ಆಟವಾಡುವ ವಯಸ್ಸಿನಲ್ಲಿ ಈ ಪುಟಾಣಿ ವಂಶಿಕಾ,ಕಾರ್ಯಕ್ರಮ ವಿನ್ ಆಗುವ ಮೂಲಕ ಗಳಿಸಿದ್ದು ಅದೆಷ್ಟು ಲಕ್ಷ ಹಣ ಗೊತ್ತಾ? ಅಬ್ಬಬ್ಬಾ ನಿಜವಾಗ್ಲೂ ಗ್ರೇಟ್ ಕಣ್ರೀ ನೋಡಿ!!

ಸ್ನೇಹಿತರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಶೋವನ್ನು ಕರ್ನಾಟಕದ ಮೂಲೆಮೂಲೆಯ ಜನರು ಬಹಳ ಇಷ್ಟಪಟ್ಟು ಪ್ರೀತಿಯಿಂದ ನೋಡುತ್ತಿದ್ದರು. ಹೌದು ಮಕ್ಕಳ ತರ್ಲೆ ತುಂಟಾಟ, ಮುದ್ದಾದ ಮಾತುಗಳು ಯಾರಿಗೆ ತಾನೇ ಇಷ್ಟವಿಲ್ಲ ಸಾಧ್ಯವಿಲ್ಲ ಹೇಳಿ? ಅದರಲ್ಲೂ ತೀರ್ಪುಗಾರರಾಗಿ ಮತ್ತು ನಿರ್ಮಾಪಕರಾಗಿ ಡಬಲ್ ಧಮಕೆದಾರ್ ಜವಾಬ್ದಾರಿಯನ್ನು ಹೊತ್ತ ಸುಜನ್ ಲೋಕೇಶ್ ಅವರ ಕೌಂಟರ್ಗಳಿಗೆ ನಗದ ಪ್ರೇಕ್ಷಕರೇ ಇಲ್ಲ.

ಜೊತೆಗೆ ನಮ್ಮ ಚಂದನವನದ ಕ್ಯೂಟ್ ಚೆಲುವೆಯರಾದ ತಾರಮ್ಮ ಮತ್ತು ಅನು ಪ್ರಭಾಕರ್ ಮಕ್ಕಳಿಗೆ ತಮ್ಮದೇ ಆದ ಶೈಲಿಯಲ್ಲಿ ತೀರ್ಪು ನೀಡುವುದು ಹಾಗೂ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಟಿಪ್ಸ್ಗಳು ಎಲ್ಲಾ ತಾಯಂದಿರ ಮನಸ್ಸುಗಳಿಗೆ ನಾಟುವಂತದಾಗಿತ್ತು. ಹೀಗೆ ಕಾರ್ಯಕ್ರಮಕ್ಕೆ ಆಗಮಿಸಿದ ಮೊದಲ ದಿನದಿಂದ ಹಿಡಿದು ಕೊನೆಯ ಕ್ಷಣದವರೆಗೂ ಪ್ರೇಕ್ಷಕ ಪ್ರಭುಗಳನ್ನು ರಂಜಿಸುತ್ತಾ ಬಂದ ಮಾಸ್ಟರ್ ಆನಂದ್ ಅವರ ಮಗಳು ವಂಶಿಕ ಅಂಜಲಿ ಕಶ್ಯಪ್ಪ ಕಾರ್ಯಕ್ರಮದ ಟ್ರೋಫಿಯನ್ನು ಗೆದ್ದಿದ್ದಾರೆ.
ಯಶಸ್ವಿನಿ ಮತ್ತು ವಂಶಿಕ ಜೋಡಿಗೆ ಸಿಕ್ಕ ಬಹುಮಾನದ ಹಣವೆಷ್ಟು ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ತಮ್ಮ ತಂದೆಯಂತೆಯೇ ವೇದಿಕೆಯ ಮೇಲೆ ಕೊಂಚವೂ ಭಯ ಇಲ್ಲದೆ ಬಹಳ ಕಾನ್ಫಿಡೆಂಟ್ನಿಂದ ಹೇಳಿಕೊಟ್ಟದ್ದನ್ನು ಅತ್ಯದ್ಭುತವಾಗಿ ಪ್ರೆಸೆಂಟ್ ಮಾಡುವ ಕಲೆ ವಂಶಿಕ ಅವರಿಗೆ ಬ್ಲ’ಡ್ನಲ್ಲೆ ಬಂದುಬಿಟ್ಟಿದೆ ಎಂದರೆ ತಪ್ಪಾಗಲಾರದು.

