
Vaishnavi Gowda Engagement Video ; ಅಗ್ನಿಸಾಕ್ಷಿ ಎಂಬ ಧಾರಾವಾಹಿ ಮೂಲಕ ವೀಕ್ಷಕರ ಮನಗೆದ್ದ ನಟಿ ವೈಷ್ಣವಿ ಗೌಡ ರವತ ಮದುವೆಗೆ ಸಿದ್ಧತೆ ನಡಿಯುತ್ತಿದ್ದು ಗುಟ್ಟಾಗಿ ಎಂಗೇಜ್‌ಮೆಂಟ್ ಕೂಡ ಆಗಿದೆ ಎನ್ನಲಾಗುತ್ತಿದೆ. ಹೌದು ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಸ್ಪರ್ಧಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಆಗಿದೆ ಎಂದು ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಧಾರಾವಾಹಿ ಮೂಲಕ ಅಭಿನಯ ಆರಂಭಿಸಿದ ನಟಿ ವೈಷ್ಣವಿಗೌಡ ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ನಟನೆ ಆರಂಭಿಸಿದ ವೈಷ್ಣವಿ ಗೌಡ ಅವರು ಇಂದಿಗೂ ಪಡ್ಡೆ ಹುಡುಗರ ಕನಸಿನ ರಾಣಿ. ವೈಷ್ಣವಿ ಗೌಡ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ.
ಇನ್ನು ವೈಷ್ಣವಿ ನಟನೆ ಮಾಡಬೇಕು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದು ಅಗ್ನಿಸಾಕ್ಷಿ ಸನ್ನಿಧಿ ಎಂದೇ ಚಿರಪರಿಚಿತರಾದ ವೈಷ್ಣವಿ ಗೌಡ ಅವರು ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾರೆ.
ನಟಿ ವೈಷ್ಣವಿ ಗೌಡ ರವರು ಮದುವೆಯಾಗಲು ತುದಿಗಾಲಿನಲ್ಲಿ ನಿಂತಿದ್ದು ಅಷ್ಟೇ ಅಲ್ಲದೇ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂದು ಕೂಡ ಹೇಳಿಕೊಂಡಿದ್ದರು. ಅಲ್ಲದೇ ಜಯಶ್ರೀ ಎಂಬ ಟ್ಯಾರೋ ಕಾರ್ಡ್ ರೀಡರ್ ಅವರ ಬಳಿ ಹೋಗಿದ್ದ ವೈಷ್ಣವಿ ತಮ್ಮ ಮದುವೆಯ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದರು.
ಟ್ರಾರೋ ಕಾರ್ಡ್ ಪ್ರಕಾರ ವೈಷ್ಣವಿ ಅವರ ಮದುವೆ ದಿನಾಂಕವನ್ನು ಹೇಳಲಾಗಿದ್ದು ಅಂದರೆ 8 ದಿನ ಅಥವಾ 8 ವಾರ ಇಲ್ಲವೇ 8 ತಿಂಗಳಲ್ಲಿ ವೈಷ್ಣವಿ ಗೌಡ ಅವರ ಮದುವೆ ನಡೆಯಲಿದೆ ಎಂದು ಹೇಳಿದ್ದರು. ವೈಷ್ಣವಿ ಮದುವೆಯಾಗುವ ಹುಡುಗ ತುಂಬಾ ಸಿಂಪಲ್ ಆಗಿರುವುದರ ಜೊತೆಗೆ ಹೊಂದಿಕೊಳ್ಳುವಂತವರಾಗಿರುತ್ತಾರೆ ಎಂದು ಕೂಡ ಹೇಳಿದ್ದು ಇದರ ಜೊತೆಗೆ ವೈಷ್ಣವಿ ಅವರು ಕೂಡ ಮದುವೆಯಾಗಲು ಕಾತುರರಾಗಿದ್ದರು. ಇನ್ನು ವೈಷ್ಣವಿ ಅವರ ಮನೆಯಲ್ಲೂ ಮಗಳ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು.
ಆದರೆ ಈಗ ಹುಡುಗನೂ ಸಿಕ್ಕಿದ್ದು ವೈಷ್ಣವಿ ಅವರು ಯಾರಿಗೂ ಹೇಳದ ಹಾಗೆ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು ವಿದ್ಯಾ ಭರಣ್ ಎಂಬುವರೊಂದಿಗೆ ವೈಷ್ಣವಿ ಅವರು ಸಿಂಪಲ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ವೈಷ್ಣವಿ ಅವರು ರೇಷ್ಮೆ ಸೀರೆ ಉಟ್ಟಿದ್ದಾರೆ.
ಹೌದು ಹಾರವನ್ನು ಧರಿಸಿದ್ದು ಪಕ್ಕದಲ್ಲಿ ವಿದ್ಯಾ ಭರಣ್ ಅವರು ಹಾರ ಹಾಕಿಕೊಂಡಿದ್ದಾರೆ. ಇನ್ನು ಈ ಫೋಟೋದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದಿರಿ ಅವರು ಕೂಡ ಕಾಣಿಸಿಕೊಂಡಿದ್ದು ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.ಇನ್ನು ಈ ವಿದ್ಯಾ ಭರಣ್ ಅವರು ಕೂಡ ನಟ. ವಿರಾಜ್’ ಎಂಬ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದು ಇಂಜಿನಿಯರ್ ಓದಿರುವ ವಿದ್ಯಾ ಭರಣ್ ಅವರು ವೈಷ್ಣವಿ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಫೊಟೋ ವೈರಲ್ ಆದ ಕಾರಣ ಇಬ್ಬರೂ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಇವರ ನಿಶ್ಚಿತಾರ್ಥದ ವಿಡಿಯೋ ಇಲ್ಲಿದೆ ನೋಡಿ.
Comments are closed.