
ಹಿರಿಯ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರು ತಾಯಿಯಂತೆಯೇ ದಾನ ಧರ್ಮ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ವಿನೋದ್ ರಾಜ್ ಅವರು ತಮ್ಮ ತಾಯಿ ಜೊತೆಗೆ ವಾಸವಿದ್ದು, ಇಂದಿಗೂ ಮದುವೆನೇ ಆಗಿಲ್ಲ ಎಂದು ಎಲ್ಲರೂ ಬೇಸರ ಮಾಡಿಕೊಂಡಿದ್ದರು. ಈ ಹಿಂದೆ ಯಾಕಿನ್ನು ನೀವು ಮದುವೆಯಾಗಿಲ್ಲ ಎಂದು ಕೇಳಿದ್ದಕ್ಕೆ, ನನ್ನ ತಾಯಿಯಿಂದ ದೂರಾಗಲು ನಾನು ಬಯಸೊಲ್ಲ, ಅವಳಿಗಾಗಿ ನನ್ನ ಬದುಕು ಮುಡಿಪು ಎಂದಿದ್ದರು. ಸದಾ ಅವರ ತಾಯಿ ಜೊತೆ ಇರುವ ವಿನೋದ್ ರಾಜ್, ತಮ್ಮ ತಾಯಿ ಜೊತೆಗೆ ಅರಾಮವಾಗಿ ಜೀವನ ನಡೆಸುತ್ತಿರುವುದಾಗಿ ಹೇಳಿದ್ದರು.
ಅಮ್ಮನಿಗೆ ವಯಸ್ಸಾಗಿದೆ. ನಾನು ಮಗುವಾಗಿದ್ದಾಗ ನನ್ನನ್ನು ಕಾರಿನಲ್ಲಿ ಮಲಗಿಸಿ ನಟಿಸಿ ಬರುತ್ತಿದ್ದಳು. ಈಗ ಆಕೆಯನ್ನು, ಆಕೆಯ ಆಸೆಯಂತೆ ನೋಡಿಕೊಳ್ಳುವುದು ಬಿಟ್ಟು ನನಗೆ ಬೇರೇನೂ ಕೆಲಸವಿಲ್ಲ ಎಂದು ಹೇಳುತ್ತಾರೆ. ನೆಲಮಂಗಲದಲ್ಲಿ ಲೀಲಾವತಿ ಹಾಗೂ ವಿನೋದ್ ರಾಜ್ ವಾಸವಿದ್ದಾರೆ. ಸೋಲದೇವನಹಳ್ಳಿಯಲ್ಲಿ ಈ ಹಿಂದೆ ಲೀಲಾವತಿ ಅವರು ಚಿಕ್ಕದೊಂದು ಆಸ್ಪತ್ರೆಯನ್ನು ನಿರ್ಮಿಸಿ ಸುತ್ತಹಳ್ಳಿಯ ಜನಕ್ಕೆ ಸಹಾಯ ಮಾಡಿದ್ದರು. ಇದೇ ದಾರಿಯಲ್ಲೇ ವಿನೋದ್ ರಾಜ್ ಕೂಡ ನಡೆಯುತ್ತಿದ್ದಾರೆ.
ವಿನೋದ್ ರಾಜ್ ಹಾಗೂ ಅವರ ತಾಯಿ ಜನಸೇವೆಯೇ ಜನಾರ್ಧನನ ಸೇವೆ ಅಂತ ನಂಬಿ ಬದುಕು ನಡೆಸುತ್ತಿದ್ದಾರೆ. ಲೀಲಾವತಿ ಅವರ ಆರೋಗ್ಯ ಹದಗೆಡುತ್ತಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಪ್ರಕಾಶ್ ರಾಜ್ ಮೆಹು ಅವರು ವಿನೋದ್ ರಾಜ್ ಅವರ ಪತ್ನಿ ಮತ್ತು ಮಗ ಇರುವ ಫೋಟೋ ಒಂದನ್ನು ಒಂದನ್ನು ಬಹಿರಂಗಪಡಿಸಿದ್ದಾರೆ. ಲೀಲಾವತಿಯವರ ಪತಿ ಮಹಾಲಿಂಗ ಭಾಗವತರ್ ಎಂದು ಹೇಳಿದ್ದು, ವಿನೋದ್ ರಾಜ್ ಅವರು ಮದುವೆಯಾಗಿದ್ದಾರೆ ಎಂಬ ವಿಚಾರವನ್ನು ಹೇಳಿದ್ದಾರೆ. ವಿನೋದ್ ರಾಜ್ ಅವರದೇ ಮನೆಯಲ್ಲಿ ತೆಗೆದಿರುವ ಫೋಟೊಗಲ್ಲಿ ಹೆಂಡತಿ ಮಗ ಇರುವುದನ್ನು ಹಂಚಿಕೊಂಡಿದ್ದು ಅದು ವೈರಲ್ ಆಗಿದೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.
Comments are closed.