ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ವಿನಯ ಪ್ರಸಾದ್ ಅವರ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ಗೊತ್ತಿದೆ. ಹೌದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಾಗೇನೇ ತುಳು ಚಿತ್ರದಲ್ಲಿಯೂ ಅಭಿನಯಿಸಿ ಪಂಚಭಾಷಾ ನಟಿಯಾಗಿ ಮಿಂಚಿ ಎಲ್ಲರ ಮನಗೆದ್ದು ದೊಡ್ಡ ಅಭಿಮಾನಿ ಬಳಗವನ್ನು ಆ ಕಾಲಕ್ಕೆ ಗಳಿಸಿಕೊಂಡು ಹೊರಹೊಮ್ಮಿದವರು ವಿನಯ್ ಪ್ರಸಾದ್. ತಂದೆ ತಾಯಿಯ ಆಸೆಯಂತೆ ಧಾರವಾಡ ಬಿಟ್ಟು ಉಡುಪಿ ಸೇರಿದ ನಟಿ ವಿನಯ್ ಪ್ರಸಾದ್, ಭರತನಾಟ್ಯ ಡಾನ್ಸ್, ಹಾಡು, ನಟನೆ, ನಿರ್ದೇಶನ, ನಿರ್ಮಾಪಕಿ ಆಗಿಯೂ ಸೈ ಎನಿಸಿಕೊಂಡವರು. ಆದ್ರೆ ಇವರಿಗೆ ಸಿನಿಮಾರಂಗದಿಂದ ಸಿಗಬೇಕಾದ ಹೆಚ್ಚು ಹಣ ವೈಭವದ ಜೀವನ ಈ ನಟಿಗೆ ಸಿಗಲಿಲ್ಲ ಎಂದು ಹೇಳಬಹುದು. ಎಲ್ಲದರಲ್ಲಿಯೂ ಕೂಡ ವಿನಯ್ ಪ್ರಸಾದ್ ಅವರು ಮುಂದಿದ್ದರು. ಹೌದು ಅವರ ತಾಯಿ ಇಷ್ಟಪಟ್ಟ ಹಾಗೆ ನಟನೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದು ಆಕಾಂಕ್ಷೆ ಹೊಂದಿದ್ದ ನಟಿ ವಿನಯಪ್ರಸಾದ್ ಅವರು ಆರಂಭದಲ್ಲಿ ಕೆಲ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡರು.

ತದನಂತರ ಪ್ರಥಮ ಎನ್ನುವ ಒಂದು ಹೆಣ್ಣು ಮಗು ಕೂಡ ಇವರಿಗೆ ಜನನವಾಯಿತು. ಏಳು ವರ್ಷ ವೈವಾಹಿಕ ಜೀವನ ತುಂಬಾ ಚೆನ್ನಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಪತಿಯ ಹಿರಿಮೆ ಚಿತ್ರರಂಗದಲ್ಲಿ ಕಡಿಮೆ ಆಗುತ್ತಿದ್ದಂತೆ, ಅವಕಾಶಗಳು ಕಡಿಮೆ ಆಗುತ್ತಿದ್ದಂತೆ, ಎಲ್ಲಿ ಹೋದರೂ ವಿ ಆರ್ ಕೆ ಪ್ರಸಾದ್ ಅವರನ್ನ ನಟಿ ವಿನಯ್ ಪ್ರಸಾದ್ ಗಂಡ ಎಂದು ಹೆಚ್ಚು ಜನರು ಗುರುತಿಸುತ್ತಿದ್ದರಂತೆ. ಇದನ್ನ ನೋಡಿ ವಿ ಆರ್ ಕೆ ಪ್ರಸಾದ್ ಬೇಸತ್ತು ಹೋಗಿ ಇರಿಸು ಮುರಿಸು ಅಗುತ್ತಿತ್ತಂತೆ. ವಿನಯ್ ಪ್ರಸಾದ್ ಹಾಗೂ ವಿ ಆರ್ ಕೆ ಪ್ರಸಾದ್ ನಡುವೆ ವೈಮನಸ್ಸು ಸಹ ಉಂಟಾಗಿತ್ತು ಎನ್ನಲಾಗಿದೆ. ನಂತರ ನಟಿ ವಿನಯ್ ಪ್ರಸಾದ್ ಅವರ ಪತಿ ವಿ ಆರ್ ಕೆ ಪ್ರಸಾದ್ ಅವರು ಕಾಲವಾಗುತ್ತಾರೆ. ಅಂದಿನ ದಿನಗಳಲ್ಲಿ ಗಂಡ ಇಲ್ಲ ಎಂದರೆ ಹೆಣ್ಣನ್ನು ನೋಡುವ ರೀತಿಯೇ ಬೇರೆಯಾಗಿತ್ತು.
