ತೆಲುಗಿನ ಬ್ಲಾಕ್ ಬಸ್ಟರ್ ಮೂವಿ ಪುಷ್ಪ ಥಿಯೇಟರ್ ನಲ್ಲಿ ಮೋಡಿ ಮಾಡಿದ್ದು ಯಶಸ್ವಿ ಪ್ರದರ್ಶನದ ಮೂಲಕ ಕೋಟಿ ಕೋಟಿ ಆದಾಯ ಬಾಚಿಕೊಳ್ಳುತ್ತಿದೆ. ಈ ಸಿನಿಮಾದ ಯಶಸ್ಸಿಗೆ ಚಿತ್ರಕತೆ,ನಿರೂಪಣೆ,ನಾಯಕ, ನಾಯಕಿಯಷ್ಟೇ ಶ್ರಮವಹಿಸಿದ್ದು ಐಟಂ ಸಾಂಗ್. ತೆಲುಗಿನ ಬೆಡಗಿ ಸಮಂತಾ (Samantha viral Video) ಸೊಂಟ ಬಳುಕಿಸಿದ ಊ ಅಂಟಾವಾ ಉಹೂಂ ಅಂಟಾವಾ ಸಾಂಗ್ ಈಗಾಗಲೇ ಪಡ್ಡೆ ಹೈಕಳ ಮನಗೆದ್ದಿದ್ದು, ವಿಶ್ವದ ನಂಬರ್ ಒನ್ ಐಟಂ ಸಾಂಗ್ ಖ್ಯಾತಿಯನ್ನು ಪಡೆದು ಕೊಂಡಿದೆ. ಆದರೆ ಈ ಸಾಂಗ್ ಹಿಂದಿನ ಶ್ರಮ ಈಗ ಅನಾವರಣ ಗೊಂಡಿದ್ದು ಸಮಂತಾ ಸಾಂಗ್ ಗಾಗಿ ತಾವು ಪಟ್ಟ ಶ್ರಮವನ್ನು ವಿವರಿಸಿದ್ದಾರೆ.
ನಟಿ ಸಮಂತಾ ತಮ್ಮ ವಿಚ್ಛೇಧನದ ಬಳಿಕ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ಮೊದಲಿಗಿಂತ ಮುಕ್ತವಾಗಿ ಬದುಕಲಾರಂಭಿಸಿದ್ದಾರೆ. ತಮ್ಮ ಬದುಕಿನ ಎಲ್ಲ ಮಹತ್ವದ್ದ ಸಂಗತಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಸದ್ಯ ಸಮಂತಾ ಪುಷ್ಪ ಸಿನಿಮಾ ಹಾಗೂ ತಮ್ನ ಐಟಂ ಸಾಂಗ್ ಗೆಲುವಿನ ಖುಷಿಯಲ್ಲಿದ್ದಾರೆ. ಈ ಖುಷಿಯ ಹಿಂದೆ ಇದ್ದ ಶ್ರಮವನ್ನು ಸಮಂತಾ ಹಂಚಿಕೊಂಡಿದ್ದಾರೆ.
ಸಮಂತಾ ಊ ಅಂಟಾವಾ ಊಹೂಂ ಅಂಟಾವಾ ಹಾಡಿಗೆ ಮೈ ಚಳಿ ಬಿಟ್ಟು ಕುಣಿದಿದ್ದನ್ನು ನೋಡಿಯೇ ಥ್ರಿಲ್ ಆಗಿದ್ದ ಅಭಿಮಾನಿಗಳು ಈ ಹಾಡಿಗಾಗಿ ಸಮಂತಾ ಪಟ್ಟ ಕಷ್ಟ ನೋಡಿದ ಮೇಲಂತೂ ಮತ್ತಷ್ಟು ಕರಗಿ ಹೋಗಿದ್ದಾರೆ. ಸಮಂತಾ ತಮ್ಮ ವೃತ್ತಿಯನ್ನು ಎಷ್ಟು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಮತ್ತು ಅದಕ್ಕಾಗಿ ಎಷ್ಟು ಶ್ರಮವಹಿಸಿ ದುಡಿಯುತ್ತಾರೆ ಎಂಬುದನ್ನು ವಿಡಿಯೋದಲ್ಲಿ ನೋಡಿ ನಟಿಯ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.
ಈ ವಿಡಿಯೋದಲ್ಲಿ ಕೋರಿಯೋಗ್ರಫಿ ತಂಡದ ಜೊತೆ ಸಮಂತಾ ಊ ಅಂಟಾವಾ ಉಹೂಂ ಅಂಟಾವಾ ಹಾಡಿನ ಸ್ಟೆಪ್ ಗಳನ್ನು ಪ್ರಾಕ್ಟಿಸ್ ಮಾಡುವ ದೃಶ್ಯಗಳಿವೆ. ಮಾತ್ರವಲ್ಲ ಡ್ಯಾನ್ಸ್ ಸ್ಟೆಪ್ ಕಲಿಯುತ್ತಾ ಸುಸ್ತಾದ ಸಮಂತಾ ಕೊರಿಯೋಗ್ರಾಫರ್ ಗಳನ್ನು ನನ್ನನ್ನು ಸಾಯಿಸುತ್ತಾರೆ. ನೋಡಿ ನಾನು ಮಾತ್ರ ಎಷ್ಟು ಬೆವರಿದ್ದೇನೆ. ಅವರ್ಯಾರು ಒಂದು ಚೂರು ಸುಸ್ತಾಗಿಲ್ಲ ಎಂದು ಹೇಳಿದ್ದಾರೆ.
ಸಮಂತಾ ಹಾಡಿಗಾಗಿ ತಾವು ವಹಿಸಿದ ಶ್ರಮದ ಹಿಂದಿನ ಅಸಲಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ ವಿಡಿಯೋಗೆ ಲಕ್ಷಾಂತರ ಲೈಕ್ಸ್ ಹರಿದುಬಂದಿದೆ. ಮಾತ್ರವಲ್ಲ ಸಾವಿರಾರು ಕಮೆಂಟ್ ಕೂಡ ಬಂದಿದೆ. ಈ ಹಾಡಿಗಾಗಿ ಸಮಂತಾ ಬರೋಬ್ಬರಿ ಎರಡು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದ್ದು, ಸಾಂಗ್ ಎಷ್ಟು ಹಿಟ್ ಆಗಿತ್ತೆಂದರೇ ಪ್ರೇಕ್ಷಕರು ಥಿಯೇಟರ್ ನಲ್ಲೇ ಒನ್ಸ್ ಮೋರ್ ಎಂದು ಆಗ್ರಹಿಸಿದ್ದರು. ಆದರೆ ಕೆಲವರು ಸಮಂತಾ ಈ ಬೋಲ್ಡ್ ಲುಕ್ ಗೆ ಟೀಕಾ ಪ್ರಹಾರವನ್ನು ಮಾಡಿದ್ದರು. ಆದರೆ ಈಗ ಸಮಂತಾ ಸಾಂಗ್ ಹಿಂದಿನ ಶ್ರಮ ಅನಾವರಣಗೊಳಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.