ಮನಸ್ಸು ಬಿಚ್ಚಿ ಹಾಡಲು ಕುಣಿಯಲು ಯಾರ ಒಪ್ಪಿಗೆಯೂ ಬೇಕಾಗುವುದಿಲ್ಲ, ಮನಸ್ಸಿಗೆ ಇಷ್ಟವಾದ ಹಾಡು ಪ್ಲೇ ಆಗುತ್ತಿದ್ದರೆ ನಿಮಗೆ ಗೊತ್ತಿಲ್ಲದೇ ನಿಮ್ಮ ಮನಸ್ಸಿನಲ್ಲಿ ಉತ್ಸಾಹ ಬರುವುದಲ್ಲದೆ, ನಿಮ್ಮ ಬಾಯಲ್ಲಿ ಆ ಹಾಡು ಬರಲಾರಂಭಿಸುತ್ತದೆ. ಅಷ್ಟೇ ಏಕೆ ನಿಮ್ಮ ಇಷ್ಟದ ಹಾಡಿಗೆ ಎದ್ದು ಹೋಗಿ ಒಂದೆರಡು ಸ್ಟೆಪ್ಸ್ ಹಾಕಿ ಬರಲೇನು ಅನಿಸುತ್ತದೆ. ಹಾಗೂ ಇಷ್ಟದ ಹಾಡು ಕೇಳಿ ನಿಮ್ಮ ಕೈ ಕಾಲುಗಳು ತಮ್ಮಷ್ಟಕ್ಕೆ ತಾವೇ ಅಲುಗಾಡಲು ಸಹ ಶುರು ಮಾಡುತ್ತವೆ.
ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಅದರಲ್ಲಿ ಓರ್ವ ಟೀನ್ ಏಜ್ ಬಾಲಕಿ ಒಂದು ಹರ್ಯಾಣಿ ಹಾಡಿಗೆ ಮನಸ್ಸು ಬಿಚ್ಚಿ ಹಾಕಿರುವ ಹೆಜ್ಜೆಯ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೆಯಾಗಿದ್ದು ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಆ ಹುಡುಗಿಯ ಕ್ಯೂಟ್ ಡಾನ್ಸ್ ನೋಡುಗರ ಕಣ್ಮನ ಸೆಳೆಯುತ್ತದೆ. ಏಕೆಂದರೆ ಆಕೆ ಹಾಕಿರುವ ಸ್ಟೆಪ್ಸ್ ಅಷ್ಟು ಸುಂದರವಾಗಿ ಮೂಡಿ ಬಂದಿವೆ. ಈ ವಿಡಿಯೋದಲ್ಲಿ ಮೊದಲಿಗೆ ಓರ್ವ ಯುವಕ ಸೌಂಡ್ ಸಿಸ್ಟಮ್ ನಲ್ಲಿ ಹರ್ಯಾಣಿ ಮೂಲದ ಒಂದು ಹಾಡನ್ನು ಹಾಕಿಕೊಂಡು ನೃತ್ಯ ಮಾಡಲು ಆರಂಭಿಸುತ್ತಾನೆ, ಆಗ ಅಲ್ಲಿಯೇ ಕ್ರೀಮ್ ಕಲರ್ ಚೂಡಿ ಧರಿಸಿದ್ದ ಈ ಬಾಲಕಿ ಸಹ ಆತನೊಂದಿಗೆ ಸ್ಟೆಪ್ಸ್ ಹಾಕಲು ಶುರು ಮಾಡುತ್ತಾಳೆ.
ಅದುವರೆಗೂ ಅಲ್ಲಿ ಯಾರೂ ಇರಲಿಲ್ಲ, ಆ ಹುಡುಗಿ ಹೆಜ್ಜೆ ಹಾಕಲು ಆರಂಭಿಸಿದ ನಂತರ ಇವಳ ಈ ಡಾನ್ಸ್ ಇಷ್ಟ ಪಟ್ಟು ಹಲವಾರು ಜನರು ಅಲ್ಲಿ ಸೇರುತ್ತಾರೆ. ಇತ್ತೀಚಿಗೆ ಡಿಜೆ ಸಾಂಗ್ಸ್ ಫೇಮಸ್ ಆಗಿದ್ದು ಡಿಜೆ ಹಾಡುಗಳನ್ನು ಕೇಳಿದ ತಕ್ಷಣವೇ ಮನದಲ್ಲಿ ಕುಣಿಯುವ ಮತ್ತು ಏರಿ ನಮಗರಿವಿಲ್ಲದಂತೆ ಸ್ಟೆಪ್ಸ್ ಹಾಕಿ ಬಿಡುತ್ತೇವೆ.
