ಕಲೆ

ಈ ಹುಡುಗನ ಕಲೆಗೆ ಒಂದು ಲೈಕ್ ಕೊಡಿ..😍ವಿಡಿಯೋ ನೋಡಿ…

CINEMA/ಸಿನಿಮಾ

ತಮ್ಮ ಕುಲದ ವೃತ್ತಿಯನ್ನೇ ಆಧಾರವಾಗಿಟ್ಟುಕೊಂಡು ಚಿತ್ರಕಲೆ ಹಾಗೂ ಮರಳು ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿ ಕೆ.ಗುಬೇಂದಿರನ್‌ ಕಲಾ ಕ್ಷೇತ್ರದಲ್ಲಿ ಹೊರಹೊಮ್ಮುತ್ತಿರುವ ಹೊಸ ಪ್ರತಿಭೆ. ಮೂಲತಃ ತಮಿಳುನಾಡಿನ ಪಾಂಡಿಚೇರಿಯ ವೀರಂಪಟ್ಟಿನಂ ಗ್ರಾಮದವರಾದ ಗುಬೇಂದಿರನ್‌ ಮೀನುಗಾರರ ಕುಟುಂಬಕ್ಕೆ ಸೇರಿದವರಾಗಿದ್ದು, ತಮ್ಮ ಕುಲಕಸುಬು ಕಲೆಗೆ ಪ್ರೇರಣೆ ಎನ್ನುತ್ತಾರೆ.

‘ಸಾಮಾನ್ಯವಾಗಿ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದಾಗ ಎರಡು ಮೂರು ದಿನಗಳ ನಂತರವೇ ಮನೆಗೆ ಬರುತ್ತೇವೆ. ಸೂರ್ಯನ ಹುಟ್ಟು, ಅಸ್ತಂಗತ ಹಾಗೂ ಈ ಎರಡರ ನಡುವಿನ ಸಮುದ್ರ ಜೀವನ ಬಹಳ ಸುಂದರ. ಆ ಸಂದರ್ಭದಲ್ಲಿ ಮೀನುಗಳೂ ವಿಭಿನ್ನ ಬಣ್ಣಗಳನ್ನು ಮೈದಳೆದಿರುವಂತೆ ಗೋಚರಿಸುತ್ತವೆ. ಸಮುದ್ರ, ಮನೆ ಎಲ್ಲಿಯೇ ಇದ್ದರೂ ಮೀನುಗಳ ನಡುವೆಯೇ ನಮ್ಮ ಜೀವನ ಒಗ್ಗಿಹೋಗಿರುವುದರಿಂದ ನಾನು ರಚಿಸುವ ಚಿತ್ರಕಲಾಕೃತಿಗಳಿಗೆ ಮೀನಿನ ಮೇಲ್ಮೈ ಸ್ಪರ್ಶವನ್ನು ನೀಡಿದ್ದೇನೆ’ ಎನ್ನುವ ಗುಬೇಂದಿರನ್‌ ಅವರು ಮರಳು ಕಲಾಕೃತಿಗಳ ರಚನೆಯಲ್ಲಿಯೂ ಎತ್ತಿದ ಕೈ. ಇದಕ್ಕೂ ಸಮುದ್ರ ದಂಡೆಯ ಮೇಲಿನ ಜೀವನವೇ ಕಾರಣ ಎನ್ನುತ್ತಾರೆ.

