uppi-dance

ಯಂಗ್ ನಟಿ ಜೊತೆ ಸ್ಟೆಪ್ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ! ವಿಡಿಯೋ ಆಯ್ತು ನೋಡಿ ವೈರಲ್.

Entertainment/ಮನರಂಜನೆ

ರಿಯಲ್ ಸ್ಟಾರ್ ಉಪೇಂದ್ರ (Upendra) ತಮ್ಮ ನಿರ್ದೇಶನ ಹಾಗೂ ನಟನಾಶೈಲಿಯ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವಂತಹ ನಟನಾಗಿದ್ದು ಅದರಲ್ಲಿ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಕನ್ನಡ ನಟರ ಸಾಲಿನಲ್ಲಿ ಮೊದಲನೇಯವರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಅವರು ನಾಯಕ ನಟನಾಗಿ ನಟಿಸಿರುವ ಕಬ್ಜಾ (Kabzaa) ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

ಅದರಲ್ಲಿ ವಿಶೇಷವಾಗಿ ಕಬ್ಜಾ ಸಿನಿಮಾದ ಚುಮು ಚುಮು ಚಳಿ ಚಳಿ ಎನ್ನುವ ಐಟಂ ಸಾಂಗ್ ಮಾತ್ರ ಚಿಂದಿಯಾಗಿ ಮೂಡಿಬಂದಿತ್ತು. ಇದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ತಾನ್ಯ ಹೋಪ್ (Tanya Hope) ಇಬ್ಬರೂ ಕೂಡ ಮೈಚಳಿ ಬಿಟ್ಟು ಕುಣಿದಿದ್ದರು. ಈ ಹಾಡು ಯೂಟ್ಯೂಬ್ ನಲ್ಲಿ ಕೂಡ ಮಿಲಿಯನ್ಗಟ್ಟಲೆ ವೀಕ್ಷಣೆಗಳನ್ನು ಪಡೆದು ಸೂಪರ್ ಹಿಟ್ ಆಗಿತ್ತು. ಕಲೆಕ್ಷನ್ ವಿಚಾರದಲ್ಲಿ ಕೂಡ ಈ ಸಿನಿಮಾ ಸಾಕಷ್ಟು ದೊಡ್ಡ ಮಟ್ಟದ ರೆಕಾರ್ಡ್ ಅನ್ನು ಕ್ರಿಯೇಟ್ ಮಾಡಿ ಪಾರಭಾಷಿಗರೀ ಕೂಡ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿತ್ತು. ಕಬ್ಜಾ ಸಿನಿಮಾದ ಗೆಲುವಿನ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದರ ಕುರಿತಂತೆ ಪ್ರತಿಯೊಬ್ಬರೂ ಕೂಡ ಕಾತರರಾಗಿದ್ದಾರೆ.

ಇನ್ನು ಇತ್ತೀಚಿಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಅವರು ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್ ಆಗಿರುವಂತಹ ನಿಯಾ ಕೃಷ್ಣ (Niyah Krishna) ಅವರ ಜೊತೆಗೆ ಇದೇ ಹಾಡಿಗೆ ಸ್ಟೆಪ್ ಹಾಕಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅವರು ಶೇರ್ ಮಾಡಿಕೊಂಡಿದ್ದು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕೂಡ ಉಪೇಂದ್ರ ಅವರ ಹಾವಳಿ ಈ ಹಾಡಿನ ಮೂಲಕ ಜೋರಾಗುತ್ತಿದೆ ಎಂಬುದಾಗಿ ನೆಟ್ಟಿದರು ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಹಾಕಿರುವ ಸ್ಟೆಪ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

 

View this post on Instagram

 

A post shared by Niyah Krishna (@niyah_krishna)

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.