ಅಪ್ಪು ಇಲ್ಲವಾಗಿ ಈಗ 7 ತಿಂಗಳು ಕಳೆದುಹೋಗಿದೆ. ಅಪ್ಪು ಇಲ್ಲದ ನೋವು ಈ ಸಮಯಕ್ಕೂ ಯಾರಿಂದಲೂ ಸಂಪೂರ್ಣವಾಗಿ ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ಆ ಬೆಟ್ಟದ ಹೂವು ಕಂಡಂತಹ ಕನಸುಗಳು ಸಾವಿರಾರು. ಅದೆಲ್ಲವನ್ನು ಒಂದೊಂದಾಗಿ ನನಸು ಮಾಡುತ್ತಿದ್ದ ಸಮಯದಲ್ಲೇ ಈ ರೀತಿ ಆಗಿದ್ದು, ನಿಜಕ್ಕು ಬಹಳ ನೋವಿನ ವಿಷಯ.
ದೇವರು ಇನ್ನು ಸ್ವಲ್ಪ ಸಮಯ ಕಾಲಾವಕಾಶ ಕೊಡಬೇಕಿತ್ತು ಎಂದೇ ಎಲ್ಲರು ಭಾವಿಸುತ್ತಿದ್ದಾರೆ. ಆದರೆ ಈಗ ಏನು ಮಾಡಲು ಸಾಧ್ಯವಿಲ್ಲ. ಈ ವರ್ಷ ಅಪ್ಪು ಅವರ ಮಗಳು ವಂದಿತಾ 10ನೇ ತರಗತಿಯಲ್ಲಿ ಓದುತ್ತಿದ್ದರು, ಅವರ ರಿಸಲ್ಟ್ ಬಂದಿದ್ದು, ಎಷ್ಟು ಅಂಕ ಗಳಿಸಿದ್ದಾರೆ ಗೊತ್ತಾ?
ಅದೆಷ್ಟೋ ಕನಸುಗಳಿಂದ ಪಿ.ಆರ್.ಕೆ ಸಂಸ್ಥೆ ಶುರು ಮಾಡಿದ್ದರು ಅಪ್ಪು, ಈಗ ಆ ಎಲ್ಲಾ ಕನಸುಗಳನ್ನು ನನಸು ಮಾಡುವ ದೊಡ್ಡ ಜವಾಬ್ದಾರಿ ಅಶ್ವಿನಿ ಅವರ ಮೇಲಿದೆ. ಅಂತೆಯೇ ಅಪ್ಪು ಅವರ ಕನಸುಗಳನ್ನು ಒಂದೊಂದಾಗಿ ನನಸು ಮಾಡುತ್ತಾ ಬರುತ್ತಿದ್ದಾರೆ ಅಶ್ವಿನಿ ಅವರು.
ಅಪ್ಪು ಅವರು ಇಲ್ಲದ ನೋವು ಅಭಿಮಾನಿಗಳಲ್ಲಿ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಕುಟುಂಬದವರಲ್ಲಿದೆ, ಅಪ್ಪು ಅವರ ಪತ್ನಿ ಅಶ್ವಿನಿ ಅವರು, ಮಕ್ಕಳಾದ ಧೃತಿ ಮತ್ತು ವಂದಿತಾ, ಹಾಗೂ ಅಣ್ಣಂದಿರ ಮತ್ತು ಇಡೀ ಕುಟುಂಬದಲ್ಲಿದೆ. ಯಾರು ಕೂಡ ಅಪ್ಪು ಅವರನ್ನು ನೆನೆಯದೇ ಒಂದು ದಿನವನ್ನು ಸಹ ಕಳೆಯುತ್ತಿಲ್ಲ.
ಅಭಿಮಾನಿಗಳ ಮನಸ್ಸಿಗೆ ಇಷ್ಟು ನೋವಿದೆ ಅಂದ್ರೆ, ಇನ್ನು ಕುಟುಂಬ ಅದರಲ್ಲು ಅಪ್ಪು ಅವರ ಮಕ್ಕಳಿಗೆ ಎಷ್ಟು ನೋವಾಗಿರುತ್ತದೆ ಎಂದು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಅಪ್ಪು ಅವರಿಗೆ ಮಕ್ಕಳ ಬಗ್ಗೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಬಹಳ ಕಾಳಜಿ ಇತ್ತು. ಮಕ್ಕಳು ಸ್ವಾವಲಂಬಿಯಾಗಿ, ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಯಾರ ಸಹಾಯವನ್ನು ಪಡೆಯಬಾರದು ಎನ್ನುವ ಆಸೆ ಅಪ್ಪು ಅವರಿಗೆ ಇತ್ತು.
