
Vanshika Master Anand: ಮಾಸ್ಟರ್ ಆನಂದ್ (Master Anand) ಅವರ ಮಗಳು ವಂಶಿಕ (Vanshika) ಇದೀಗ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ವಂಶಿಕ ಇದೀಗ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ (Nammamma Super Star) ಶೋ ನಲ್ಲಿ ವಂಶಿಕ ವಿಜಯಶಾಲಿಯಾಗಿದ್ದಾರೆ.

ನಮ್ಮಮ್ಮ ಸೂಪರ್ ಸ್ಟಾರ್ ಶೋ ಮುಗಿದ ನಂತರ ವಂಶಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಇದೀಗ ವಂಶಿಕ ಹೊಸ ವಿಡಿಯೋವೊಂದು ಪೋಷಕರು ರಿವೀಲ್ ಮಾಡಿದ್ದಾರೆ.
ಔಷಧಿ ತೆಗೆದುಕೊಳ್ಳಲು ನಿರಾಕರಿಸಿದ ವಂಶಿಕ
ವಂಶಿಕ ಇದೀಗ ನಿರಂಜನ್ ಅವರ ಜೊತೆ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 (Nammamma Super Star Season 2) ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ.

ಈ ನಡುವೆ ವಂಶಿಕ ಅವರ ಹೊಸ ವಿಡಿಯೋವೊಂದನ್ನು ವಂಶಿಕ ಪೋಷಕರು ರಿವೀಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವಂಶಿಕ ಔಷಧಿ ತೆಗೆದುಕೊಳ್ಳಲು ಹಠ ಮಾಡುತ್ತಿರುದನ್ನು ನೋಡಬಹುದು.
ಸಿರಪ್ ಕುಡಿಯಲು ಹಠ ಮಾಡುತ್ತಿರುವ ವಂಶಿಕ
ಮಾಸ್ಟರ್ ಆನಂದ್ (Master Anand) ವಂಶಿಕ ಅವರಿಗೆ ಕೆಮ್ಮು ಇದ್ದ ಕಾರಣ ಸಿರಪ್ ಕುಡಿಸುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯಾದಲ್ಲಿ ವಂಶಿಕ ಸಿರಪ್ ಕುಡಿಯಲೂ ಹಠ ಮಾಡುತ್ತಿರುದನ್ನು ನೋಡಬಹುದು.
ಸಿರಪ್ ಕುಡಿಯುವ ಮುನ್ನ ನೀರು ಬೇಕು ಎಂದು ವಂಶಿಕ ಕೇಳುತ್ತಾರೆ. ನಂತರ ನೀರು ಕುಡಿದು ಸಿರಪ್ ಕುಡಿಯಲು ಮುಂದಾಗುತ್ತಾರೆ. ಗುಡ್ ಗರ್ಲ್ ತರ ಸಿರಪ್ ಕುಡಿ ಎಂದು ಮಾಸ್ಟರ್ ಆನಂದ್ ಹೇಳುತ್ತಾರೆ. ಮಾಸ್ಟರ್ ಆನಂದ್ ವಂಶಿಕ ಮೂಗನ್ನು ಮುಚ್ಚಿ ಸಿರಪ್ ಅನ್ನು ವಂಶಿಕ ಬಾಯಿಗೆ ಹಾಕುತ್ತಾರೆ.
ತ್ರಿ ಟು ಒನ್ ಕೌಂಟ್ ಮಾಡಿ ಮಾಸ್ಟರ್ ಆನಂದ್ ಎರಡು ಮುಚ್ಚಳ ಸಿರಪ್ ಅನ್ನು ವಂಶಿಕ ಬಾಯಿಗೆ ಹಾಕುತ್ತಾರೆ. ಈ ವಿಡಿಯೋವನ್ನು ವಂಶಿಕ ಪೋಷಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇನ್ನು ವಂಶಿಕ ಇದೀಗ ಶೋರ್ಟ್ ಮೂವಿ ತೆಗೆಯುದರಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ವಂಶಿಕ ಶೊರ್ಟ್ ಮೂವಿಯಲ್ಲಿ ಅತ್ತೆ ಪಾತ್ರವನ್ನು ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಶೋರ್ಟ್ ಮೂವಿಯ ಜೊತೆಗೆ ಸಿನಿಮಾಗಳನ್ನು ವಂಶಿಕ ಬ್ಯುಸಿ ಆಗಿದ್ದಾರೆ. ಈ ನಡುವೆ ವಂಶಿಕ ಅವರ ಹೊಸ ವಿಡಿಯೋ ವೈರಲ್ ಆಗುತ್ತಿದೆ.
View this post on Instagram
Comments are closed.