ಕನ್ನಡ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಅವರ ವಿಚಾರವಾಗಿ ಶಾಕಿಂಗ್ ವಿಚಾರವೊಂದು ಹೊರ ಬಂದಿದೆ.. ಅದೂ ಕೂಡ ಖುದ್ದು ವೈಷ್ಣವಿ ಅವರೇ ತಮ್ಮ ಮದುವೆ ಬಗ್ಗೆ ಹೇಳಿಕೆ ನೀಡಿದ್ದು ನಿಜಕ್ಕೂ ಅವರ ಮಾತುಗಳು ಆಶ್ಚರ್ಯವನ್ನುಂಟು ಮಾಡಿದೆ.. ಹೌದು ನಿನ್ನೆ ಸಂಜೆ ಯಿಂದ ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಅವರ ಫೋಟೋವೊಂದು ವೈರಲ್ ಆಗಿತ್ತು.. ಫೋಟೋದಲ್ಲಿ ಹುಡುಗನೊಬ್ಬರಿಗೆ ಹಾರ ಹಾಕಿರುವ ಫೋಟೋ ಅದಾಗಿದ್ದು ಕುಟುಂಬದ ಜೊತೆ ನಿಂತಿದ್ದರು.. ಇದನ್ನು ಕಂಡ ನೆಟ್ಟಿಗರು ವೈಷ್ಣವಿ ಅವರಿಗೆ ನಿಶ್ಚಿತಾರ್ಥ ಆಗಿದೆ ಎಂದುಕೊಂಡು ಶುಭಾಶಯ ತಿಳಿಸಿದ್ದರು.. ಫೋಟೋ ನೋಡಲು ನಿಶ್ಚಿತಾರ್ಥದಂತೆಯೇ ಇದ್ದು ಈ ಬಗ್ಗೆ ಎಲ್ಲಾ ಮಾದ್ಯಮಗಳಲ್ಲಿ ಸುದ್ದಿಯೂ ಆಯಿತು.. ಆದರೆ ವೈಷ್ಣವಿಯಾಗಲಿ ಅಥವಾ ಹುಡುಗನಾಗಲಿ ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿರಲಿಲ್ಲ. ಈ ಬಗ್ಗೆ ಸಾಮಾನ್ಯವಾಗಿ ಕುತೂಹಲ ಮೂಡಿತ್ತು.. ಈ ಬಗ್ಗೆ ವಿಚಾರಿಸಲು ವೈಷ್ಣವಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.. ನಂತರ ವಿಚಾರ ದೊಡ್ಡದಾಗುತ್ತಿದ್ದಂತೆ ಇದೀಗ ವೈಷ್ಣವಿ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ..
ಹೌದು ವೈಷ್ಣವಿ ಅವರನ್ನು ನೋಡಲು ಹುಡುಗ ಬಂದದ್ದು ನಿಜ.. ಆದರೆ ನಾನು ಒಪ್ಪಿಕೊಂಡಿಲ್ಲ ಅನ್ನೋ ಮಾತುಗಳನ್ನಾಡಿದ್ದಾರೆ.. ಇದು ಸಂಪೂರ್ಣವಾಗಿ ಮನೆಯವರು ನೋಡಿರುವ ಅರೇಂಜ್ಡ್ ಮ್ಯಾರೇಜ್.. ಹುಡುಗನ ಕಡೆಯವರು ಬಂದು ನೋಡಿದ್ದಾರೆ ಮಾತುಕತೆ ಮಾಡಿರೋದು ಸಹ ನಿಜ.. ಆದರೆ ಇದು ಎಂಗೇಜ್‌ಮೆಂಟ್ ಅಲ್ಲ ನಾನಿನ್ನೂ ಒಪ್ಪಿಕೊಂಡಿಲ್ಲ ಎಂದಿದ್ದಾರೆ..
