ಜಿಮ್ ಟ್ರೇನರ್ ಜೊತೆ ದುನಿಯಾ ವಿಜಿ ಹೊಡೆದಾಟ…ನೋಡಿ ಚಿಂದಿ ವಿಡಿಯೋ.

ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಹಾಗೂ ನಟ ದುನಿಯಾ ವಿಜಿ ಅವರ ಸ್ನೇಹ ಅಥವಾ ದುಷ್ಮನ್ ನಿನ್ನೆ ಮೊನ್ನೆಯದಲ್ಲ. ಹೌದು ಇವರಿಬ್ಬರ ಈ ಸೇಡು ಮತ್ತು ಸ್ನೇಹಕ್ಕೆ 20 ವರ್ಷಗಳ ಇತಿಹಾಸವಿದ್ದು
ಪಾನಿಪೂರಿ ಕಿಟ್ಟಿ ಇಂದು ಕನ್ನಡದ ಸ್ಟಾರ್ ನಟರುಗಳಿಗೆ ಬೇಕಾಗಿರುವ ಬಹುಬೇಡಿಕೆಯ ಜಿಮ್ ಟ್ರೈನರ್ ಆಗಿದ್ದಾರೆ. ಸ್ವತಃ ವಿಜಿಗೂ ಕೂಡ ಪರ್ಸನಲ್ ಟ್ರೈನರ್ ಆಗಿದ್ದರು ಈ ಕಿಟ್ಟಿ. ಆದರೆ ಕಿಟ್ಟಿ ಹಾಗೂ ದುನಿಯಾ ವಿಜಯ್ ನಡುವೆ ಸ್ನೇಹ ಕಳಚಿ ಬಿದ್ದಿದ್ದು ಇದರ ಪರಿಣಾಮ ಈಗ ಹಾವು-ಮುಂಗುಸಿಯಂತೆ ಕಿತ್ತಾಡಲು ಕಾರಣವಾಗಿದೆ.

ಅಂದ್ಹಾಗೆ ದುನಿಯಾ ವಿಜಯ್ ಮತ್ತು ಪಾನಿಪೂರಿ ಕಿಟ್ಟಿಯ ನಡುವೆ ಏನೋ ಜಗಳ ಇದ್ದು ಯಾವುದೋ ವಿಷ್ಯಕ್ಕೆ ಕಿತ್ತಾಡಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯೇ ಕಳೆದು ಕೆಲವು ವರುಷಗಳ ಹಿಂದೆ ನಡೆದಿರುವ ಜಗಳ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ನಾಲ್ಕು ವರ್ಷದ ಹಿಂದೆ ದುನಿಯಾ ವಿಜಿ ಬರೆದುಕೊಂಡಿದ್ದ ಈ ಪದಗಳನ್ನ ನೋಡಿದರೆ ಕಿಟ್ಟಿ ಮತ್ತು ವಿಜಿ ಮಧ್ಯೆ ಇಂತಹದೊಂದು ಜಗಳ ಆಗುತ್ತೆ ಎಂದು ಯಾರೂ ನಿರೀಕ್ಷೆ ಮಾಡಿರಲ್ಲ. ವಿಜಿ ಅಂದು ಬರೆದಿದ್ದ ಪತ್ರವನ್ನ ಓದಿದರೆ ಹೃಯದ ಕರಗುತ್ತೆ. ಅಷ್ಟಕ್ಕೂ ಕಿಟ್ಟಿ ಬಗ್ಗೆ ವಿಜಿ ನಾಲ್ಕು ವರ್ಷದ ಹಿಂದೆ ಏನು ಹೇಳಿದ್ದರು ಗೊತ್ತಾ?

ಅವನು ನಾನು ಇಪ್ಪತ್ತು ವರ್ಷದಿಂದ ಗೊತ್ತಿರೋರು. ಹೌದು ಆರಂಭದಲ್ಲಿ ಅವನು ನನ್ನ ದುಷ್ಮನ್ ಬಾಡಿ ಬಿಲ್ಡಿಂಗ್ ಟೈಮಲ್ಲಿ ನೀನಾ ನಾನಾ ಅಂತ ಜಿದ್ದಿಗೆ ಬಿದ್ದಿದ್ದೂ ಇದೆ. ಆದರೆ ಕಾಲ ಕ್ರಮೇಣ ಗೆಳೆಯರಾದ್ವಿ. ಜೀವದ ಗೆಳೆಯರಾದ್ವಿ. ಇವತ್ತು ಕಿಟ್ಟಿ ಆಗಿರೋ ನನ್ನ ಗೆಳೆಯ ಪಾನಿಪುರಿ ಕಿಟ್ಟಿಯನ್ನು ಕಿತ್ತು ತಿಂತಿದ್ದ ಕಷ್ಟಗಳು ನನ್ನ ಕಣ್ಣೆದುರಿಗೇ ಇದೆ. ಆದರೆ ಇವತ್ತವನು ಬೆಳೆದ ರೀತಿ ನೋಡಿದರೆ ಖುಷಿ ಆಗುತ್ತದೆ.

