ಬಹುಭಾಷಾ ನಟಿ ಊರ್ವಶಿ ರೌಟೇಲಾ ಅವರು ಸದಾ ಒಂದಿಲ್ಲೊಂದು ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿರುತ್ತಾರೆ, ಅದರಲ್ಲಿಯೂ ತಮ್ಮ ಫೋಟೋ ಹಾಗೂ ವಿಡಿಯೋಗಳ ಕಾರಣದಿಂದಲಂತೂ ಸಾಕಷ್ಟು ಸುದ್ದಿಯಲ್ಲಿರುವ ಇವರು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಥವಾ ಫೋಟೋ ಹರಿಬಿಟ್ಟರೆ ಕ್ಷಣ ಮಾತ್ರದಲ್ಲಿ ಅದು ವೈರಲ್ ಆಗಿರುತ್ತದೆ, ಏಕೆಂದರೆ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯೇ ಬರೋಬ್ಬರಿ 53 ಮಿಲಿಯನ್ ಆಗಿದೆ!
ತಮ್ಮ ಬೋಲ್ಡ್ನೆಸ್ ಹಾಗೂ ಇನ್ನಿತರೇ ವಿಷಯಗಳಿಂದ ಸದಾ ಸುದ್ದಿಯಲ್ಲಿರುವ ಊರ್ವಶಿ, ಭಾರತ ಕ್ರಿಕೆಟ್ ತಂಡದ ಹಾಲಿ ವಿಕೆಟ್ ಕೀಪರ್ ಹಾಗೂ ಸಧ್ಯ ಭಾರತ ಕ್ರಿಕೆಟ್ ತಂಡದ ಟಿ-20 ತಂಡದ ಹಂಗಾಮಿ ನಾಯಕ ರಿಷಬ್ ಪಂತ್ ಅವರೊಂದಿಗಿನ ಲವ್ವಿ ಡವ್ವಿ ವಿಚಾರದಿಂದಲೂ ಸಹ ಸಾಕಷ್ಟು ಸುದ್ದಿಯಲ್ಲಿದ್ದವರು. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಸುದ್ದಿ ಹರಿದಾಡುತ್ತಿತ್ತು. ಆದರೆ ಕೆಲವು ದಿನಗಳ ಕಾಲ ಆ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ ಆದರೆ ಇದೀಗ ಮತ್ತೊಮ್ಮೆ ಇವರಿಬ್ಬರ ನಡುವಿನ ಸಂಬಂಧದ ಸುದ್ದಿ ಸದ್ದು ಮಾಡಿದೆ!
ಇತ್ತೀಚಿಗಷ್ಟೇ ಯಾವುದೋ ಕಾರ್ಯನಿಮಿತ್ತ ತಮ್ಮ ತವರು ನಾಡು ಡೆಹ್ರಾಡೂನ್ ಗೆ ತೆರಳಿದ್ದ ಊರ್ವಶಿಯವರು ಅಲ್ಲಿಯೇ ಒಂದು ಕಾಲೇಜ್ ಫೆಸ್ಟ್ ನಲ್ಲಿ ಭಾಗವಹಿಸಲು ತೆರಳಿದ್ದಾಗ ಅಲ್ಲಿ ನೆರೆದಿದ್ದ ಅವರ ಅಭಿಮಾನಿಗಳು ಹಾಗೂ ಇನ್ನಿತರೇ ಜನರು ಕೆಂಪು ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದ ಊರ್ವಶಿ ಕಾರಿನಿಂದ ಇಳಿದ ತಕ್ಷಣ ‘ರಿಷಬ್ ರಿಷಬ್’ ಎಂದು ಜೋರಾಗಿ ಕೂಗತೊಡಗಿದರು.
ಈ ಘಟನೆಯಿಂದ ಮೊದಲು ಕೊಂಚ ತಬ್ಬಿಬ್ಬಾದಂತೆ ಕಂಡ ಊರ್ವಶಿಯವರು ನಂತರ ಸುಧಾರಿಸಿಕೊಂಡು ನಗುತ್ತಾ ರಿಷಭ್ ರಿಷಭ್ ಎಂದು ಕೂಗಿದ ತಮ್ಮ ಅಭಿಮಾನಿಗಳತ್ತ ಫ್ಲೈ ಕಿಸ್ ಕೊಟ್ಟ ಮುಂದೆ ಸಾಗಿದರು. ಅಂದಹಾಗೆ ಕೆಲವೇ ಸೆಕೆಂಡ್ ಇರುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನ high.br0 ಎಂಬ ಖಾತೆಯಲ್ಲಿ ಹಂಚಿಕೊಂಡಿದ್ದು ಇದುವರೆಗೂ ಲಕ್ಷಾಂತರ ಜನರು ವೀಕ್ಷಿಸಿದ್ದು, 35 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.
ರಿಷಭ್ ಮತ್ತು ಊರ್ವಶಿ ಮಧ್ಯದ ಸ್ನೇಹ ಈಗ ಹೇಗಿದೆಯೋ ಗೊತ್ತಿಲ್ಲ, ಆದರೆ ಅಭಿಮಾನಿಗಳು ರಿಷಭ್ ಹೆಸರು ಕೂಗಿದ್ದು ಅವರಿಗೆ ಇಷ್ಟವಾಯಿತು ಎಂಬುದು ಅವರ ರಿಯಾಕ್ಷನ್ ಮೇಲೆಯೇ ಗೊತ್ತಾಗುತ್ತದೆ. ಸ್ಟೈಲ್ ಟ್ರೈನ್ ಫೌಂಡೇಶನ್ ನ ಬ್ರಾಂಡ್ ಅಂಬಾಸಿಡರ್ ಆಗಿರುವ ಇವರು, ಇನ್ನೇನು ಕೆಲವೇ ದಿನಗಳಲ್ಲಿ ಓಟಿಟಿಯಲ್ಲಿ ವೆಬ್ ಸೀರೀಸ್ ನಲ್ಲಿಯೂ ಸಹ ಕಂಡುಬರಲಿದ್ದಾರೆ.
ಆ ವಿಡಿಯೊ ಕೆಳಗಿದೆ ನೋಡಿ…
View this post on Instagram