ಇದೇ ತರಹ ಈ ಹುಡ್ಗಿಯು ಸಹ ಖುಷಿಯ ಮತ್ತೇರಿ ಮನಬಿಚ್ಚಿ ಕುಣಿದು ಉಲ್ಲಾಸಿತಲಾಗುತ್ತಾಳೆ. ಸಾಮಾನ್ಯವಾಗಿ ಯಾರೇ ಆದರೂ ಅದರಲ್ಲೂ ಹುಡುಗಿಯರು ಜನ ಜಂಗುಳಿ ಸ್ಥಳಗಳಲ್ಲಿ ಮಾತನಾಡಲು, ಹಾಡಲು ಹಾಗೂ ಕುಣಿಯಲು ನಾಚಿಕೆಯಿಂದ ಹಿಂಜರಿದು ಮೌನವಾಗುತ್ತಾರೆ ಆದರೆ ಈ ಹುಡುಗಿ ಅದ್ಯಾವುದರ ಅರಿವಿಲ್ಲದೆ ಧೈರ್ಯದಿಂದ ನಾಚಿಕೆಯನ್ನು ಪಕ್ಕಕ್ಕಿಟ್ಟು ಮನ ಬಂದಂತೆ ಕುಣಿದಿದ್ದಾಳೆ.
ಈ ತರಹದ ಕ್ರಿಯಾಶೀಲ ಮನಸ್ಸು ಇದ್ದರೆ ಯಾವುದೇ ಸಂದರ್ಭದಲ್ಲಿ ಆದರೂ ಸರಿ ತೊಂದರೆಗಳನ್ನು ಎದುರಿಸಬಹುದು. ಈ ಒಂದು ಹರ್ಯಾಣಿ ಡಿಜೆ ಹಾಡಿಗೆ ಈ ಹುಡುಗಿ ಹೆಜ್ಜೆ ಹಾಕಿ ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ, ನಮ್ಮ ಮನಸ್ಸಿಗೆ ತೋಚಿದ್ದನ್ನು ಹಾಗೂ ಒಳ್ಳೆಯದು ಅನ್ನಿಸಿದನ್ನು ಮಾಡಬೇಕು ಎನ್ನುವ ಹಾಗೆ ನಾವು ಮಾತನಾಡಿದರೆ, ಹಾಡಿದರೆ, ಕುಣಿದರೆ ಜನ ನಗುತ್ತಾರೆ ಆಡಿಕೊಳ್ಳುತ್ತಾರೆ ಎಂದುಕೊಳ್ಳುವವರಿಗೆ ಈ ಹುಡುಗಿಯ ಖಡಕ್ ಡಾನ್ಸ್ ಸ್ಫೂರ್ತಿಯಾಗಿದೆ.
ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ Sonotec Panjabi ಎಂಬ ಖಾತೆಯ ಮೂಲಕ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋವನ್ನು 3 ಕೋಟಿ ಜನರು ವೀಕ್ಷಿಸಿದ್ದು 51 ಸಾವಿರ ಜನರು ಈ ವಿಡಿಯೋವನ್ನು ಇಷ್ಟ ಪಟ್ಟಿದ್ದಾರೆ. ಈ ಹುಡುಗಿಯ ಡ್ಯಾನ್ಸ್ ನೋಡಲು ವಿಡಿಯೋದಲ್ಲಿ ಜನ ಹೇಗೆ ನೋಡುತ್ತಿದ್ದರೋ ಹಾಗೆಯೇ ಯೂಟ್ಯೂಬ್ ನಲ್ಲಿಯೂ ಪ್ರೇಕ್ಷಕ ಬಂಧುಗಳು 2:30 ನಿಮಿಷದ ಈ ವಿಡಿಯೋವನ್ನು ವೀಕ್ಷಣೆ ಮಾಡುತ್ತಿದ್ದು ಲೈಕ್ ಮತ್ತು ಕಾಮೆಂಟ್ ಮಾಡುವುದರ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…