ನನ್ನ ತಂದೆ ಯಾರು ಅಂತ ವಿನೋದ್ ರಾಜ್ ಕೇಳಿತ್ತಿದ್ದಾಗ ತಾಯಿ ಲೀಲಾವತಿ ಏನ್ ಹೇಳುತ್ತಿದ್ರು ಗೊತ್ತಾ..

ಲೀಲಾವತಿ ಅವರು ಬಹಳ ಸಿನಿಮಾಗಳಲ್ಲಿ ನಟಿಯಾಗಿ, ತಾಯಿಯಾಗಿ ಪೋಷಕ ನಟನೆಯಲ್ಲಿಯೂ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ಕೂಡ ಸಿನಿಮಾಗಳಲ್ಲಿ ನಟಿಸಿ ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿನೋದ್ ರಾಜ್ ಅವರ ಕೆಲವು ಮಾತುಗಳನ್ನು ಈ ಲೇಖನದಲ್ಲಿ ನೋಡೋಣ.

ವಿನೋದ್ ರಾಜ್ ಅವರು ತಾವು ಹಾಗೂ ತಮ್ಮ ತಾಯಿ ಸ್ವಂತ ದುಡಿಮೆಯಿಂದ ಜೀವನ ನಡೆಸುತ್ತಿದ್ದೇವೆ ಅದಕ್ಕಾಗಿ ನಾನು ದರ್ಶನ್ ಅವರ ಜೊತೆ ನನ್ನ ತಾಯಿಯನ್ನು ಕಂಪೇರ್ ಮಾಡುತ್ತೇನೆ ಎಂದು ಹೇಳಿದ್ದಾರೆ. ದರ್ಶನ್ ಅವರಿಗೆ ಹೆಚ್ಚು ಕೋಪ ಬರುತ್ತದೆ ಆದರೆ ಅವರು ಜೀವನದಲ್ಲಿ ಬಹಳ ಕಷ್ಟಪಟ್ಟಿದ್ದಾರೆ, ನೋವನ್ನು ಅನುಭವಿಸಿದ್ದಾರೆ, ಕಣ್ಣೀರು ಹಾಕಿದ್ದಾರೆ. ಅವರಿಗೆ ಎಲ್ಲೂ ನೆಮ್ಮದಿ ಇಲ್ಲ ವಿನೋದ್ ರಾಜ್ ಅವರ ಪ್ರಕಾರ ದರ್ಶನ್ ಅವರಿಗೆ ಅವರ ತಾಯಿಯ ಹತ್ತಿರ ನೆಮ್ಮದಿ ಸಿಗುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ನೆಮ್ಮದಿ ಬೇಕು ನೆಮ್ಮದಿಯನ್ನು ಯಾರಿಂದಲೂ ಕೊಡಲು ಸಾಧ್ಯವಿಲ್ಲ ಆದರೆ ತಾಯಿಯ ಬಳಿ ಹೋದಾಗ ನೆಮ್ಮದಿ ತಾನಾಗೆ ಸಿಗುತ್ತದೆ ಎಂದು ಅವರು ತಾಯಿ ಪ್ರೀತಿಯ ಬಗ್ಗೆ ಹೇಳಿದ್ದಾರೆ.

ಗಾಂಧಿನಗರದ ಅಚ್ಚರಿ.! ಲೀಲಾವತಿ ಮನೆಯಲ್ಲಿ ಶಿವರಾಜ್ ಕುಮಾರ್ | In pics: Shivarajkumar invites Leelavathi and Vinod Raj for his daughter's marriage - Kannada Filmibeat

ವಿನೋದ್ ರಾಜ್ ಅವರು ತನ್ನ ತಾಯಿಯ ಹತ್ತಿರ ನನ್ನ ತಂದೆ ಯಾರು ಎಂದು ಕೇಳಿದಾಗ ಅವರ ತಾಯಿ ದೇವರು ನಿನ್ನ ತಂದೆ ಎಂದು ಹೇಳುತ್ತಿದ್ದರು. ಈಗ ವಿನೋದ್ ರಾಜ್ ಅವರ ತಂದೆ ಯಾರು ಎಂದು ಕೇಳಿದರೆ ಅಭಿಮಾನಿಗಳೆ ನನ್ನ ತಂದೆಯ ಬಗ್ಗೆ ಹೇಳುತ್ತಾರೆ ಎಂದು ವಿನೋದ್ ರಾಜ್ ಅವರು ಹೇಳಿದರು. ವಿನೋದ್ ರಾಜ್ ಅವರಾಗಲಿ, ಅವರ ತಾಯಿಯ ನಡವಳಿಕೆಯಲ್ಲಿ ವ್ಯತ್ಯಾಸ ಇದ್ದರೆ ಇಂತಹ ಕಾಲದಲ್ಲಿ ಬದುಕಲು ಸಾಧ್ಯವಿಲ್ಲ,