ಓದು, ಕುಲಕಸುಬಿನ ಜೊತೆಗೆ ಸಮುದ್ರ ದಂಡೆಯ ಮರಳಿನಲ್ಲಿ ಕಲಾಕೃತಿಗಳ ರಚಿಸುವುದನ್ನು ಚಿಕ್ಕಂದಿನಿಂದಲೇ ಕರಗತ ಮಾಡಿಕೊಂಡಿರುವ ಇವರು, 2004 ಡಿಸೆಂಬರ್‌ 26ರಲ್ಲಿ ಸುನಾಮಿ ಉಂಟಾದಾಗ ಸ್ವತಃ ಮನೆ ಮಠ ಕಳೆದುಕೊಂಡಿದ್ದರೂ, ಸಂತ್ರಸ್ತರಿಗೆ ಸಾಂತ್ವನ ಹೇಳಲು ಹೊರಟರು. ಸುನಾಮಿಯ ಅಲೆಗಳ ಅಬ್ಬರ, ಬೀದಿಪಾಲಾದ ಜನಜೀವನ, ಬದುಕು ಕಟ್ಟಿಕೊಳ್ಳುವ ಬಗೆ ಇತ್ಯಾದಿಗಳನ್ನು ವಸ್ತುವಾಗಿ ಉಳ್ಳ ತೈಲವರ್ಣ  ಚಿತ್ರಕಲಾಕೃತಿಗಳನ್ನು ರಚಿಸಿ, ವಿವಿಧೆಡೆಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸುವ  ಮೂಲಕ ಸಂತ್ರಸ್ತರಿಗೆ ನೆರವು ಒದಗಿಸಲು ಸಹಕಾರಿಯಾದರು. ಮೀನುಗಾರರ ಸಹ ಜೀವನವನ್ನು ಪರಿಚಯಿಸುವ ಶಿಲ್ಪ ಕಲಾಕೃತಿಯನ್ನು ಗುಬೇಂದಿರನ್‌ ತಮ್ಮ ಊರಿನ ಸಮುದ್ರ ದಂಡೆಯಲ್ಲಿ ರಚಿಸಿದ್ದು, ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಾರೆ ಅವರ ಗೆಳೆಯ ಬಾಲಾಜಿ.

ಕಳೆದ ಹನ್ನೆರಡು ವರ್ಷಗಳಿಂದ  ಈ ಕಲೆಯಲ್ಲಿ ತೊಡಗಿಸಿಕೊಂಡಿರುವ ಗುಬೇಂದಿರನ್‌ ಅವರು ಆರಂಭದಲ್ಲಿ ಕುಟುಂಬ ಹಾಗೂ ಗ್ರಾಮಸ್ಥರಿಂದ ಭಾರೀ ವಿರೋಧವನ್ನು ಎದುರಿಸಬೇಕಾಯಿತು. ‘ದೃಶ್ಯಕಲೆಯಲ್ಲಿ ಸ್ನಾತಕ ಪದವಿಗೆ  ಸೇರಿಕೊಂಡಾಗ ಅದರಿಂದೇನು ಪ್ರಯೋಜನ ದುಡಿಮೆಗೆ ಸರಿಯಾದ ದಾರಿ ನೋಡಿಕೋ ಎಂದಿದ್ದರಂತೆ. ಯಾರೇನೆ ಹೇಳಲಿ ತಾಳ್ಮೆಯಿಂದಲೇ ನನ್ನ ಕೆಲಸ ಮುಂದುವರಿಸಿದೆ.

