vinod-raj-gets-angry

ಫೋಟೋ ವೈರಲ್ ಮಾಡಿದವನ ಬಗ್ಗೆ ಮೊದಲ ಬಾರಿಗೆ ವಿನೋದ್ ರಾಜ್ ಗರಂ ಆಗಿದ್ಯಾಕೆ..? ತಮ್ಮ ಮದುವೆ ಬಗ್ಗೆ ಹೇಳಿದ್ದೇನು..?

Entertainment/ಮನರಂಜನೆ

ವಿನೋದ್ ರಾಜ್ ಅವರಿಗೆ ಮದುವೆಯಾಗಿದೆ ಎಂಬ ಸುದ್ದಿ ಕಳೆದ ಒಂದು ವಾರದಿಂದ ಬಹಳ ವೈರಲ್ ಆಗುತ್ತಿದೆ. ಈ ಬಗ್ಗೆ ನಟಿ ಲೀಲಾವತಿ ಅವರು ಮಾತನಾಡಿ, ಹೌದು ನನ್ನ ಮಗನಿಗೆ ನಾನೇ ಮುಂದೆ ನಿಂತು ಮದುವೆ ಮಾಡಿದ್ದೀನಿ. ಒಬ್ಬ ಮೊಮ್ಮಗನೂ ಇದ್ದಾನೆ. ಸೊಸೆ ಹಾಗೂ ಮೊಮ್ಮೊಗ ಚೆನ್ನೈನಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದರೂ. ಆದರೂ ಸುಮ್ಮನಿರದ ಮಾಧ್ಯಮಗಳು ಪದೇ ಪದೇ ಈಗಬ್ಬೆ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರನ್ನು ಪ್ರಶ್ನಿಸುತ್ತಲೇ ಇದ್ದಾರೆ. ಹೀಗಾಗಿ ಇದೀಗ ವಿನೋದ್ ರಾಜ್ ಅವರ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ಯಾಕೆ ಮಾಧ್ಯಮದವರು ಪದೇ ಪದೇ ಅದೇ ಪ್ರಶ್ನೆಗಳನ್ನು ಕೇಳುತ್ತಿದ್ದೀರಾ. ಕೆಲ ಪ್ರಶ್ನೆಗಳಿಗೆ ಉತ್ತರ ಕೊಡಲು ಇಷ್ಟವಿಲ್ಲ ಎಂದ ಮೇಲೂ ಪ್ರಶ್ನೆ ಮಾಡಿದರೆ ಉತ್ತರ ನೀಡಲು ಸಾಧ್ಯವಿಲ್ಲ. ನನ್ನ ತಾಯಿ ಬಹಳ ಕಷ್ಟ ಪಟ್ಟು ಚಿತ್ರರಂಗದಲ್ಲಿ ದುಡಿದಿದ್ದಾರೆ. ಕಲಾವಿದರಿಗೆ ಯಾರೂ ಗೌರವಧನ ಅಥವಾ ಸಹಾಯಧನ ನೀಡುವುದಿಲ್ಲ. ನನ್ನ ತಾಯಿ ಎಷ್ಟು ದುಡಿದು ಉಳಿಸಿದ್ದಾಳೋ ಅಷ್ಟೇ. ಸಿನಿಮಾರಂಗ ಬಿಟ್ಟು ಎಷ್ಟೋ ವರ್ಷಗಳಾಗಿವೆ. ನಮ್ಮ ಪಾಡಿಗೆ ನಾವು ಬದುಕಲು ಕೂಡ ಬಿಡುವುದಿಲ್ಲ. ನನ್ನ ತಾಯಿ ನನ್ನನ್ನು ಕಷ್ಟಪಟ್ಟು ಸಾಕಿದ್ದಾಳೆ. 

ಕಲಾವಿದರು ಮದುವೆಯಾದರೆ ಯಾಕೆ ಹೀಗೆ ಮಾಡುತ್ತೀರಾ..? ಇದರಿಂದ ಭಯೋತ್ಪಾದನೆ ಆದರಂತೆ, ಅಲ್ಲೋಲ ಕಲ್ಲೋಲ ಆದಂತೆ ಏನೋ ನಿಧಿ ಹುಡುಕಿದಂತೆ ಮಾಡುವುದು ಯಾಕೆ. ನನ್ನ ತಾಯಿ ಒಬ್ಬ ಶ್ರೇಷ್ಠ ವ್ಯಕ್ತಿ. ಅವರನ್ನು ನೋಯಿಸಿದ್ರೆ, ಯಾರಿಗೂ ಒಳ್ಳೆಯದಾಗುವುದಿಲ್ಲ. ಕುಗ್ರಾಮದಲ್ಲಿ ನನ್ನ ತಾಯಿ ಬಡವರಿಗಾಗಿ ಆಸ್ಪತ್ರೆಯನ್ನು ಕಟ್ಟಿಸಿದ್ದಾಳೆ. ಇದರ ಬಗ್ಗೆ ಒಬ್ಬರೂ ಪ್ರಶ್ನೆ ಮಾಡುವುದಿಲ್ಲ. ಹಿಂದೆ ಚಪ್ಪಲಿಯಲ್ಲಿ ಹೊಡೆದಿದ್ದರು. ಈಗ ಮರಿಯಾದೆ ತೆಗೆಯೋಕೆ ಹೊರಟಿದ್ದೀರಾ..? ಇದೆಲ್ಲಾ ಯಾಕೆ ಬೇಕಾಗಿದೆ ಎಂದು ಪ್ರಶ್ನೆಗಳ ಸುರಿ ಮಳೆಯನ್ನೇ ಸುರಿಸಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.