ಸದ್ಯ ಎಲ್ಲಿ ನೋಡಿದರೂ ಇತ್ತೀಚೆಗೆ ಒಬ್ಬ ವ್ಯಕ್ತಿ ತಾನು ದೇವರು ತಾನು ದೇವರ ಮಗ ಎಂದು ಹೇಳಿಕೊಂಡು ಜನರನ್ನು ನಂಬಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ರೀತಿ ಅದೆಷ್ಟೋ ಜನರು ಗುರೂಜಿಗಳಾಗಿ ಜನರು ಅವರನ್ನು ದೇವರೆಂದು ಪೂಜಿಸುತ್ತಾರೆ.
ಕೆಲವರು ತಮ್ಮನ್ನು ದೇವರ ಸೇವೆಗೆ ಅರ್ಪಿಸಿ ನಂತರ ಜನರ ಸೇವೆಯಲ್ಲಿ ನಿರತರಾಗಿದ್ದರೆ, ಇನ್ನು ಕೆಲವರು ದೇವರ ಹೆಸರಿನಲ್ಲಿ ಮೋ-ಸ ಮಾಡುವುದನ್ನು ಸಹ ನಾವು ಕೇಳಿದ್ದೇವೆ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚೆಗೆ ಬಹಳ ಸದ್ದು ಮಾಡಿದ ಹೆಸರು ಎಂದರೆ ಅದು ವಿನಯ್ ಗುರೂಜಿ.
ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರ ಸಹೋದರ ರಮೇಶ್ ಪುತ್ರ ಚಂದ್ರಶೇಖರ್ ಸಾವು ಇದೀಗ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇನ್ನು ಇತ್ತಿಚೆಗೆ ಈ ಕೇಸ್ ನಲ್ಲಿ ವಿನಯ್ ಗುರೂಜಿ ಅವರ ಹೆಸರು ಸಹ ಕೇಳಿ ಬಂದಿತ್ತು. ಇನ್ನು ಅವರು ಪೊಲೀಸರಿಗೆ ಸಹಕರಿಸಿ ಮಾಹಿತಿ ನೀಡಿರುವುದಾಗಿ ಸ್ವತಃ ಗುರೂಜಿ ತಿಳಿಸಿದ್ದರು.
ಸದ್ಯ ವಿನಯ್ ಗುರೂಜಿ ಅವರ ಬಗ್ಗೆ ಆಪ್ತರೊಬ್ಬರು ಒಂದು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋದಲ್ಲಿ ಅವರು ಹೇಳಿರುವ ಮಾತುಗಳು ಎಲ್ಲರ ಬಾಯಿ ಮುಚ್ಚಿಸಿದೆ. ವಿನಯ್ ಗುರೂಜಿ ಬಗ್ಗೆ ಯಾರಿಗೂ ತಿಳಿಯದೆ ಶಾಕಿಂಗ್ ಸತ್ಯಗಳನ್ನು ಆತ ಎಲ್ಲರ ಮುಂದೆ ಬಹಿರಂಗ ಪಡಿಸಿದ್ದಾನೆ.
ಹೌದು ಅದೆಷ್ಟೋ ಬಾರಿ ವಿನಯ್ ಗುರೂಜಿ ತಾನು ದೇವ ಪುರುಷ ಹಾಗೆ ತಾನು ಜನರಿಗಾಗಿ ಸೇವೆ ಮಾಡಲು ಬಂದಿರುವುದಾಗಿ ಅನೇಕ ಬಾರಿ ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ. ಆದರೆ ಇದೀಗ ವಿನಯ್ ಗುರೂಜಿ ಅವರ ಸ್ನೇಹಿತ ಹೇಳಿರುವ ಮಾತುಗಳು ಕೇಳಿದರೆ ನಿಜಕ್ಕೂ ಎಲ್ಲರೂ ಶಾಕ್ ಆಗುತ್ತಿರಾ.
ವಿನಯ್ ಗುರೂಜಿ ಅವರ ಕೆಲಸಗಳು ಹಾಗೆ ಅವರ ಬಗ್ಗೆ ಸುದ್ದಿಗಳು ಹೆಚ್ಚಾಗುತ್ತಿದ್ದಂತೆ ಇದೀಗ ಅವರ ಸಂಬಂಧಿ ಹಾಗೂ ತನ್ನ ಕ್ಲಾಸ್ ಮೇಟ್ ಎಂದು ಹೇಳಿಕೊಂಡು ಒಬ್ಬ ವ್ಯಕ್ತಿ ಒಂದು ವಿಡಿಯೋ ಮಾಡಿ ಅವರ ಬಗ್ಗೆ ಯಾರಿಗೂ ತಿಳಿಯದಂತಹ ವಿಷಯಗಳನ್ನು ತಿಳಿಸಿದ್ದಾನೆ.
ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಬಹಳ ಶಾಕ್ ಆಗಿದ್ದಾರೆ. ಸದ್ಯ ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.