ವಿದ್ಯಾರ್ಥಿಯಾಗಿದ್ದಾಗಲೇ ಪ್ರಶಸ್ತಿಗಳೂ ಬಂದವು. ಇದರಿಂದ ನನ್ನ ಉತ್ಸಾಹ ಇಮ್ಮಡಿಯಾಯಿತು. ಕಲೆಯ ಮೂಲಕ ಮತ್ತೊಬ್ಬರಿಗೆ ಸಂತೋಷ ನೀಡುವುದು ನನ್ನ ಗುರಿ ಎಂದು ತೀರ್ಮಾನಿಸಿದೆ. ಕಲಾಕೃತಿಗಳ ಮಾರಾಟದಿಂದ ಬಂದ ಹಣ ಹಾಗೂ ಅರೆಕಾಲಿಕವಾಗಿ ಕೆಲಸ ಮಾಡಿಕೊಂಡು ದೃಶ್ಯಕಲೆಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದೆ. ಊರಿಗೆ ಹೋದಾಗ ಅಲ್ಲಿನ ಮಕ್ಕಳು ಸ್ನೇಹಿತರಿಗೆ ಚಿತ್ರಕಲೆ ಮತ್ತು ಮರಳು ಕಲಾಕೃತಿಗಳ ರಚನೆ ಬಗ್ಗೆ ಹೇಳಿಕೊಡುತ್ತೇನೆ. ವಿಧೇಶಿಯರು ಮನೆಗೆ ಬಂದು ಚಿತ್ರಕಲಾಕೃತಿಗಳನ್ನು ಕೊಂಡೊಯ್ಯುವುದರಿಂದ ಕುಟುಂಬದವರಿಗೂ ಕಲೆಯ ಮಹತ್ವದ ಬಗ್ಗೆ ಅರಿವು ಮೂಡಿದೆ. ಗ್ರಾಮಸ್ಥರಿಂದಲೂ ಗೌರವ ಸಿಕ್ಕಿದೆ. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವುದು ನನ್ನ ಗುರಿ’ ಎನ್ನುತ್ತಾರೆ ಗುಬೇಂದಿರನ್‌.

ಇದನ್ನೂ ಓದಿ >>>  ಶ್ವೇತಾ ಚೆಂಗಪ್ಪ ಸೌಂದರ್ಯಕ್ಕೆ ಸಂಪೂರ್ಣವಾಗಿ ಮನಸೋತ ನೆಟ್ಟಿಗರು! ಸೀರೆಯಲ್ಲಿ ಸೌಂದರ್ಯ ದೇವತೆಯಂತೆ ಕಂಗೊಳಿಸಿದ ನಟಿ ನೋಡಿ ವಿಡಿಯೋ!!


ನಾವು ಮೀನುಗಾರರಾದರೂ ಮೀನೇ ನನ್ನನ್ನು ಕಲೆಯಲ್ಲಿ ಹಿಡಿದಿಟ್ಟಿದೆ. ಪ್ರೀತಿಸುವ ಹುಡುಗ ಹುಡುಗಿಯರೂ ಮೀನನ್ನೇ ಉದಾಹರಣೆಯಾಗಿಟ್ಟುಕೊಂಡು ಮಾತನಾಡುವುದು ಅಲ್ಲಿ ಸಹಜವಾಗಿ ಹೋಗಿದೆ ಎನ್ನುವ ಗುಬೇಂದಿರನ್‌, ತೈಲವರ್ಣ ಮಾದರಿ ಬಳಸಿ 30ಕ್ಕೂ ಹೆಚ್ಚು ಚಿತ್ರಕಲಾಕೃತಿಗಳನ್ನು ಮೀನುಗಾರರ ಬದುಕಿಗೆ ಸಂಬಂಧಿಸಿದಂತೆಯೇ ರಚಿಸಿದ್ದಾರೆ. ಅಲ್ಲದೆ ಮಾರಾಟಗಾರರು, ಕೆಲಸಗಾರರು, ಸಮುದ್ರದ ರಾಣಿ ಮುಂತಾದ ವಿಚಾರಗಳಲ್ಲಿನ ತಮ್ಮ ಕಲ್ಪನೆಯನ್ನು ಮರಳಿನ ಕಲಾಕೃತಿಯಲ್ಲಿ ಮೂಡಿಸಿದ್ದಾರೆ.

ಇಷ್ಟೇ ಅಲ್ಲದೆ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ತಮ್ಮ 24 ಶಿಕ್ಷಕರ ಶಿಲ್ಪಗಳನ್ನು, ಎಐಡಿಎಸ್‌ಒ ಸಂಘಟನೆ ಮಲ್ಲೆಶ್ವರಂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೆಹಲಿ ಅತ್ಯಾಚಾರ ಪ್ರಕರಣಕ್ಕೆ ಪ್ರತಿಭಟನಾರ್ಥವಾಗಿ ಮರಳಿನಲ್ಲಿ ಕಲಾಕೃತಿ ರಚಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...