ಉತ್ತರ ಪ್ರದೇಶದ ಉನ್ನಾವೊದಲ್ಲಿ ವರನೊಬ್ಬ ತನ್ನ ಬೋಳುತಲೆ ಮರೆಮಾಚಲು ಕಷ್ಟಪಟ್ಟಿದ್ದಾನೆ. ಮದುವೆ ಸಮಾರಂಭದಲ್ಲಿ ವರನ ಗುಟ್ಟು ರಟ್ಟಾಗಿದೆ. ಮದುವೆ ಸಮಾರಂಭದಲ್ಲಿ ತಲೆಯಿಂದ ನಕಲಿ ಕೂದಲು (ವಿಗ್) ನೆರೆದವರ ಮುಂದೆ ಬಿದ್ದಿದೆ. ತಕ್ಷಣ ಮದುವೆ ಸಮಾರಂಭದಲ್ಲಿ ನೆರೆದಿದ್ದವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಇದನ್ನು ಕಂಡು ವಧು ಕೂಡ ಶಾಕ್ ಆಗಿದ್ದಾಳೆ. ಮದುವೆ ಗಂಡಿಗೆ ತಲೆ ಬೋಳು ಎನ್ನುವ ಗುಟ್ಟು ತಿಳಿಯದ ವಧುವಿಗೆ ತಲೆ ಸುತ್ತಿದಂತಾಗಿದೆ. ಈ ಸುಳ್ಳು ವಧುವಿನ ಮನಸ್ಸಿಗೆ ಗಾಸಿಯನ್ನುಂಟು ಮಾಡಿದ್ದು ಆಕೆ ಮದುವೆಯಾಗಲು ನಿರಾಕರಿಸಿದ್ದಾಳೆ. ವಿಷಯ ಪೊಲೀಸರಿಗೆ ತಲುಪಿದ್ದು ಇತ್ಯಾರ್ಥಕ್ಕಾಗಿ ಪೊಲೀಸರು ಸ್ಥಳಕ್ಕೆ ಬರಬೇಕಾಯಿತು.
ಪ್ರಜ್ಞೆ ತಪ್ಪಿದ ವಧು ಸಫಿಪುರ್ ಕೊತ್ವಾಲಿ ಪ್ರದೇಶದ ಪರಿಯಾರ್ ಗ್ರಾಮದ ನಿವಾಸಿಯೊಬ್ಬರ ಮಗಳ ಮದುವೆಯೊಂದು ಗೊತ್ತಾಗಿತ್ತು. ಇವರನ್ನು ಮದುವೆಯಾಗಲು ಕಾನ್ಪುರ ನಗರದ ಪೊಲೀಸ್ ಠಾಣೆ ವ್ಯಾಪ್ತಿಯ ವಸತಿ ಅಭಿವೃದ್ಧಿ ಕಾಲೋನಿಯ ವರ ಮದುವೆಗೆ ಮೆರವಣಿಗೆ ಮೂಲಕ ಆಗಮಿಸಿದ್ದರು. ಮೆರವಣಿಗೆಯನ್ನು ವಿಜೃಂಭಣೆಯಿಂದ ಸ್ವಾಗತಿಸಲಾಯಿತು. ವರನಿಗೆ ಇದ್ದಕ್ಕಿದ್ದಂತೆ ತಲೆತಿರುಗುವಿಕೆ ಕಾಣಿಸಿಕೊಂಡಿದೆ. ಈ ವೇಳೆ ವರ ತಲೆ ತೂರಿಸಿಕೊಳ್ಳುತ್ತಿದ್ದಂತೆ ತಲೆಗೆ ಹಾಕಿದ್ದ ವಿಗ್ ಥಠನೇ ಕೆಳಗೆ ಬಿದ್ದಿದೆ. ವರನ ಬೋಳು ತಲೆ ನೋಡಿದ ವಧು ಮದುವೇ ಸಮಾರಂಭದಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಾಳೆ. ತಕ್ಷಣ ವಧುವಿನ ಸಹೋದರನು ವಧುವಿನ ಮುಖ ಮತ್ತು ತಲೆಯ ಮೇಲೆ ನೀರನ್ನು ಎರಚಿ ಎಚ್ಚರಗೊಳಿಸಿರುವುದು ಕಂಡು ಬಂದಿದೆ.
