆದ ಎಂಟು ವರ್ಷಗಳಿಂದ ಕೂಡಾ ಅದ್ಭುತವಾದ ಸಾಧನೆಯನ್ನು ಕ್ರಿಕೆಟ್ ನಲ್ಲಿ ಮೆರೆಯುತ್ತಿರುವ ವಿರಾಟ್ ಕೊಹ್ಲಿಯವರ ಈ ಯಶಸ್ಸಿನ ಹಿಂದಿನ ಪ್ರಮುಖವಾದ ಕಾರಣ ಅಥವಾ ರಹಸ್ಯ ಎಂದರೆ ಅವರ ಅದ್ಭುತ ಎನಿಸುವ ಫಿಟ್ನೆಸ್ ಎಂಬುದು ಎಲ್ಲರಿಗೂ ತಿಳಿದೇ ಇದೆ.

ವಿರಾಟ್ ಕೊಹ್ಲಿಯವರು ಎಂತಹ ಅಸಾಧಾರಣ ಆಟಗಾರ ಎನಿಸಿದ್ದಾರೆಯೋ ಅಷ್ಟೇ ಅಸಾಧಾರಣ ಜೀವನ ಶೈಲಿ ಅವರದ್ದಾಗಿದೆ. ಕ್ರಿಕೆಟ್ ಮೈದಾನದ ನಂತರ ವಿರಾಟ್ ತಮ್ಮ ಬಹುತೇಕ ಸಮಯವನ್ನು ಜಿಮ್ ನಲ್ಲೇ ಕಳೆಯುತ್ತಾರೆ. ಅಸಾಧಾರಣ ಎನಿಸುವ ಫಿಟ್ನೆಸ್ ಗೆ ವಿಶ್ವದಾದ್ಯಂತ ಹೆಸರು ಮಾಡಿರುವ ಕೆಲವೇ ಕ್ರೀಡಾಪಟುಗಳಲ್ಲಿ ವಿರಾಟ್ ಕೊಹ್ಲಿ ಕೂಡಾ ಒಬ್ಬರು ಎಂಬುದು ಅವರ ಹೆಗ್ಗಳಿಕೆ. ವಿರಾಟ್ ಅವರನ್ನು ಮಾದರಿಯನ್ನಾಗಿ ಸ್ವೀಕರಿಸಿದ ಅನೇಕ ಕ್ರಿಕೆಟ್ ಆಟಗಾರರು ಇಂದು ಫಿಟ್ನೆಸ್ ಗೆ ಮೊದಲ ಆದ್ಯತೆಯನ್ನು ನೀಡುತ್ತಿದ್ದಾರೆ. ವಿಶ್ವ ಕ್ರಿಕೆಟ್ ನಲ್ಲಿ ಫಿಟ್ನೆಸ್ ಗೆ ಆದ್ಯತೆ ನೀಡುತ್ತಿರುವ ಆಟಗಾರ ಕೂಡಾ ವಿರಾಟ್ ಕೊಹ್ಲಿಯಾಗಿದ್ದಾರೆ.

ಆಟಗಾರನ ಫಿಟ್ನೆಸ್ ಆತನ ಆಟದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ ಗಳಲ್ಲಿ ಫಿಟ್ನೆಸ್ ಪ್ರಮುಖ ಪಾತ್ರವಹಿಸುತ್ತದೆ. ವಿರಾಟ್ ತಮ್ಮ ಫಿಟ್ನೆಸ್ ಗಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ. ಅವರು ಕೆಲವು ವರ್ಷಗಳ ಹಿಂದೆ ವೀಗನ್ ಆಗಲು ಬಯಸಿದ್ದರು. ಅಂದರೆ ಅವರು ನಾನ್ ವೆಜ್ ತಿನ್ನುವುದನ್ನು ಬಿಡಲು ಹಾಗೂ ಹಾಲು ಹಾಗೂ ಹಾಲಿನಿಂದ ತಯಾರಿಸಲ್ಪಡುವ ಉತ್ಪನ್ನಗಳನ್ನು ಕೂಡಾ ಸೇವನೆ ಮಾಡದಿರಲು ನಿರ್ಧಾರವನ್ನು ಮಾಡಿದ್ದರು. ಆಗ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಗೆ ಮಾಡಬೇಡಿ, ಅದರಿಂದ ಸ್ಟಾಮಿನಾ ಮಾಡಲಾಗುವುದಿಲ್ಲ ಎಂದಿದ್ದರು ಆದರೆ ಇದೆಲ್ಲವನ್ನೂ ಕೂಡಾ ಮೀರಿ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಫಿಟ್ನೆಸ್ ಗೆ ಉದಾಹರಣೆಯಾದರು.