ಎಲ್ಲವನ್ನು ಎದುರಿಸಿ ಕುಗ್ಗದೆ, ಅಂಜದೆ, ಈ ಚಿತ್ರರಂಗದಲ್ಲಿ ತಮಗೆ ತಾವೇ ಧೈರ್ಯ ಹೇಳಿಕೊಂಡು, ತಮ್ಮ ಮಗಳನ್ನು ಬೆಳೆಸುತ್ತ, ಯಾರಿಗೂ ಹೆದರದೇನೆ ಗಟ್ಟಿಗಿತ್ತಿ ಜೀವನವನ್ನ ಮಾಡಿದವರು ನಟಿ ವಿನಯಪ್ರಸಾದ್ ಅವರು. ಆನಂತರ 2001ರಲ್ಲಿ ವಿನಯ ಪ್ರಸಾದ್ ಅವರು ಮಹಾರಾಷ್ಟ್ರದ ಕವಿ ಸಾಹಿತ್ಯಗಾರ ಹಿಂದಿ ಮರಾಠಿ ಹಾಡುಗಳಲ್ಲಿ ಹಾಡುತ್ತಿದ್ದ ಹಾಡುಗಾರ ಜ್ಯೋತಿ ಪ್ರಕಾಶ್ ಎಂಬವರನ್ನು ಮದುವೆ ಆಗುತ್ತಾರೆ. ಆಗಲೇ ಒಂದು ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡಿದ್ದ ಪ್ರಕಾಶ್ ಅವರಿಗೆ ಒಬ್ಬ ಮಗನು ಕೂಡ ಇದ್ದು, ನಟಿ ವಿನಯ ಪ್ರಸಾದ್ ಅವರು ಜ್ಯೋತಿ ಪ್ರಕಾಶ್ ಅವರ ಗುಣಗಳನ್ನು ಮೆಚ್ಚಿ ಮದುವೆಯಾಗುತ್ತಾರೆ. ಇಂದು ಇವರಿಬ್ಬರ ಸುಖ ಸಂಸಾರ ಜೀವನ ಚೆನ್ನಾಗಿ ನಡೆಯುತ್ತಿದೆ. ಹಾಗೆ ನಟಿಯ ವಿನಯ್ ಪ್ರಸಾದ್ ಇದ್ದ ಹೆಸರು ಇದೀಗ ವಿನಯ್ ಪ್ರಕಾಶ್ ಆಗಿದೆ ಎಂದು ಹೇಳಲಾಗುತ್ತಿದೆ.
ವಿನಯ್ ಪ್ರಸಾದ್ ಅವರ ಒಬ್ಬ ಮಗಳು ಕೂಡ ಪ್ರಥಮ ಪ್ರಸಾದ್ ಇದೀಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹೌದು ವಿನಯ ಪ್ರಸಾದ್ ಅವರು ಏನೇ ಕಷ್ಟ ಬಂದರೂ ಸಿನಿಮಾರಂಗದಲ್ಲಿ ಬಹುಬೇಗ ಮದುವೆಯಾದ ಬಳಿಕ ತನ್ನ ಗಂಡನನ್ನು ಕಳೆದುಕೊಂಡರೂ ಎಲ್ಲವನ್ನು ಮೆಟ್ಟಿ ನಿಂತು ಕಷ್ಟದಲ್ಲಿ ಜೀವನ ಮಾಡಿ ಇಂದು ಸುಖವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..