ಕುಟುಂಬಸ್ಥರ ನಡುವೆ ಮಾರಾಮಾರಿ ಆ ದೃಶ್ಯವನ್ನು ನೋಡಿದ ಜನ ಮೊದಮೊದಲು ನಕ್ಕರು. ಇದರಿಂದ ವಧುವಿಗೆ ಮುಜುಗರವಾಗಿದೆ. ವಧುವಿನ ಕಡೆಯವರು ವರನು ತಮ್ಮನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ. ವರನ ತಲೆ ಬೋಳು ಎನ್ನುವ ಸತ್ಯ ತಮಗೆ ತಿಳಿದಿರಲಿಲ್ಲ ಎಂದು ದೂರಿದ್ದಾರೆ. ಬಳಿಕ ವಧು ಮತ್ತು ಆಕೆಯ ಕುಟುಂಬದವರು ಮದುವೆಯಾಗಲು ನಿರಾಕರಿಸಿದ್ದಾರೆ. ಇದಾದ ನಂತರ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ಮಾರಾಮಾರಿವರೆಗೂ ಹೋಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಇಷ್ಟೆಲ್ಲಾ ಆದರೂ ವಧು ಮದುವೆಗೆ ಸಿದ್ಧವಾಗಿರಲಿಲ್ಲ. ಈ ಘಟನೆಯ ನಂತರ ವರನ ಕಡೆಯವರು ವಧು ಇಲ್ಲದೆ ಮರಳಿದ್ದಾರೆ.
ವಧುವಿಗೆ ಪರಿಹಾರ ನೀಡಿದ ವರ ಈ ವೇಳೆ ಪರಿಯಾರ್ ಔಟ್‌ಪೋಸ್ಟ್ ಇನ್‌ಚಾರ್ಜ್ ರಾಮ್‌ಜಿತ್ ಯಾದವ್, ವರನ ತಲೆಯ ಮೇಲಿದ್ದ ವಿಗ್ ನೋಡಿ ವಧುವಿನ ಕಡೆಯವರು ಮದುವೆಗೆ ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸರ ಮುಂದೆಯೇ ಎರಡೂ ಕಡೆಯವರ ನಡುವೆ ಲಿಖಿತ ಒಪ್ಪಂದವಾಗಿದ್ದು, ಅದರಲ್ಲಿ ವರನ ಕಡೆಯವರು ವಧುವಿನ ಕಡೆಯವರಿಗೆ 5 ಲಕ್ಷದ 60 ಸಾವಿರ ರೂ. ಪರಿಹಾರ ನೀಡಿದ್ದಾರೆ. ಬಳಿಕ ವಧುವಿನ ಕಡೆಯವರು ಮರಳಿದ್ದಾರೆಂದು ತಿಳಿದು ಬಂದಿದೆ.
ವಿಡಿಯೋ ವೈರಲ್ ಮದುವೆಗಳಲ್ಲಿ ಕ್ಷಣಮಾತ್ರದಲ್ಲಿ ವಿವಾದಗಳು ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರುವುದು ಅಂತರ್ಜಾಲದಲ್ಲಿ ಕಣ್ಣಿಗೆ ರಾಚುತ್ತಿವೆ. ವೈರಲ್ ವಿಡಿಯೋದಲ್ಲಿ ಮದುವೆ ಸಮಾರಂಭದ ವೇಳೆ ವಧು ಹಾಗೂ ವರನ ನಡುವೆ ಜಗಳವಾಗಿದ್ದು ಕಂಡು ಬಂದಿದೆ. ಇದನ್ನು ನಿರೀಕ್ಷಿಸದವರು ಆಶ್ಚರ್ಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ಸೋಷಿಯಲ್ ಮೀಡಿಯಾ ಬಳಕೆದಾರರೂ ತಲೆತ್ತಗ್ಗಿಸಿದ್ದಾರೆ. ಆದರೆ ಈ ವಿಡಿಯೋ ಎಲ್ಲಿಯದ್ದು ಎನ್ನುವ ಬಗ್ಗೆ ತಿಳಿದು ಬಂದಿಲ್ಲ.