vashista

ನಟ ವಸಿಷ್ಠಸಿಂಹ ಹಾಗೂ ಹರಿಪ್ರಿಯಾ ಮದುವೆ ನಿಜವೇ,ಇಲ್ಲಿದೆ ವರದಿ

CINEMA/ಸಿನಿಮಾ Entertainment/ಮನರಂಜನೆ

Actor vasishta simha and haripriya marriage: ಸದ್ಯ ಇದೀಗ ಕನ್ನಡ ಚಿತ್ರರಂಗದ ಮತ್ತೊಂದು ಮದುವೆ ಸಂಭ್ರಮಕ್ಕೆ ಸಂಜ್ಜಾಗಿದ್ದು ಸದ್ಯ ಈಗಾಗಲೆರ ನಟಿ ಅದಿತಿ ಪ್ರಭುದೇವ(Aditi Prabhudeva) ಹಸೆಮಣೆ ಏರುತ್ತಿದ್ದಾರೆ. ಹೌದು ನವೆಂಬರ್ 27ರಂದು ನಟಿ ಅದಿತಿ ಪ್ರಭುದೇವ ರವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಇದರ ಬೆನ್ನಲ್ಲೇ ಈಗ ಹರಿಪ್ರಿಯಾ ಮದುವೆ ವಿಚಾರ ಕೂಡ ವೈರಲ್ ಆಗಿದೆ.

ಹೌದು ಖ್ಯಾತ ನಟಿ ಹರಿಪ್ರಿಯಾ ಹಸೆಮಣೆ ಏರಲು ಸಜ್ಜಾಗಿದ್ದು ಹರಿಪ್ರಿಯಾ ಮದುವೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತಿತ್ತು. ಹೌದು ಹರಿಪ್ರಿಯಾ ಮದುವೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಹುಡುಗ ಯಾರು ಯಾವಾಗ ಎನ್ನುವ ಚರ್ಚೆ ಕೂಡ ಜೋರಾಗಿತ್ತು. ಸದ್ಯ ಈ ಬಗ್ಗೆ ಮಾಹಿತಿ ರಿವೀಲ್ ಆಗಿದ್ದು ಆಪ್ತ ಮೂಲಗಳು ಹೇಳಿರುವ ಪ್ರಕಾರ ಹರಿಪ್ರಿಯಾ ಮದುವೆಗೆ ಸಜ್ಜಾಗಿದ್ದು ಹುಡುಗ ಕೂಡ ಫಿಕ್ಸ್ ಆಗಿದ್ದಾರಂತೆ.

ಇತ್ತೀಚಿಗಷ್ಟೆ ಮೂಗು ಚುಚ್ಚಿಕೊಂಡಿದ್ದ ಹರಿಪ್ರಿಯಾ ವಿಡಿಯೋ ವೈರಲ್ ಆಗಿದ್ದು ಆಗಲೇ ಹರಿಪ್ರಿಯಾ ಹಸೆಮಣೆ ಏರುವುದು ಕನ್ಫರ್ಮ್ ಎನ್ನುವ ಮಾತು ಕೂಡ ಕೇಳಿಬಂದಿತ್ತು. ಇದೀಗ ಆ ಸುದ್ದಿ ನಿಜ ಎನ್ನುತ್ತಿವೆ ಮೂಲಗಳು.ಬಹುಭಾಷಾ ನಟಿ ಹರಿಪ್ರಿಯಾ ರವತು ಮದುವೆಯಾಗುತ್ತಿರುವ ಹುಡುಗ ಮತ್ಯಾರು ಅಲ್ಲ ಕನ್ನಡ ನಟ ವಸಿಷ್ಠ ಸಿಂಹ.

ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ನಟಿ ಹರಿಪ್ರಿಯಾ!

ಹೌದು ಸ್ಯಾಂಡಲ್ ವುಡ್‌ನ(Sandalwood) ಖ್ಯಾತ ನಟ ಕಂಚಿನ ಕಂಠದ ಸುಂದರ ವಸಿಷ್ಠ ಸಿಂಹಾ ಜೊತೆ ಹರಿಪ್ರಿಯಾ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿಬಂದಿದ್ದು ವಸಿಷ್ಠ ಹಾಗೂ ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್. ಇನ್ನು ಇಬ್ಬರೂ ತುಂಬಾ ಆಪ್ತರಾಗಿದ್ದು ಆಗಾಗ ಡಾನ್ಸ್ ವಿಡಿಯೋಗಳನ್ನು ಕೂಡ ಶೇರ್ ಮಾಡುತ್ತಿದ್ದರು. ಅಲ್ಲದೇ ಪಾರ್ಟ್‌ನರ್ ಅಂತರೆ ಇಬ್ಬರೂ ಕರೆಯುತ್ತಾರಂತೆ.

