ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಚಂದುಳ್ಳಿ ಚೆಲುವೆಯರು ಇಂದು ಪ್ರೇಕ್ಷಕರನ್ನು ಗಮನಸೆಳೆಯುತ್ತಿದ್ದಾರೆ. ತಾವು ಮಾಡಿರುವ ಮೊದಲ ಧಾರಾವಾಹಿಗಳಲ್ಲಿಯೇ ಜನರನ್ನ ಹೆಚ್ಚು ಆಕರ್ಷಿಸುತ್ತಾರೆ. ಇನ್ನು ಅವರ ನಟನೆಯಂತೂ ಮೊದಲ ಬಾರಿಗೆ ನಟಿಸುತ್ತಿದ್ದಾರೆ ಎಂದು ಯಾರು ಊಹಿಸುವುದಕ್ಕೂ ಸಾಧ್ಯವಿಲ್ಲ ಅಷ್ಟು ಪಕ್ವ ನಟನೆಯನ್ನು ಮೈಗೂಡಿಸಿಕೊಂಡಿರುತ್ತಾರೆ ಕೆಲವು ಕಲಾವಿದರು. ಇಂಥ ಚೆಲುವೆ ಇರಲಿ ಡಿಂಪಲ್ ಕ್ವೀನ್ ವೈಷ್ಣವಿ ಗೌಡ ಕೂಡ ಒಬ್ಬರು.
ವೈಷ್ಣವಿ ಗೌಡ ಅನ್ನುವುದಕ್ಕಿಂತ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದರೆ ನಿಮಗೆಲ್ಲರಿಗೂ ಬೇಗ ಅರ್ಥವಾಗಬಹುದು. ಯಾಕಂದ್ರೆ ಈ ಗುಳಿ ಕೆನ್ನೇಯ ಚೆಲುವೆ ಫೇಮಸ್ ಆಗಿದ್ದೆ ಸನ್ನಿಧಿ ಎನ್ನುವ ಪಾತ್ರದ ಮೂಲಕ. ಕಲರ್ಸ್ ಕನ್ನಡದಲ್ಲಿ ಕೆಲವು ವರ್ಷಗಳ ಕಾಲ ಪ್ರಸಾರವಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ಧಾರ್ಥ ಹಾಗೂ ಸನ್ನಿಧಿಯವರ ಪಾತ್ರ ಜನರನ್ನ ಅತಿಯಾಗಿ ಆಕರ್ಷಿಸಿತ್ತು. ನಿಜ ಜೀವನದಲ್ಲಿಯೂ ಕೂಡ ಈ ಕ್ಯೂಟ್ ಜೋಡಿ ಒಂದಾದರೆ ಎಷ್ಟು ಚೆನ್ನಾಗಿರುತ್ತೆ ಅಂತ ನೆಟ್ಟಿಗರು ಮಾತನಾಡಿಕೊಂಡಿದ್ದರು. ಆದರೆ ನಮ್ಮಿಬ್ಬರದ್ದು ವೃತ್ತಿ ಸ್ನೇಹವಷ್ಟೇ ಅಂತ ಸಿದ್ದಾರ್ಥ್ ಇನ್ನೊಬ್ಬ ಹುಡುಗಿಯ ಜೊತೆ ಮದುವೆಯಾಗಿ ಈ ಎಲ್ಲಾ ಗಾಸಿಪ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದರು.
ಇನ್ನು ಮಿಲ್ಕ್ ಬ್ಯೂಟಿ ವೈಷ್ಣವಿ ಗೌಡ ಮಾತ್ರ ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ನಟಿ ವೈಷ್ಣವಿ ಗೌಡ ದೇವಿ ಎನ್ನುವ ಧಾರವಾಹಿ ಮೂಲಕ ಕಿರುತೆರೆಯ ನಟನೆಯನ್ನು ಆರಂಭಿಸಿದರು. ಇದಾದ ಬಳಿಕ ಇನ್ನೂ ಒಂದೆರಡು ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದರು ಸನ್ನಿಧಿ ಪಾತ್ರದ ಮೂಲಕ ವೈಷ್ಣವಿ ಗೌಡ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿತ್ತು.