ಮನೆಯವರು ನಿರ್ಧರಿಸಿರೋದರಿಂದ ಹುಡುಗ ಕೂಡ ನನಗೆ ಹೊಸ ವ್ಯಕ್ತಿ ಆಗಿರೋದ್ರಿಂದ ನನಗೂ ಕೊಂಚ ಸಮಯಾವಕಾಶ ಬೇಕಾಗಿದೆ. ನಾನಿನ್ನೂ ಈ ಮದುವೆಗೆ ಒಪ್ಪಿಗೆ ಸೂಚಿಸಿಲ್ಲ ಎಂದು ವೈಷ್ಣವಿ ಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.. ಈ ಮೂಲಕ ನಿನ್ನೆಯಿಂದ ಹರಿದಾಡಿದ ಸುದ್ದಿಗೆ ಖುದ್ದು ವೈಷ್ಣವಿ ಅವರೇ ಬ್ರೇಕ್ ಹಾಕಿದ್ದಾರೆ.. ಆದರೆ ಕೇವಲ ನೋಡಲು ಬಂದವರು ತಾಂಬೂಲ ಸಮೇತ ಹಾರ ಹಾಕಿಕೊಂಡು ಫೋಟೋ ತೆಗೆಸಿಕೊಂಡದ್ದು ಕಂಡ ಅಭಿಮಾನಿಗಳು ಬಹುಶಃ ಒಪ್ಪಿಗೆ ಸೂಚಿಸಿ ಇದೀಗ ಸರಿ ಬಾರದ ಕಾರಣ ಸುಮ್ಮನಾದರಾ ಎನ್ನುವ ಮಾತುಗಳನ್ನಾಡುತ್ತಿದ್ದಾರೆ..
ಇನ್ನು ಸಧ್ಯ ವೈಷ್ಣವಿ ಅವರನ್ನು ಮದುವೆಯಾಗಲು ಬಂದಿರುವ ಹುಡುಗನ ಹೆಸರು ವಿಧ್ಯಾಭರಣ.. ಇವರೂ ಸಹ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಸಿನಿಮಾವೊಂದರಲ್ಲಿ ನಾಯಕನಾಗಿ ಅಭಿನಯಿಸಿದವರೇ.. 2018 ರಲ್ಲಿ ವಿರಾಜ್ ಎಂಬ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದರು.. ಆನಂತರ ಸಿನಿಮಾದಲ್ಲಿ ಹೆಚ್ಚು ಆಸಕ್ತಿ ತೋರದೇ ಬೆಂಗಳೂರಿನಲ್ಲಿಯೇ ತಮ್ಮದೇ ಆದ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ..
ಇನ್ನು ವೈಷ್ಣವಿ ಗೌಡ ಹಾಗೂ ವಿದ್ಯಾಭರಣ ಅವರು ಹಾರ ಹಾಕಿಕೊಂಡಿದ್ದು ಈಗ ನಾನಿನ್ನೂ ಒಪ್ಪಿಗೆ ಸೂಚಿಸಿಲ್ಲ ಎಂದು ವೈಷ್ಣವಿ ಅವರು ಹೇಳುತ್ತಿದ್ದು ಬಹುಶಃ ಮದುವೆಗೆ ಒಪ್ಪಿ ಇದೀಗ ಸರಿ ಬಾರದ ಕಾರಣ ಇದನ್ನು ಇಲ್ಲಿಗೆ ಕೈಬಿಟ್ಟು ಈ ವಿಚಾರವನ್ನು ಬಹಿರಂಗ ಪಡಿಸದೇ ಇರಬಹುದಾಗಿದೆ.. ಆದರೆ ನಿನ್ನೆ ಇದ್ದಕಿದ್ದ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದ್ದು ವೈಷ್ಣವಿ ಅವರು ಇದೇ ಹುಡುಗನನ್ನಿ ಒಪ್ಪಿ ಮದುವೆಯಾಗುವರಾ ಅಥವಾ ಸುಮ್ಮನಾಗುವರಾ ಕಾದು ನೋಡಬೇಕಿದೆ.. ಕೆಳಗಿನ ವೀಡಿಯೋ ನೋಡಿ..