ಆರಂಭಿಕದಿನದಿಂದಲೂ ತುಂಟಾಟ ಮತ್ತು ತರ್ಲೆಯಿಂದಾಗಿ ಕನ್ನಡಿಗರ ಹೃದಯ ಕದ್ದ ಅಂತಹ ವಂಶಿಕ ಅವರ ಹೆಸರಲ್ಲಿ ಅದೆಷ್ಟೋ ಪ್ಯಾಕೇಜ್ಗಳು ಕ್ರಿಯೇಟ್ ಆಗಿದೆ. ಕರ್ನಾಟಕ ಮಾತ್ರವಲ್ಲದೆ ದೇಶದ ಮೂಲೆ ಮೂಲೆಯಿಂದಲೂ ವಂಚಿಕಾರ ಅದ್ಭುತ ಅಭಿನಯವನ್ನು ಇಷ್ಟಪಡುವ ಜನರಿದ್ದಾರೆ. ಇನ್ನು ಮಗಳಿಗೆ ತಕ್ಕ ಸಾಥ್ ನೀಡುವ ತಾಯಿ ಯಶಸ್ವಿನಿ ಕೂಡ ಮಗಳ ಗೆಲುವಿನಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದಾರೆ ಎಂದರೆ ತಪ್ಪಾಗಲಾರದು.

ಹೀಗೆ ನಮ್ಮಮ್ಮ ಸೂಪರ್ಸ್ಟಾರ್ ಕಾರ್ಯಕ್ರಮ ಗೆದ್ದಂತಹ ಯಶಸ್ವಿನಿ ಮತ್ತು ವಂಶಿಕ ಜೋಡಿಗೆ ತೀರ್ಪುಗಾರರಾದ ಅನುಪ್ರಭಾಕರ್, ತಾರಮ್ಮ ಮತ್ತು ಸೃಜನ್ ಲೋಕೇಶ್ ಬರೋಬ್ಬರಿ 15 ಲಕ್ಷ ಚಕ್ ನೀಡುವ ಮೂಲಕ ಶ್ಲಾಘಿಸಿದರು. ಇನ್ನು ರನ್ನರ್-ಅಪ್ ಆದ ಆರ್ಯ ಮತ್ತು ಪುನೀತರವರಿಗೆ ಒಂದು ಲಕ್ಷ ಹಣ ದೊರೆತಿದೆ. ಅದರಂತೆ ಮೂರನೇ ವಿನ್ನರ್ ಆಗಿ ವಿಂಧ್ಯ ಮತ್ತು ರೋಹಿತ್ ಕಾಣಿಸಿಕೊಂಡರೆ.

ನಾಲ್ಕನೆಯ ಸ್ಥಾನದಲ್ಲಿ ಸುಪ್ರೀತಾ ಮತ್ತು ಇಬ್ಬನಿ ಹಾಗೂ ಐದನೇ ಸ್ಥಾನವನ್ನು ಗ್ರಂಥ್ ಮತ್ತು ಜಾನವಿ ಹಾಗೂ ಆರನೇ ಸ್ಥಾನವನ್ನು ಅದ್ವಿಕ್ ಮತ್ತು ನಂದಿನಿ ಪಡೆದುಕೊಂಡಿದ್ದಾರೆ. ಈ ಮೇಲ್ಕಂಡ ಸ್ಪರ್ಧೆಗಳಲ್ಲಿ ನಿಮ್ಮಿಷ್ಟದ ಸ್ಪರ್ಧಿ ಯಾರು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

You might also like

Comments are closed.