ವೈಷ್ಣವಿ ಗೌಡ ಅಗ್ನಿಸಾಕ್ಷಿ ಧಾರಾವಾಹಿಯನ ಮುಗಿಸಿ ನಂತರ ಬಿಗ್ ಬಾಸ್ ಸೀಸನ್ 8ರ ಸ್ಪರ್ಧೆಯಾಗಿ ಕೂಡ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿಯೂ ತಮ್ಮದೇ ಆದ ಆಟದ ಶೈಲಿಯಿಂದಾಗಿ ಜನರಿಗೆ ಇನ್ನಷ್ಟು ಇಷ್ಟವಾಗಿದ್ದರೂ ವೈಷ್ಣವಿ ಗೌಡ. ಟಾಪ್ ಫೈವ್ ನಲ್ಲಿ ಒಬ್ಬ ಕಂಟೆಸ್ಟೆಂಟ್ ಆಗಿರುವುದರ ಮೂಲಕ ವೈಷ್ಣವಿ ಗೌಡ ಕನ್ನಡಿಗರ ಮೆಚ್ಚಿನ ಮನೆಮಗಳು ಎನಿಸಿದ್ದರು.
ವೈಷ್ಣವಿ ಗೌಡ ಅವರು ಬೆಳ್ಳಿ ಚುಕ್ಕಿ ಹಳ್ಳಿ ಚುಕ್ಕಿ, ಬಹುಕೃತ ವೇಷ ಮೊದಲಾದ ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ. ಇನ್ನು ಕೆಲವು ಪ್ರಾಜೆಕ್ಟ್ ಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ವೈಷ್ಣವಿ ಗೌಡ ಇತ್ತೀಚಿಗೆ ತಮ್ಮ ಕನಸಿನ ಮನೆಯನ್ನು ಪ್ರವೇಶಿಸಿದ್ದಾರೆ. ಹೌದು ವೈಷ್ಣವಿ ಗೌಡ ಇತ್ತೀಚೆಗೆ ತಮ್ಮದೇ ಆದ ಮನೆಯೋದನ್ನ ಖರೀದಿಸಿದ್ದು, ಮನೆ ಪ್ರವೇಶಕ್ಕೆ ಅವರ ಸ್ನೇಹಿತರು ಬಿಗ್ ಬಾಸ್ ಸ್ಪರ್ಧಿಗಳು ಮೊದಲಾದವರು ಆಗಮಿಸಿ ವಿಶ್ ಮಾಡಿದ್ದರು.
ಇನ್ನು ವೈಷ್ಣವಿ ಗೌಡ ಹೆಚ್ಚು ಅಭಿಮಾನಿಗಳನ್ನ ಗಳಿಸಿಕೊಂಡಿರುವುದು ಸೋಶಿಯಲ್ ಮೀಡಿಯಾ ಮೂಲಕ. ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ಹಲವು ಪೋಸ್ಟ್ ಗಳನ್ನು ಮಾಡುವುದರ ಮೂಲಕ ವೈಷ್ಣವಿ ಗೌಡ ಇನ್ನಷ್ಟು ಫೇಮಸ್ ಆಗಿದ್ದಾರೆ. ವೈಷ್ಣವಿ ಗೌಡ ಉತ್ತಮ ನೃತ್ಯಗಾರ್ತಿ ಹಾಗೂ ಯೋಗ ಪಟು ಕೂಡ ಹೌದು. ಹಾಗಾಗಿ ಆಗಾಗ ತಮ್ಮ ಫಿಟ್ನೆಸ್ ವಿಡಿಯೋಗಳನ್ನು ಕೂಡ ಮಾಡಿ ಹಾಕುತ್ತಾರೆ.
ಅಲ್ಲದೆ ವಿವಿಧ ಭಂಗಿಗಳಲ್ಲಿ ವಿವಿಧ ಬಟ್ಟೆಗಳನ್ನ ತೊಟ್ಟು ಫೋಟೋಶೂಟ್ಗಳನ್ನ ಮಾಡಿಸುತ್ತಾರೆ ವೈಷ್ಣವಿ ಗೌಡ. ಇತ್ತೀಚಿಗೆ ಬಿಳಿ ವರ್ಣದ ಪ್ಯಾಂಟ್ ಹಾಗೂ ಡಾಟೆಡ್ ಪಾರದರ್ಶಕ ಶರ್ಟ್ ಹಾಗೂ ಮ್ಯಾಚಿಂಗ್ ಕ್ಯಾಪ್ ತೊಟ್ಟು ಫೋಟೋಶೂಟ್ ಮಾಡಿಸಿದ್ದು, ಪಡ್ಡೆ ಹೈಕ್ಳ ನಿದ್ದೆಗೆಡಿಸಿದೇ. ಈ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಒಟ್ಟಿನಲ್ಲಿ ವೈಷ್ಣವಿ ಗೌಡ ಯಾವ ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ಹಾರ್ಟ್ ಫೇವರೆಟ್ ಕಿರುತೆರೆಯ ನಟಿ ಎನಿಸಿದರೆ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ.