ಅಂತು ಹುಡುಕಿಕೊಂಡು ಬಂತು ಹುಚ್ಚವೆಂಕಟ್ ಗೆ ಅದೃಷ್ಟದ ಸುರಿಮಳೆ,ಬದಲಾಗಿ ಎಂದ ಫ್ಯಾನ್ಸ್ !!

CINEMA/ಸಿನಿಮಾ

ಸ್ನೇಹಿತರೆ, ಕನ್ನಡ ಬಿಗ್ ಬಾಸ್ ಸೀಸನ್ 3 ಎಂದ ತಕ್ಷಣ ನಮಗೆ ಥಟ್ಟಂತ ನೆನಪಿಗೆ ಬರುವುದು ಅದರಲ್ಲಿ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡು ಕೆಲವೇ ಕೆಲವು ವಾರಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದವರು. ನಂತರ ಬಿಗ್ ಬಾಸ್ ಮನೆಯಲ್ಲಿ ಜಗಳ ಮಾಡಿಕೊಂಡು ಹೊರನಡೆದರು. ಆನಂತರ ಇವರು ಕೆಲವು ವೈಯಕ್ತಿಕ ಕಾರಣಗಳಿಂದ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ದೂರವಾದರೂ. ನೀನು ಹುಚ್ಚ ವೆಂಕಟ್ ಅವರು ನಟ-ನಿರ್ಮಾಪಕ, ಗಾಯಕ ಹಾಗೂ ನಿರ್ದೇಶಕನಾಗಿ ಸಹ ಕೆಲಸ ಮಾಡಿದ್ದಾರೆ.

ಆದರೆ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದು ಮಾತ್ರ ಬಿಗ್ ಬಾಸ್ ಶೋನಲ್ಲಿ. ಇವರು ತಾವೇ ನಿರ್ದೇಶನ ಮಾಡಿದ ಸ್ವತಂತ್ರಪಾಳ್ಯ ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದಾರೆ. ನಂತರ ಇವರು ಪರಪಂಚ, ಮಾಯಾಬಜಾರ್, ಓಪ್ರೇಮವೇ ಸಿನಿಮಾಗಳಲ್ಲಿ ನಟಿಸಿ ತಕ್ಕಮಟ್ಟಿಗೆ ಜನಪ್ರಿಯರಾಗಿದ್ದರು. ಈಗ ಹುಚ್ಚ ವೆಂಕಟ್ ಅವರು ಖಾಸಗಿ ಕನ್ನಡ ಚಾನೆಲ್ ನಲ್ಲಿ ಪ್ರಾರಂಭವಾಗುತ್ತಿರುವ ಹೊಸ ಶೋ ಲೈಫ್ ಓಕೆ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಬಳಿ ಈ ಶೋನ ಬಗ್ಗೆ ಕೇಳಿದರೆ ಜನರಿಗೆ ತಪ್ಪು ನಡೆದು ಹೋಗುತ್ತಿರುವ ದಾರಿ ಸರಿ ಅಥವಾ ತಪ್ಪು ಎಂಬುದು ತಿಳಿದಿಲ್ಲ.

ನಾನು ಅವರಿಗೆ ಈ ಶೋನಾ ಮೂಲಕ ಸರಿಯಾದ ದಾರಿ ಯಾವುದು ಎಂಬುದನ್ನು ತಿಳಿಸಲಿದ್ದೇನೆ. ಎಂದು ಹುಚ್ಚ ವೆಂಕಟ್ ಅವರು ಹೇಳುತ್ತಾರೆ. ಏನೋ ಕಾರಣಾಂತರಗಳಿಂದ ಆ ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದ ಹುಚ್ಚ ವೆಂಕಟ್ ಅವರಿಗೆ ಇದೊಂದು ಸುವರ್ಣ ಅವಕಾಶ ಎನ್ನಲಾಗುತ್ತಿದೆ. ಈ ಶೋನ ಮೂಲಕ ಕಿರುತೆರೆಗೆ ನಿರೂಪಕರಾಗಿ ಬರುತ್ತಿರುವ ವಿಷಯವನ್ನು ತಿಳಿದ ಹುಚ್ಚ ವೆಂಕಟ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಪರದೆಯ ಮೇಲೆ ನೋಡಬಹುದು ಎಂಬ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.