ನಟಿ ವಿದ್ಯಾ ಬಾಲನ್ ಸೌಂದಯ೯ ನೋಡಿ ಪಕ್ಕದಲ್ಲಿದ್ದ ಅಂಕಲ್ ಶೇಕ್,44ನೇ ವಯಸ್ಸಿನಲ್ಲೂ ಸಕ್ಕತ್ ಹಾಟ್

ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರಿಗಿಂದು ಜನ್ಮದಿನದ ಸಂಭ್ರಮ. ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಇಂದು ನಟಿ ವಿದ್ಯಾ ಬಾಲನ್ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಜನವರಿ 1, 1979 ರಂದು ಬಾಂಬೆಯಲ್ಲಿ ತಮಿಳು ಬಾಹ್ಮಣ ಕುಟುಂಬದಲ್ಲಿ ಜನಿಸಿದವರು ವಿದ್ಯಾ ಬಾಲನ್. ಮುಂಬೈನಲ್ಲೇ ಬೆಳೆದ ವಿದ್ಯಾ ಬಾಲನ್‌ಗೆ ನಟನೆ ಬಗ್ಗೆ ಅಪಾರ ಆಸಕ್ತಿ ಇತ್ತು. ನಟಿಯಾಗಬೇಕು ಎಂದು ಬಯಸುತ್ತಿದ್ದ ವಿದ್ಯಾ ಬಾಲನ್ 16ನೇ ವಯಸ್ಸಿಗೆ ಏಕ್ತಾ ಕಪೂರ್ ಅವರ ‘ಹಮ್ ಪಾಂಚ್‌’ನಲ್ಲಿ ಅಭಿನಯಿಸಿದರು. ಬೆಂಗಾಲಿಯ ‘ಭಾಲೋ ತೇಕೋ’ ಸಿನಿಮಾದ ಮೂಲಕ ನಾಯಕಿಯಾಗಿ ಮಿಂಚಲು ಆರಂಭಿಸಿದ ವಿದ್ಯಾ ಬಾಲನ್ ‘ಪರಿಣಿತ’ ಚಿತ್ರದ ಮುಖಾಂತರ ಬಾಲಿವುಡ್‌ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ‘ಲಗೇ ರಹೋ ಮುನ್ನಾ ಭಾಯಿ’, ‘ಗುರು’, ‘ಭೂಲ್ ಭುಲಯ್ಯ’, ‘ಪಾ’, ‘ಇಶ್ಕಿಯಾ’, ‘ನೋ ಒನ್ ಕಿಲ್ಡ್ ಜೆಸಿಕಾ’, ‘ಕಹಾನಿ’, ‘ಕಹಾನಿ 2’, ‘ತುಮಾರಿ ಸುಲು’, ‘ಶಕುಂತಲಾ ದೇವಿ’, ‘ಶೇರ್ನಿ’ ಮುಂತಾದ ಹಿಟ್ ಸಿನಿಮಾಗಳಲ್ಲಿ ವಿದ್ಯಾ ಬಾಲನ್ ಅಭಿನಯಿಸಿದ್ದಾರೆ.

ಸದ್ಯ ವಿದ್ಯಾ ಬಾಲನ್ ಕೈಯಲ್ಲಿ ಎರಡ್ಮೂರು ಚಿತ್ರಗಳಿವೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿದ್ಯಾ ಬಾಲನ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.


You might also like

Comments are closed.