ಜಿಮ್ ಟ್ರೇನರ್ ಜೊತೆ ದುನಿಯಾ ವಿಜಿ ಹೊಡೆದಾಟ...ನೋಡಿ ಚಿಂದಿ ವಿಡಿಯೋ - Karnataka Times

ಹೆಮ್ಮೆ ಅನ್ಸುತ್ತೆ. ಅವತ್ತವನ ಬಳಿ ಸೈಕಲ್ ಸಹ ಇರಲಿಲ್ಲ. ಇವತ್ತು ಆಡಿ ಕಾರಲ್ಲಿ ಓಡಾಡೋದು ನೋಡಿದರೆ ಅವನು ಪಟ್ಟ ಕಷ್ಟಗಳು ಕಣ್ಣೆದುರಿಗೆ ರಪ್ ಅಂತ ಪಾಸಾಗುತ್ತೆ.! ಅವನೀಗ ಹೊಸ ಜಿಮ್ ಆರಂಭಿಸ್ತಾ ಇದ್ದು ಅದು ಹತ್ತಾಗಬೇಕು ನೂರಾಗಬೇಕು. ನಾನು ಅವನು ಜೀವನದಲ್ಲಿ ಒಂದು ಪಾಠ ಏನು ಗೊತ್ತಾ.

ಕಷ್ಟಪಟ್ರೆ ಜೀವನದಲ್ಲಿ ಸಿಗದೇ ಇರೋದು ಏನೂ ಇಲ್ಲ. ನಮ್ಮ ದೇಹದೊಳಗಿದ್ದ ಬೆವರೆಂಬ ರಾಕ್ಷಸ ಹೊರಗೆ ಹೋದ್ರೆ ಯಶಸ್ಸು ತೆಪ್ಪಗೆ ನಮ್ಮ ಹಿಂದೆ ಬರುತ್ತೆ…ಗೆಳೆಯ ಲವ್ ಯೂ ಕಣೋ. ನಾಲ್ಕು ವರ್ಷದ ಹಿಂದೆ ಪಾನಿಪೂರಿ ಕಿಟ್ಟಿ ವಿದ್ಯಾರಣ್ಯಪುರದಲ್ಲಿ ಮಸಲ್ ಪ್ಲಾನೆಟ್ ಎಂಬ ಜಿಮ್ ಒಪನ್ ಮಾಡಿದ್ದರು. ಈ ವೇಳೆ ಗೆಳೆಯನಿಗೆ ಶುಭಕೋರಿದ್ದ ವಿಜಿ ತಮ್ಮಿಬ್ಬರ ಗೆಳೆತನ ಹಾಗೂ ದುಷ್ಮನ್ ಬಗ್ಗೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು.

ಈಗ ನೋಡಿದರೆ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಈ ಮಧ್ಯೆ ಕಿಟ್ಟಿ ಅವರು ವಿಜಿಯಿಂದ ದೂರವಾಗಿದ್ದರು. ಅಲ್ಲಿಗೆ ಪ್ರಸಾದ್ ಎಂಬ ಟ್ರೈನರ್ ಬಂದಿದ್ದರು. ಈ ಪ್ರಸಾದ್ ಬೇರೆ ಯಾರೂ ಅಲ್ಲ. ಕಿಟ್ಟಿಗೆ ಟ್ರೈನರ್ ಆಗಿದ್ದವರು. ಒಟ್ಟಾರೆ ಇವರಿಬ್ಬರ ಜಗಳ ತಾರಕಕ್ಕೇರಿ ರಸ್ತೆಯಲ್ಲಿ ಹೊಡೆದಾಡಯವುದಕ್ಕೂ ನಿಂತಿದ್ದರು. ಅಲ್ಲದೆ ಕಿಟ್ಟಿ ವಿಜಿಗೆ ಎಂತಹ ಅಸಭ್ಯ ಪದದಲ್ಲಿ ಬೈದಿದ್ದರು ಗೊತ್ತಾ? ಕೆಳಗಿನ ವಿಡಿಯೋ ನೋಡಿ.

You might also like

Comments are closed.