ವೈರಲ್ ವಿಡಿಯೋ: ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಾಸ್ತವವಾಗಿ, ಮರಣದ ನಂತರ ಆತ್ಮವು ದೇಹವನ್ನು ತೊರೆಯುತ್ತದೆ ಎಂದು ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ಆದರೆ ಎಂದಾದರೂ ಮೃತ ದೇಹದಿಂದ ಆತ್ಮ ಹೊರಬರುವುದನ್ನು ಯಾರಾದರೂ ನೋಡಿದ್ದೀರಾ… ಅಂತಹ ಒಂದು ಭಯಾನಕ ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೈರಲ್ ವಿಡಿಯೋದಲ್ಲಿ ಕೆಂಪು ಸೀರೆಯುತ್ತಿರುವ ಮಹಿಳೆಯೊಬ್ಬರು ಅಗಲವಾದ ಕಣ್ಣುಗಳನ್ನು ತೆರೆದು ನೆಲದ ಮೇಲೆ ಮಲಗಿದ್ದಾರೆ. ನೋಡಲು ಈ ದೃಶ್ಯವು ಮೃತ ದೇಹದಂತೆ ಭಾಸವಾಗುತ್ತದೆ. ಇದ್ದಕ್ಕಿದ್ದಂತೆ ಈ ಮಹಿಳೆಯ ದೇಹದಿಂದ ಚೈತನ್ಯವೊಂದು (ಆತ್ಮ) ಹೊರಬರುತ್ತದೆ. ಥೇಟ್ ಮಹಿಳೆಯಂತೆಯೇ ಕಾಣುವ ಒಂದು ಆತ್ಮವು ನಿಧಾನವಾಗಿ ಅವಳ ದೇಹದಿಂದ ಹೊರಬಂದು ಗಾಳಿಯಲ್ಲಿ ಮುಂದೆ ಬಂದಂತೆ ತೋರುತ್ತದೆ.
ಬಳಿಕ ಆ ಆತ್ಮವು ಹಿಂದಿರುಗಿ ಮತ್ತೆ ದೇಹವನ್ನು ನೋಡುತ್ತದೆ. ಮತ್ತು ನಂತರ ಮುಂಭಾಗದಲ್ಲಿರುವ ಕ್ಯಾಮೆರಾದತ್ತ ನೋಡುತ್ತದೆ. ಈ ವಿಡಿಯೋವನ್ನು ಯಾರೇ ಆದರೂ ನೋಡಿದ ತಕ್ಷಣ ಮೃತ ದೇಹದಿಂದ ಆತ್ಮವು ಹೊರಬಂದಂತೆ ಭಾಸವಾಗುತ್ತದೆ. ಆದರೆ, ಇದನ್ನು ಆತ್ಮವು ಹಿಂದಿರುಗಿ ದೇಹವನ್ನು ನೋಡಿ ಮತ್ತೆ ಕ್ಯಾಮರಾ ಕಡೆ ತಿರುಗಿ ಭಯಾನಕ ಸ್ಮೈಲ್ ನೀಡುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಾಸ್ಯದ ಉದ್ದೇಶದಿಂದ ಯಾರಾದರೂ ಇದನ್ನು ಎಡಿಟ್ ಮಾಡಿರಬಹುದು ಎಂದು ತೋರುತ್ತದೆ. ಆದಾಗ್ಯೂ, ಈ ವಿಡಿಯೋವನ್ನು ಸೆರೆಹಿಡಿದಿರುವವರು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.