Village-girl-Dance

ಗ್ರಾಮದ ಬೀದಿಯಲ್ಲಿ ಪಟ್ಟಣದ ಪೋರಿಯ ಭರ್ಜರಿ ಡ್ಯಾನ್ಸ್, ಯುವತಿಯ ಡ್ಯಾನ್ಸ್ ಏರಿಸುತ್ತಿದೆ ಅಭಿಮಾನಿಗಳ ಹೃದಯ ಬಡಿತ

Entertainment/ಮನರಂಜನೆ

ಇತ್ತೀಚಿನ ದಿನಗಳಲ್ಲಿ ಡ್ಯಾನ್ಸ್ ಒಂದು ದೊಡ್ಡ  ಕಲೆಯಾಗುತ್ತಿದ್ದು, ಅದ್ಬುತ ನೃತ್ಯಗಳ ಮೂಲಕ ಜನ ಫೇಮಸ್ ಆಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಇಂದು ಡ್ಯಾನ್ಸ್ ಬಲ್ಲ ಪ್ರತಿಭಾವಂತರು ಅವಕಾಶಗಳಿಗಾಗಿ ಕಾಯುತ್ತಾ ಕೂರುವ ಅನಿವಾರ್ಯತೆ ಖಂಡಿತ ಇಲ್ಲ. ಏಕೆಂದರೆ ಸಾಮಾಜಿಕ ಜಾಲತಾಣಗಳು ಪರಿಣಾಮಕಾರಿಯಾಗಿ ಇರುವ ಇಂದಿನ ದಿನಗಳಲ್ಲಿ ಒಂದು ವೀಡಿಯೋ ವೈರಲ್ ಆದರೂ ಸಹಾ ಪ್ರತಿಭಾವಂತರ ಪಾಲಿಗೆ ಅದು ವರವಾಗಿ ಪರಿಣಮಿಸುತ್ತಿದೆ.

ಡ್ಯಾನ್ಸ್ ಕಲಾವಿದರು ಸಹಾ ರಾತ್ರೋರಾತ್ರಿ ಯಶಸ್ಸನ್ನು ಪಡೆದುಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳ ಮಟ್ಟಕ್ಕೆ ಸದ್ದನ್ನು ಮಾಡುತ್ತಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳ ಮೂಲಕ ಸೊಂಟು ಬಳುಕಿಸಿ, ಹೆಜ್ಜೆ ಹಾಕಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಮಂದಿ ಇಂದಿನ ದಿನಗಳಲ್ಲಿ ಬಹಳಷ್ಟು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಅವರು ತಮ್ಮ ಡ್ಯಾನ್ಸ್ ಗಳನ್ನು ತಮ್ಮನ್ನು ಇಷ್ಟಪಡುವ ಅಭಿಮಾನಿಗಳು ಮತ್ತು ಡ್ಯಾನ್ಸ್ ಪ್ರಿಯರ ಬಳಿಗೆ ಕೊಂಡೊಯ್ಯುತ್ತಿದ್ದಾರೆ.

ಈ ನೃತ್ಯಗಳನ್ನು ಅವರನ್ನು ಸಿಕ್ಕಾಪಟ್ಟೆ ಫೇಮಸ್ ಆಗುವಂತೆ ಮಾಡುತ್ತಿದೆ. ಅದಕ್ಕಾಗಿಯೇ ಜನರು ಹೆಚ್ಚು ಹೆಚ್ಚು ನೃತ್ಯ ವೀಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಡ್ಯಾನ್ಸ್ ವೀಡಿಯೊಗಳ ಮೂಲಕ ತಮ್ಮದೇ ಆದ ಹೆಸರನ್ನು ಮಾಡುತ್ತಿದ್ದಾರೆ. ಈಗ ಇಂತಹದೊಂದು ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಹುಡುಗಿಯೊಬ್ಬಳು ಹಳ್ಳಿಯ ಬೀದಿಯಲ್ಲಿ ‘ಫುಲ್ ದೇಹತಿ’ ಹಾಡಿಗೆ ನೃತ್ಯ ಮಾಡುವ ಮೂಲಕ ಜನರನ್ನು ಅಚ್ಚರಿ ಪಡುವಂತೆ ಮಾಡಿದ್ದಾಳೆ.

ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಜೀನ್ಸ್ ಮತ್ತು ಟೀ ಶರ್ಟ್ ಧರಿಸಿರುವ ಒಬ್ಬ ಹುಡುಗಿಯನ್ನು ನೀವು ನೋಡಬಹುದು. ಅಲ್ಲದೇ ಅಲ್ಲೇ ಗ್ರಾಮದ  ಮಹಿಳೆಯರ ಒಂದು ಗುಂಪು ಕುಳಿತಿರುವುದು ಕಾಣುತ್ತದೆ. ಒಂದಷ್ಟು ಜನ ಹುಡುಗರು ಅಲ್ಲಿದ್ದಾರೆ. ಆ ಜನಸಮೂಹದ ಮಧ್ಯೆ ಯುವತಿಯು ಫೂಲ್ ದೇಹತಿ ಹಾಡಿಗೆ ಅದ್ಭುತವಾದ ನೃತ್ಯವನ್ನು ಮಾಡುತ್ತಾ ಎಲ್ಲರ ಗಮನವನ್ನು ಸೆಳೆದಿದ್ದಾಳೆ.

ಯುವತಿಯ ಈ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ತನ್ನ ಜಬರ್ದಸ್ತ್ ನೃತ್ಯ ಅದ್ಭುತ ಕೌಶಲ್ಯವನ್ನು ಪ್ರದರ್ಶ‌ನ ಮಾಡುತ್ತಾ ಜನರನ್ನು ಅಚ್ಚರಿಗೊಳಿಸಿದ್ದಾಳೆ. ಫೂಲ್ ದೇಹತಿ ಹಾಡು ಮತ್ತು ನೃತ್ಯದ ಹುರುಪುನ್ನು ಜಾಲ ನೋಡಿದ ನೆಟ್ಟಿಗರು ಮತ್ತು ಡ್ಯಾನ್ಸ್ ಪ್ರಿಯರು ಈ ವೀಡಿಯೋವನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ತಿದೆ.

ಗುರ್ಜರ್ ರಾಸಿಯಾ ಆರ್‌ಜೆ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಈ ಡ್ಯಾನ್ಸ್ ವೀಡಿಯೋವನ್ನು ಶೇರ್ ಮಾಡಲಾಗಿದ್ದು, ಈ ವೀಡಿಯೊ 4 ಮಿಲಿಯನ್ ವೀಕ್ಷಣೆಗಳು ಮತ್ತು 14 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ. ಎಲ್ಲ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಇದು ವೈರಲ್ ಆಗುತ್ತಿದೆ. ಜನರು ಹುಡುಗಿಯ ನೃತ್ಯವನ್ನು ನೋಡು ಹಾಡಿ ಹೊಗಳುತ್ತಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.