ಆದರೆ ಎಲ್ಲಿಯೂ ಕೂಡ ಪ್ರೀತಿಯ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದೀಗ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದ್ದು ಅಂದಹಾಗೆ ಈ ವಿಚಾರ ರಿವೀಲ್ ಆಗಿದ್ದು ಹರಿಪ್ರಿಯಾ ಅವರ ಮೂಗು ಚುಚ್ಚವ ವೇಳೆ ಎಂಬುದು ವಿಶೇಷ.ಹೌದು ಇತ್ತೀಚಿಗಷ್ಟೆ ಪರಿಪ್ರಿಯಾ ರವರು ಮೂಗು ಚುಚ್ಚಿಕೊಂಚಿದ್ದರು. ವಿಡಿಯೋವನ್ನು ಶೇರ್ ಮಾಡಿದ್ದರು. ಆ ಸಂಧರ್ಭದಲ್ಲಿ ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಕೂಡ ಜೊತೆಯಲ್ಲಿದ್ದು ಮೂಗು ಎಲ್ಲಿ ಚುಚ್ಚಬೇಕೆಂದು ಗುರುತು ಮಾಡಿದ್ದೆ ವಸಿಷ್ಠಿ.

ಮೂಗು ಚುಚ್ಚಿದ ಬಳಿಕ ವಸಿಷ್ಠ ಹರಿಪ್ರಿಯಗೆ ಮುತ್ತು ನೀಡಿ ಸಮಾಧಾನ ಮಾಡಿದ್ದು ಈ ವಿಡಿಯೋ ವೈರಲ್ ಆಗಿತ್ತು. ಸ್ವತಃ ಹರಿಪ್ರಿಯಾ ಅವರೇ ವಿಡಿಯೋ ಹಂಚಿಕೊಂಡಿದ್ದು ಆದರೆ ವಿಡಿಯೋದಲ್ಲಿ ವಸಿಷ್ಠ ಮುಖವನ್ನು ರಿವೀಲ್ ಮಾಡಿರಲಿಲ್ಲ. ಸದ್ಯ ಇದೀಗ ಹರಿಪ್ರಿಯಾ ಜೊತೆ ಇದ್ದಿದ್ದು ವಸಿಷ್ಠ ಸಿಂಹ ಎನ್ನುವುದು ಗೊತ್ತಾಗಿದೆ.

ಪ್ರೇಮ್ ಕಹಾನಿ: ಹರಿಪ್ರಿಯಾಗೆ ಮೂಗು ಚುಚ್ಚಿಸಿದ್ದೇ ನಟ ವಸಿಷ್ಠ ಸಿಂಹ – Public TV

ಇನ್ನು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇನ್ನೊಂದು ತಿಂಗಳಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಎಲ್ಲಾ ತಯಾರಿ ಕೂಡ ಮಾಡಿದ್ದಾರ ಎನ್ನಲಾಗಿದ್ದು ಅಲ್ಲದೇ ನಿಶ್ಚಿತಾರ್ಥದ ಬಳಿಕ ಅಂದರೆ ಎರಡು ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೂಡ ಕೇಳಿಬಂದಿದೆ. ಆದರೆ ಈ ಬಗ್ಗೆ ಹರಿಪ್ರಿಯಾ ಕಡೆಯಿಂದ ಅಥವಾ ವಸಿಷ್ಠ ಸಿಂಹ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇಬ್ಬರು ಪ್ರೀತಿಯಲ್ಲಿದ್ದಾರೆ ಮದುವೆಯಾಗುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದು ಜೋಡಿ ಸೂಪರ್ ಆಗಿದೆ ಎಂದು ಕೂಡ ಕಾಮೆಂಟ್ ಮಾಡುತ್ತಿದ್ದಾರೆ.

 

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...