ಮಕ್ಕಳನ್ನು ಅದೇ ರೀತಿ ಬೆಳೆಸುತ್ತಿದ್ದರು ಪವರ್ ಸ್ಟಾರ್. ತಂದೆಯ ಆಸೆಯ ಹಾಗೆ ಅಪ್ಪು ಅವರ ಮೊದಲ ಮಗಳು ಧೃತಿ, ತಂದೆ ತಾಯಿಯ ಸಹಾಯವನ್ನು ಕೂಡ ಪಡೆಯದೆ ವಿದೇಶಕ್ಕೆ ಹೋಗಿ ಓದುತ್ತಿದ್ದಾರೆ. ಇನ್ನು ಅಪ್ಪು ಅವರ ಎರಡನೇ ಮಗಳು ವಂದಿತಾ, ಅಮ್ಮನ ಜೊತೆ ಬೆಂಗಳೂರಿನಲ್ಲೇ ಇದ್ದು ಓದುತ್ತಿದ್ದಾರೆ.
ವಂದಿತಾ ಪುನೀತ್ ರಾಜ್ ಕುಮಾರ್ ಅವರು 10ನೇ ತರಗತಿಯಲ್ಲಿ ಓದುತ್ತಿದ್ದರು. ಬೆಂಗಳೂರಿನ ಸೋಫಿಯಾ ಶಾಲೆಯಲ್ಲಿ ವಂದಿತಾ ಓದುತ್ತಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಅಪ್ಪು ಅವರು ಇಲ್ಲವಾಗಿ ಕೆಲವೇ ದಿನಗಳಲ್ಲಿ ವಂದಿತಾ ಅವರಿಗೆ ಪರೀಕ್ಷೆ ಇತ್ತು. ಆಗ, ತಂದೆ ಇಲ್ಲದ ನೋವಿದ್ದರು ಸಹ ವಂದಿತಾ ಅವರು ಪರೀಕ್ಷೆ ಬರೆದು ಬಂದಿದ್ದರು.
ಇತ್ತೀಚೆಗೆ ನಡೆದ 10ನೇ ತರಗತಿಯ ಪರೀಕ್ಷೆಯನ್ನು ವಂದಿತಾ ಪುನೀತ್ ರಾಜ್ ಕುಮಾರ್ ಬರೆದು ಬಂದಿದ್ದರು. ಒಂದು ವಾರದ ಹಿಂದೆಯಷ್ಟೇ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಬಂದಿದೆ. ವಂದಿತಾ ಅವರ ರಿಸಲ್ಟ್ ಸಹ ಬಂದಿದ್ದು, ವಂದಿತಾ ಅವರು ಗಳಿಸಿರುವ ಅಂಕ ನೋಡಿ ದೊಡ್ಮನೆ ಕುಟುಂಬಕ್ಕೆ ಸಂತೋಷವಾಗಿದೆ. ವಂದಿತ ಅವರು ಬರೋಬ್ಬರಿ 590 ಅಂಕಗಳನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಅರ್ಥ ಅಪ್ಪು ಮಗಳು ವಂದಿತ ಅವರು SSLC ಅಲ್ಲಿ ಬರೋಬ್ಬರಿ 95 ಪರ್ಸಂಟೇಜ್ ಗಳಿಸಿದ್ದಾರೆ. ಅಪ್ಪು ಅವರು ಇದ್ದಿದ್ದರೆ ಮಗಳ ರಿಸಲ್ಟ್ ನೋಡಿ ಬಹಳ ಸಂತೋಷ ಪಡುತ್ತಿದ್ದರು ಎಂದು ಎಲ್ಲರೂ ಭಾವಿಸಿದ್ದಾರೆ. ಅಪ್ಪು ಅವರು ತಾವು ಶಾಲೆಯ ದಿನಗಳನ್ನು ಮಿಸ್ ಮಾಡಿಕೊಂಡಿದ್ದರ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದರು. ಹಾಗಾಗಿ ತಮ್ಮ ಮಕ್ಕಳು ಶಾಲೆಯ ಲೈಫ್ ಅನ್ನು ಎಂಜಾಯ್ ಮಾಡುತ್ತಾ ಚೆನ್ನಾಗಿ ಓದಬೇಕು ಎನ್ನುವುದು ಅಪ್ಪು ಅವರ ಆಸೆ ಆಗಿತ್ತು.