ವಿರಾಟ್ ಕೊಹ್ಲಿ ಅವರು ಕುಡಿಯುವುದು ಫ್ರಾನ್ಸ್ ನ ಏವಿಯನ್ ಕಂಪನಿಯ ನ್ಯಾಚುರಲ್ ಸ್ಪ್ರಿಂಗ್ ವಾಟರ್ ಅನ್ನು ಕುಡಿಯುತ್ತಾರೆ. 100% ಶುದ್ಧವಾದ ಈ ನೀರು ಕೆಮಿಕಲ್ ಫ್ರೀ ಆಗಿದೆ. ಈ ನೀರಿನ ಬೆಲೆ ಲೀಟರ್ ಗೆ 600 ರಿಂದ 35,000 ರೂಪಾಯಿಗಳ ವರೆಗೆ ಇದೆ. ವಿರಾಟ್ ಅವರು ಬಳಸುವ ನೀರಿನ ಬೆಲೆ 600 ರೂ ಆಗಿದ್ದು, ಭಾರತದಲ್ಲಿ ಸಿಗುವ ಈ ಕಂಪನಿಯ ನೀರಿನ ಬೆಲೆ ಇದಾಗಿದೆ. ವಿರಾಟ್ ಕೊಹ್ಲಿ ದಿನವೊಂದಕ್ಕೆ ಎರಡು ಮೂರು ಬಾಟಲ್ ನೀರು ಕುಡಿಯುವುದರಿಂದ ವರ್ಷಕ್ಕೆ ಅವರ ನೀರಿನ ಖರ್ಚು
6,57,000 ರೂಪಾಯಿಗಳನ್ನು ತಲುಪುತ್ತದೆ.

ಈ ನೀರಿನ ವಿಶೇಷತೆ ಎನೆಂದರೆ ಇದು ಹಗುರವಾಗಿದ್ದು, ಡಿಪ್ರೆಶನ್ ನನ್ನು ಮೇಲೆ ನಿಯಂತ್ರಣ ಸಾಧಿಸಲು ನೆರವಾಗುತ್ತದೆ. ಚರ್ಮಕ್ಕೆ ಕೂಡಾ ಈ ನೀರು ಲಾಭದಾಯಕವಾಗಿದ್ದು, ಬೇರೆ ಕಂಪನಿಗಳ ನೀರಿಗೆ ಹೋಲಿಕೆ ಮಾಡಿದಾಗ ಇದರಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಕ್ಲೋರೈಡ್, ಪೊಟಾಷಿಯಂ ಹಾಗೂ ಸೋಡಿಯಂ ಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ ಎನ್ನಲಾಗಿದೆ.‌ Evian ಕಂಪನಿಯ ಈ ನೀರು ವಿರಾಟ್ ಕೊಹ್ಲಿ ಮಾತ್ರವೇ ಅಲ್ಲದೇ ವಿಶ್ವದ ಅನೇಕ ಆಟಗಾರರ ಪ್ರಿಯವಾದ ನೀರಾಗಿದೆ. ಅಮೆಜಾನ್ ನಲ್ಲಿ ಈ ನೀರಿನ ಬಾಟಲಿಯ ಬೆಲೆ ಸುಮಾರು 450 ರೂಗಳ ಹತ್ತಿರದಲ್ಲಿದೆ. ಯೂರೋಪ್ ನ ಬೆಟ್ಟಗಳ ಸಾಲಿನಿಂದ ಸಂಗ್ರಹಿಸಿದ ಈ ನೀರನ್ನು ಫ್ರಾನ್ಸ್ ನಿಂದ ಆಮದು ಮಾಡಿಕೊಳ್ಳಲಾಗುತ್ತದೆ.‌

You might also like

Comments are closed.