Vastu for Home: ಓಡುವ ಕುದುರೆಯ ಫೋಟೋವನ್ನು ಮನೆಯಲ್ಲಿ ಯಾಕೆ ಹಾಕುತ್ತಾರೆ ಮತ್ತು ಅದರ ಲಾಭಗಳೇನು ಯಾವ ಯಾವ ರೀತಿಯ ಫೋಟೋವನ್ನು ಹಾಕಬಹುದು ಅದು ಅಲಂಕಾರಿಕಾಗಿ ಹಾಕುವ ವಸ್ತುವಲ್ಲ.
Home Vastu tips in Kannada
ಓಡುವ ಕುದುರೆಯ ಫೋಟೋ ಮನೆಯಲ್ಲಿ ಯಾಕೆ ಹಾಕುತ್ತಾರೆಂದರೆ ಓಡುವ ಕುದುರೆಯು ಸ್ಥಿರತೆ ಮತ್ತು ವೇಗದ ಸಂಕೇತವಾಗುತ್ತದೆ. ಏಳು ಕುದುರೆ ಇರುವ ಫೋಟೋಗಳನ್ನು ಹಾಕಬೇಕು, 9 ಕುದುರೆ ಇರುವ ಫೋಟೋವನ್ನು ಯಾವ ಕಾರಣಕ್ಕೂ ತೆಗೆದುಕೊಳ್ಳಬೇಡಿ. 7 ಅನ್ನುವುದು ಅದೃಷ್ಟ ಸಂಖ್ಯೆ ಎನ್ನುತ್ತಾರೆ ಏಕೆಂದರೆ ಕಾಮನಬಿಲ್ಲು ಏಳು ಬಣ್ಣಗಳನ್ನು ಹೊಂದಿರುತ್ತದೆ ಅದೇ ರೀತಿ ಸಪ್ತ ಋಷಿಗಳು, ಸಪ್ತಪದಿ ಇವೆಲ್ಲ 7 ಆಗಿರುವುದರಿಂದ 7 ತುಂಬಾ ಅದೃಷ್ಟ ಎಂದು ಹೇಳಲಾಗುತ್ತದೆ. ಸೂರ್ಯದೇವನ ಫೋಟೋವನ್ನು ನೋಡಿರುತ್ತೀರಿ ಅದರಲ್ಲೂ ಸಹ ಸೂರ್ಯದೇವ 7 ಕುದುರೆ ರಥದಲ್ಲಿ ಬರುವ ಫೋಟೋವನ್ನು ನೋಡಿರುತ್ತೀರಿ.
ಕುದುರೆ ಫೋಟೋ ಇಟ್ಟುಕೊಳ್ಳುವುದರಿಂದ ಕೆಲವರ ಮನೆಯಲ್ಲಿ ಜಗಳ ,ಗಲಾಟೆ , ಸಮಸ್ಯೆಗಳು ದೂರವಾಗುತ್ತದೆ ಹಾಗೂ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಬಿಳಿ ಬಣ್ಣದ ಓಡುವ ಕುದುರೆಯನ್ನು ಇಟ್ಟುಕೊಳ್ಳುವುದರಿಂದ ಒಳ್ಳೆಯದಾಗುತ್ತದೆ. ಕಪ್ಪು ಬಣ್ಣದ ಕುದುರೆಯನ್ನು ಮನೆಯಲ್ಲಿ ಇಡಬಾರದು ಪೂರ್ವ ದಿಕ್ಕಿನಲ್ಲಿ ಫೋಟೋ ಇಡಬೇಕು ಇದರಿಂದ ಸಂಪತ್ತು ಸಮೃದ್ಧಿಯಾಗುತ್ತದೆ. ಸಂಪತ್ತನ್ನು ಹೊಂದಿರುವಂತಹ ವ್ಯಕ್ತಿಯ ಮನೆಯಾದರೆ ನಮಗೆ ಒಳ್ಳೆ ಹೆಸರು ಬೇಕು ಎನ್ನುವರಾದರೆ ದಕ್ಷಿಣ ದಿಕ್ಕಿನಲ್ಲಿ ಫೋಟೋವನ್ನು ಇಡಬಹುದು.

ಒಂದು ಕುದುರೆಯ ಫೋಟೋವನ್ನು ಯಾವತ್ತು ಮನೆಯಲ್ಲಿ ಇಟ್ಟುಕೊಳ್ಳಬೇಡಿ ಇಟ್ಟುಕೊಳ್ಳುವುದರಿಂದ ಬರುವಂತಹ ಸಂಪತ್ತು ಕೂಡ ದೂರವಾಗುತ್ತದೆ. ಸ್ಪಷ್ಟವಾಗಿರುವಂತಹ ಫೋಟೋಗಳನ್ನೇ ಹಾಕಿ ಮತ್ತು ಒಂದೇ ದಿಕ್ಕಿನಲ್ಲಿ ಓಡುವಂತಹ ಕುದುರೆ ಆಗಿರಬೇಕು. ಮಲಗುವ ಕೋಣೆ, ಓದುವ ಕೋಣೆ, ದೇವರ ಕೋಣೆಯಲ್ಲಿ ಕುದುರೆ ಫೋಟೋವನ್ನು ಇಡಬಾರದು. ದಕ್ಷಿಣ ಮತ್ತು ಪೂರ್ವ ದಿಕ್ಕಿನಲ್ಲಿ ಇಡಬಹುದು ವ್ಯವಹಾರ ಮಾಡುವಂತಹ ಜಾಗದಲ್ಲಿ ಕಂದು ಬಣ್ಣದ ಫೋಟೋ ಇಟ್ಟರೆ ತುಂಬಾ ಒಳ್ಳೆಯದು.