ನಮ್ಮ ನಡವಳಿಕೆಯಲ್ಲಿ ಯಾವುದೆ ವ್ಯತ್ಯಾಸವಾಗದಂತೆ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು. ವಿನೋದ್ ರಾಜ್ ಅವರು ಜೀವನದಲ್ಲಿ ಏನೂ ಇಲ್ಲ ಕೊನೆವರೆಗೂ ಅಭಿಮಾನಿಗಳು ನನ್ನನ್ನು ಪ್ರೀತಿಸಬೇಕು, ನಾನು ಅವರನ್ನು ಪ್ರೀತಿಸಬೇಕು ಎಂದು ಹೇಳಿದ್ದಾರೆ. ಬೇರೆ ಯಾವುದರ ಬಗ್ಗೆ ಆಸೆ ಇಲ್ಲ ನಮ್ಮ ಸುತ್ತಮುತ್ತ ಓಡಾಡುತ್ತಿರುವ ಜನರೆ ಮುಖ್ಯ, ಅವರ ಅಭಿಮಾನವೇ ಮುಖ್ಯ ಎಂದು ಹೇಳಿದ್ದಾರೆ.

ನಟ ವಿನೋದ್ ರಾಜ್ ಸಿನಿಮಾಗಳಿಂದ ದೂರ ಉಳಿಯಲು ಕಾರಣವೇನು ಗೊತ್ತೆ?- Kannada Prabha

ದೇವರು ಒಂದು ಹಂತದವರೆಗೆ ಎಲ್ಲವನ್ನು ಕೊಟ್ಟಿದ್ದಾನೆ. ನಾವು ಅಂದರೆ ನಟರು ಮಾಡುತ್ತಿರುವುದು ಸರಿ ತಪ್ಪು ಎಂದು ತಿಳಿಯುವುದು ಒಳ್ಳೆಯ ಅಭಿಮಾನಿಗಳಿದ್ದಾಗ. ಅಭಿಮಾನಿಗಳೊಂದಿಗೆ ಒಂದಷ್ಟು ಕಾಲ ಮಾತನಾಡಿಕೊಂಡು ಸಮಯ ಕಳೆಯಬೇಕು. ನಾವು ಈ ಪ್ರಪಂಚ ಬಿಟ್ಟು ಹೋದಾಗ ಅಯ್ಯೋ ಹೋಗಿ ಬಿಟ್ಟರಲ್ಲ ಎಂದು ಹೇಳಿದರೆ ಅಂದು ನಮ್ಮ ಜೀವನ ಸಾರ್ಥಕವಾಗುತ್ತದೆ, ಆಸ್ಕರ್, ನ್ಯಾಷನಲ್ ಅವಾರ್ಡ್ ಸಿಕ್ಕಿದಂತೆ ಆಗುತ್ತದೆ ಎಂದು ವಿನೋದ್ ರಾಜ್ ಅವರು ಹೇಳಿಕೊಂಡಿದ್ದಾರೆ.

ಲೀಲಾವತಿ ಅವರು ಕಷ್ಟದಿಂದ ತಮ್ಮ ಮಗನನ್ನು ಬೆಳೆಸಿದ್ದಾರೆ. ವಿನೋದ್ ರಾಜ್ ಅವರು ಕೂಡ ಕಷ್ಟದ ಜೀವನದಲ್ಲಿ ಬೆಳೆದು ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ವಿನೋದ್ ರಾಜ್ ಅವರು ತಮ್ಮ ತಾಯಿಯನ್ನು ಹೆಚ್ಚು ಪ್ರೀತಿಸುತ್ತಾರೆ ಅವರ ಪ್ರೀತಿ ಸದಾ ಕಾಲ ಹೀಗೆ ಇರಲಿ ಎಂದು ಆಶಿಸೋಣ.

ನಟ ವಿನೋದ್ ರಾಜ್ ಯಾಕೆ ಮದುವೆಯಾಗಿಲ್ಲ ಗೊತ್ತಾ? | Kannada actress leelavathi son vinod raj | TOP TRENDING - YouTube

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

You might also like

Comments are closed.