ವಿಡಿಯೋಗಳನ್ನು ಮಾಡಲು ಹೋಗಿ ಕೆಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇನ್ನು ಮಹಿಳಾ ಪೇದೆಯೊಬ್ಬರು ಗುಂಗಿಗೆ ಬಿದ್ದು ಪೊಲೀಸ್…
Lady police constable in Mahesana district of North Gujarat faces disciplinary action after her TikTok video shot in police station goes viral pic.twitter.com/7NWXpXCh8r
— DeshGujarat (@DeshGujarat) July 24, 2019
ಮಹಿಳಾ ಪೊಲೀಸ್ ಪೇದೆಯೊಬ್ಬರು ಸಮವಸ್ತ್ರ ಧರಿಸಿ, ಕೈಯಲ್ಲಿ ರಿವಾಲ್ವರ್ ಹಿಡಿದು ಹಿಂದಿ ಸಿನಿಮಾ ಡೈಲಾಗ್ ಹೊಡೆದಿರುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದು, ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಆಗ್ರಾದಲ್ಲಿನ ಎಂಎಂ ಗೇಟ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಪ್ರಿಯಾಂಕಾ ಮಿಶ್ರಾ ಈ ರೀತಿಯಾಗಿ ನಡೆದುಕೊಂಡಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿವಾದಕ್ಕೆ ಕಾರಣವಾಗಿದ್ದಾರೆ. ಈಗಾಗಲೇ ಪ್ರಕರಣವನ್ನ ವಿಚಾರಣೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮುನಿರಾಜ್ ಮಾಹಿತಿ ನೀಡಿದ್ದಾರೆ.
ವಿಡಿಯೋದಲ್ಲಿ ಪೊಲೀಸ್ ಪೇದೆ ಹಿಂದಿ ಸಿನಿಮಾ ರಂಗ್ಭಾಜಿ ಚಿತ್ರದ ಡೈಲಾಗ್ ಹೊಡೆದಿದ್ದಾರೆ. ಈ ವೇಳೆ, ಕೈಯಲ್ಲಿ ಹಿಡಿದುಕೊಂಡಿದ್ದ ರಿವಾಲ್ವರ್ ಸಹ ತೋರಿಸಿದ್ದಾರೆ. ಸುಮಾರು 21 ಸೆಕೆಂಡ್ಗಳ ವಿಡಿಯೋ ಇದಾಗಿದೆ.ಕಳೆದ 2019ರಲ್ಲಿ ಗುಜರಾತ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಕಾನ್ಸ್ಟೇಬಲ್ಯೊಬ್ಬರು ಡ್ಯೂಟಿಯಲ್ಲಿದ್ದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲೇ ಡ್ಯಾನ್ಸ್ ಮಾಡಿರುವ ವಿಡಿಯೋ ಟಿಕ್ಟಾಕ್ನಲ್ಲಿ ಶೇರ್ ಮಾಡಿ ಅಮಾನತುಗೊಂಡಿದ್ದರು.
UP woman constable attached to police lines for shooting a video flaunting revolver in uniform. #Agra @agrapolice @Uppolice pic.twitter.com/JJ9mmPfXci
— Anuja Jaiswal (@AnujaJaiswalTOI) August 25, 2021