ನಮಸ್ಕಾರ ವೀಕ್ಷಕರೇ, ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಎಂಟ್ರಿ ಕೊಟ್ಟಿದ್ದ ಉರ್ಫಿ ಜಾವೇದ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹಿಂದಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಓಟಿಟಿ ಸೀಸನ್ ಒಂದರ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದ ಉರ್ಫಿ ಅವರು ತಮ್ಮ ಡ್ರೆಸ್ ಗಳ ಮೂಲಕವೇ ಸಖತ್ ವೈರಲಾಗುತ್ತಾರೆ.
ತಮ್ಮ ವಿಭಿನ್ನವಾದ ಬಟ್ಟೆ ಧರಿಸುವ ಶೈಲಿಗೆ ಅವರು ಸಾಕಷ್ಟು ಬಾರಿ ಟ್ರೋಲ್ ಕೂಡ ಆಗುತ್ತಾರೆ. ಇನ್ನು ಇವರು ಬಿಗ್ ಬಾಸ್ ಓಟಿಟಿ ಸೀಸನ್ ಒಂದಕ್ಕೆ ಬಂದು ಹೋದ ಬಳಿಕ ಇವರಿಗೆ ಅಭಿಮಾನಿಗಳು ಕೂಡ ಅಷ್ಟೇ ಹೆಚ್ಚಿದ್ದರು. ಇನ್ನು ಉರ್ಫಿ ಜಾವೇದ್ ಅವರು ಮಾಧ್ಯಮಗಳಲ್ಲಿ ಸುದ್ದಿಯಾಗುವುದು ಕೂಡ ಹೆಚ್ಚು.
ಇನ್ನು ಅವರು ಧರಿಸಿಕೊಳ್ಳುವ ಬಟ್ಟೆಯ ವಿಚಾರವಾಗಿ ಅವರು ಸಖತ್ ಟ್ರೋಲ್ ಆಗುತ್ತಾ ಇರುತ್ತಾರೆ ಮತ್ತು ಅವರು ಧರಿಸುವ ಬಟ್ಟೆಗಳು ಕೂಡ ಅಂ*ಗಾಂ*ಗಗಳನ್ನು ತೋರಿಸುವ ರೀತಿಯಲ್ಲಿ ಇರುತ್ತದೆ. ಅದು ಎಲ್ಲರನ್ನೂ ಮಾತನಾಡುವಂತೆ ಮಾಡುತ್ತದೆ.
ಇನ್ನು ನಟಿ ಉರ್ಫಿ ಜಾವೇದ್ ತಮ್ಮ ಬಟ್ಟೆಗಳ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿ ಇದ್ದರೂ ಸಹ ಅವರು ಆಗಾಗ ಇದೆ ವಿಷಯಕ್ಕೆ ಸಮಸ್ಯೆಗಳಿಗೆ ಸಹ ಸಿಕ್ಕಿಕೊಳ್ಳುತ್ತಿರುತ್ತಾರೆ. ಇನ್ನು ಇದೀಗ ನಟಿ ಉರ್ಫಿ ಅವರಿಗೆ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಹಾಗಾದರೆ ಏನಿದು ಸುದ್ದಿ, ತಿಳಿಯೋಣ ಬನ್ನಿ..
ನಟಿ ಉರ್ಫಿ ಅವರಿಗೆ ಇದೀಗ ಇದೆ ವಿಷಯಕ್ಕೆ ಮುಂಬೈನಲ್ಲಿ ವಾಸಿಸಲು ಮನೆ ಇಲ್ಲದಂತೆ ಆಗಿದೆ. ಹೌದು ಈ ಕುರಿತು ಸ್ವತಃ ನಟಿ ಉರ್ಫಿ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮಾಡುವ ಮೂಲಕ ಎಲ್ಲರಿಗೂ ಈ ವಿಷಯ ತಿಳಿಸಿದ್ದಾರೆ. ತಾವು ಧರಿಸುವ ವಿಭಿನ್ನವಾದ ಬಟ್ಟೆಗಳೇ ಇಂದು ಉರ್ಫ್ಯೂ ಅವರಿಗೆ ಮುಳ್ಳಾಗುತ್ತಿದೆ.
ನಾನು ಮುಸ್ಲಿಂ ಆಗಿ ಆ ರೀತಿಯ ಬಟ್ಟೆ ಧರಿಸುವುದರಿಂದ ನನಗೆ ಯಾವ ಮುಸಲ್ಮಾನರು ಮನೆ ಕೊಡುತ್ತಿಲ್ಲ. ಇನ್ನು ನಾನು ಮುಸ್ಲಿಂ ಆಗಿರುವುದರಿಂದ ಯಾವ ಹಿಂದುಗಳು ನನಗೆ ಮನೆ ಕೊಡುತ್ತಿಲ್ಲ. ಇನ್ನು ಕೆಲವರು ನನಗೆ ಬರುವ ಬೆದರಿಕೆ ಕರೆಗಳ ಕಾರಣ ಮನೆ ಕೊಡುತ್ತಿಲ್ಲ. ಹೀಗೆ ಹಲವರ ಬಳಿ ಹಲವು ಕಾರಣಗಳಿದೆ.
ಮುಂಬೈನಲ್ಲಿ ನನಗೆ ಮನೆ ದೊರೆಕುವುದು ನಿಜಕ್ಕೂ ಕಷ್ಟವಾಗಿದೆ ಎಂದು ನಟಿ ಉರ್ಫಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡು ತಮ್ಮ ನೋವನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಸದ್ಯ ಈ ವಿಷಯ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇನ್ನು ಈ ವಿಷಯ ಕುರಿತು ಅನೇಕರು ತಮ್ಮ ಅನೇಕ ಅನಿಸಿಕೆಗಳನ್ನು ನೀಡುತ್ತಿದ್ದಾರೆ. ಇನ್ನು ಕೆಲವರು ನಿಮ್ಮ ಈ ಸ್ಥಿತಿಗೆ ನೀವೇ ಕಾರಣ ಎನ್ನುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..