ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವುದರಲ್ಲಿ ಫೇಮಸ್. ಪ್ರತಿದಿನ ಉರ್ಫಿ ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಹೊಸ ಅವತಾರಗಳನ್ನು ನೋಡಲು ಅನೇಕರು ಕಾತರದಿಂದ ಕಾಯುತ್ತಿರುತ್ತಾರೆ. ಈ ಬಾರಿ ತುಂಡುಡುಗೆ ಬದಿಗಿಟ್ಟು ಉರ್ಫಿ ಸೀರೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಪ್ರತಿನಿತ್ಯ ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ಸದಾ ಗಮನ ಸೆಳೆಯುವ ನಟಿ ಉರ್ಫಿ ಇದೀಗ ಮತ್ತೊಂದು ಅವತಾರದಲ್ಲಿ ದರ್ಶನ ನೀಡಿದ್ದಾರೆ. ಉರ್ಫಿಯ ನಾನಾ ಅವತಾರಗಳನ್ನು ನೋಡಲು ಅನೇಕರು ಕಾತರದಿಂದ ಕಾಯುತ್ತಿರುತ್ತಾರೆ. ಈ ಬಾರಿ ಉರ್ಫಿ ಸೀರೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಉರ್ಫಿ ಯಾವಾಗಲು ಬೋಲ್ಡ್ ಬಟ್ಟೆ ಧರಿಸುತ್ತಿದ್ದರು. ಇದೀಗ ಸೀರೆಯಲ್ಲಿ ಮಿಂಚಿದ್ದಾರೆ. ವಿಚಿತ್ರವಾಗಿ ಸೀರೆ ಉಟ್ಟಿರುವ ಉರ್ಫಿ ನೋಡಿ ಹೀಗೂ ಸೀರೆ ಉಡಬಹುದಾ ಎಂದು ಎನ್ನುತ್ತಿದ್ದಾರೆ.
ಉರ್ಫಿ ಸದ್ಯ ತುಂಡುಡುಗೆ ಬದಿಗಿಟ್ಟು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಸೀರೆ ಅವತಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಉರ್ಫಿ ಕ್ಯಾಮರಾ ಮುಂದೆ ಮಾದಕ ಪೋಸ್ ನೀಡಿದ್ದಾರೆ. ಮೈ ಕಾಣಿಸುವ ಹಾಗೆ ಸೀರೆ ಧರಿಸಿರುವ ಉರ್ಫಿಗೆ ಅನೇಕ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಗ್ಲಾಮರ್ ಗೊಂಬೆ ಉರ್ಫಿ ಜಾವೇದ್ ಸಾವಿನ ವದಂತಿ, ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದ್ಯಾಕೆ ಗೊತ್ತಾ….?
ಬಿಗ್ ಬಾಸ್ ಮೂಲಕ ಪರಿಚಯವಾಗಿ ಈಗ ಇಂಟರ್ನೆಟ್ ಸೆನ್ಸೇಷನ್ ಆಗಿರೋ ನಟಿ ಉರ್ಫಿ ಜಾವೇದ್ ಸಾವಿನ ಬಗ್ಗೆ ವದಂತಿಗಳು ಹರಡ್ತಾ ಇವೆ. ಉರ್ಫಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಜಾಲತಾಣಗಳಲ್ಲಿ ಹರಿದಾಡ್ತಾ ಇತ್ತು. ಈ ವಿಚಾರ ಗಮನಕ್ಕೆ ಬರ್ತಿದ್ದಂತೆ ಸುಳ್ಳು ಸುದ್ದಿಯನ್ನು ಹರಡಿದ ನೆಟ್ಟಿಗರನ್ನು ಉರ್ಫಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾವಿನ ವಿಚಾರದಲ್ಲೂ ಸುಳ್ಳು ಸುದ್ದಿ ಹಬ್ಬಿಸ್ತಾ ಇರೋದು ನಿಜಕ್ಕೂ ಭಯಾನಕ ಅಂತಾ ಉರ್ಫಿ ಹೇಳಿದ್ದಾರೆ. ವದಂತಿಗಳು ಎಂಟರ್ಟೈನ್ಮೆಂಟ್ ಉದ್ಯಮದ ಒಂದು ಭಾಗ, ಆದ್ರೆ ಇಂತಹ ಸುಳ್ಳು ವದಂತಿಗಳು ನಿಜಕ್ಕೂ ಅಸಹ್ಯ ಹುಟ್ಟಿಸುತ್ತವೆ. ಇಂತಹ ಸುಳ್ಳು ಸುದ್ದಿಯಿಂದ ನಿಜವಾಗಿಯೂ ಯಾರಿಗಾದರೂ ತೊಂದರೆಯಾಗಬಹುದು ಅಂತಾ ಉರ್ಫಿ ಆಕ್ರೋಶ ಹೊರಹಾಕಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಉರ್ಫಿ ಜಾವೇದ್, ದಪ್ಪನೆಯ ಚೈನ್ ಡ್ರೆಸ್ ಒಂದನ್ನು ಧರಿಸಿದ್ದರು. ಆ ಚೈನ್ ಧರಿಸಿದ್ದರಿಂದ ಕತ್ತಿನ ಮೇಲೆ ಆಕೆಗೆ ಅಲರ್ಜಿಯಾಗಿತ್ತು. ಆ ಫೋಟೋ ನೋಡಿದ ಕೆಲವರು ಉರ್ಫಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ ಎಂಬ ವದಂತಿಯನ್ನು ಹಬ್ಬಿಸಿದ್ದಾರೆ.
ಉರ್ಫಿ ಜಾವೇದ್ ಸಾಕಷ್ಟು ಬೋಲ್ಡ್ ಡ್ರೆಸ್‌ಗಳಲ್ಲಿ ಪ್ರತಿನಿತ್ಯ ಕಾಣಿಸಿಕೊಳ್ತಿದ್ದಾರೆ. ಆಕೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆ ಬೆದರಿಕೆಗಳು ಕೂಡ ಬರುತ್ತಿವೆಯಂತೆ. ಖುದ್ದು ಆಕೆಯೇ ಇದನ್ನು ಬಹಿರಂಗಪಡಿಸಿದ್ದಾರೆ. 2022ರಲ್ಲೇ ಉರ್ಫಿ ಜಾವೇದ್ ಸಾವು ಎಂದು ಕಮೆಂಟ್‌ನಲ್ಲಿ ಬರೆಯಲಾಗಿದೆ.